Jungle safari: ಪಣಸೋಲಿ ಅರಣ್ಯ ಪ್ರದೇಶದಲ್ಲಿ ಬೊಲೆರೊ ಕ್ಯಾಂಪರ್‌ ಪಲ್ಟಿ, ಐವರಿಗೆ ಗಾಯ

By Kannadaprabha NewsFirst Published May 21, 2023, 5:28 AM IST
Highlights

ಜಂಗಲ್‌ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಹಿಂದಿರುಗಿ ಬರುತ್ತಿದ್ದ ಬೊಲೆರೊ ಕ್ಯಾಂಪರ್‌ ವಾಹನವೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಐವರಿಗೆ ಗಾಯವಾದ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣೆಯ ವ್ಯಾಪ್ತಿಯ ಫಣಸೋಲಿ ಅರಣ್ಯ ಪ್ರದೇಶದಲ್ಲಿರುವ ಬೆಥಗಿ ಘಾಟ್‌ ಹತ್ತಿರ ಶನಿವಾರ ನಡೆದಿದೆ.

ದಾಂಡೇಲಿ  (ಮೇ.21) : ಜಂಗಲ್‌ ಸಫಾರಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಹಿಂದಿರುಗಿ ಬರುತ್ತಿದ್ದ ಬೊಲೆರೊ ಕ್ಯಾಂಪರ್‌ ವಾಹನವೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಐವರಿಗೆ ಗಾಯವಾದ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣೆಯ ವ್ಯಾಪ್ತಿಯ ಫಣಸೋಲಿ ಅರಣ್ಯ ಪ್ರದೇಶದಲ್ಲಿರುವ ಬೆಥಗಿ ಘಾಟ್‌ ಹತ್ತಿರ ಶನಿವಾರ ನಡೆದಿದೆ.

ಬೊಲೆರೊ ಕ್ಯಾಂಪರ್‌ ವಾಹನ(Bolero Camper Vehicle)ದಲ್ಲಿನ ಕೋಲಾರದ ಒಂದೇ ಕುಟುಂಬಕ್ಕೆ ಸೇರಿದ ಜಾನ್ಸಿ ಶ್ರೀನಿವಾಸ(35) ಶ್ರೀನಿವಾಸ ಭದ್ರಾಚಾರಿ(40) ವೈಷ್ಣವಿ ದರ್ಶನ್‌ ಕೆ. (35) ಋುತ್ವಿಕ್‌ ಭದ್ರ ಎಸ್‌. (4), ತೌಶಿಕ್‌ ಭದ್ರ ಎಸ್‌.(13) ಘಟನೆಯಲ್ಲಿ ಗಾಯಗೊಂಡಿದ್ದಾರೆ. ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಋುತ್ವಿಕ್‌ ಭದ್ರ ಎಸ್‌. ಎಂಬವರನ್ನು ಬಿಟ್ಟು ಉಳಿದ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ.

Wildlife: ಒಂದು ಕಡೆ ಚಿರತೆ, ಇನ್ನೊಂದಡೆ ಕಾಡಾನೆ ದಾಳಿ: ಆತಂಕದಲ್ಲಿ ಕಾಡಂಚಿನ ಗ್ರಾಮಗಳು

ಕೋಲಾರದಿಂದ ಪ್ರವಾಸಕ್ಕೆಂದು ಬಂದಿದ್ದ ಆರು ಜನರ ತಂಡವೊಂದು ಫಣಸೋಲಿಯ ಜಂಗಲ್‌ ಸಫಾರಿ ಪಾಯಿಂಟ್‌(Jungle Safari Point of Phanasoli)ನಿಂದ ಜಂಗಲ್‌ ಸಫಾರಿಗೆ ಕೆಎ:35, ಡಿ:3105 ಸಂಖ್ಯೆಯ ಬೊಲೆರೊ ಕ್ಯಾಂಪರ್‌ ವಾಹನದ ಮೂಲಕ ತೆರಳಿದ್ದರು. ಜಂಗಲ್‌ ಸಫಾರಿ ಮುಗಿಸಿ ಹಿಂದಿರುಗಿ ಬರುತ್ತಿರುವಾಗ ಬೆಥಗಿ ಘಾಟ್‌ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಕ್ಯಾಂಪರ್‌ ಪಲ್ಟಿಯಾಗಿದೆ.

ದಾಂಡೇಲಿ ಗ್ರಾಮೀಣ ಪೊಲೀಸ್‌ ಠಾಣೆ(Dandeli rurral police station)ಯ ಪಿಎಸ್‌ಐ ಕೃಷ್ಣೆಗೌಡ ಮತ್ತು ಪೊಲೀಸ ಸಿಬ್ಬಂದಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅರಣ್ಯ ಇಲಾಖೆಯ ಫಣಸೋಲಿ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿ ಸೇರಿದಂತೆ ವನ್ಯಜೀವಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಉತ್ತರ ಕನ್ನಡ: ಯಲ್ಲಾಪುರ ಕ್ಷೇತ್ರ ಅಭಿವೃದ್ಧಿ ಕಾರ್ಯವೇ ಒಂದು ಸವಾಲು !

click me!