Siddaramaiah Oath Ceremony: ಬಡವರಿಗೆ ಉಚಿತ ಪುಡ್ ಕಿಟ್ ವಿತರಿಸಿ ಸಂಭ್ರಮಾಚರಣೆ

Published : May 20, 2023, 09:26 PM IST
Siddaramaiah Oath Ceremony:  ಬಡವರಿಗೆ ಉಚಿತ ಪುಡ್ ಕಿಟ್ ವಿತರಿಸಿ ಸಂಭ್ರಮಾಚರಣೆ

ಸಾರಾಂಶ

2ನೇ ಭಾರೀ ಗೆ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ, ಕಾಫಿನಾಡಿನಲ್ಲಿ ಬಡವರಿಗೆ ಉಚಿತ ಪುಡ್ ಕಿಟ್ ವಿತರಣೆ. ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ರಾಜ್ಯ ಸಂಚಾಲಕ ಸಿ ಎನ್ ಅಕ್ಮಲ್ ರಿಂದ ವಿತರಣೆ 

ವರದಿ : ಆಲ್ದೂರು ಕಿರಣ್ ಸುವರ್ಣ ನ್ಯೂಸ್ ಏಷ್ಯಾನೆಟ್  

ಚಿಕ್ಕಮಗಳೂರು (ಮೇ.20): ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಪ್ರಥಮ ಬಾರಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ ಸಂಭ್ರಮ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ.  ನಗರದ ಷರೀಪ್ಗಲ್ಲಿಯ ನಿವಾಸಿಗಳಿಗೆ ಉಚಿತ ದಿನಸಿ ಕಿಟ್ ವಿತರಿಸಿ ಸಂಭ್ರಮ ಆಚರಣೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡಿದ್ದಾರೆ. 

ಮಾಜಿ ಶಾಸಕ ಸಿ ಟಿ  ರವಿ ವಿರುದ್ದ ಕಿಡಿ: 
ಕಾಂಗ್ರೆಸ್ ಪಕ್ಷದ ಕಿಸಾನ್ ಘಟಕದ ರಾಜ್ಯ ಸಂಚಾಲಕ ಸಿ ಎನ್ ಅಕ್ಮಲ್ ನೇತೃತ್ವದಲ್ಲಿ  ವಿತರಣೆ ಮಾಡಿ ಸಂತಸವನ್ನು ಕಾಂಗ್ರೆಸ್ ಕಾರ್ಯಕರ್ತರು ಹೊರಹಾಕಿದ್ದಾರೆ. ಕೇವಲ ರಂಜಾನ್ ತಿಂಗಳಲ್ಲಿ ಮಾತ್ರ ಜನಸಾಮಾನ್ಯರಿಗೆ ದಿನಸಿ ಕಿಟ್ನ್ನು ವಿತರಿಸದೇ ಎಲ್ಲಾ ಸಮಯದಲ್ಲೂ ಸ್ವಲ್ಪಮಟ್ಟಿನ ಸಹಾಯವನ್ನು ಮಾಡಲಾಗುತ್ತಿದೆ. ಇದರಿಂದ ಸಂಕಷ್ಟದಲ್ಲಿರುವ ಕೆಲವರಿಗೆ ಸಹಾಯವಾಗಲಿದೆ ಎಂದರು.

ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ 'ಖಾಸಗಿ ಫೋಟೋಸ್‌' ವೈರಲ್‌!

ರಾವಣನಿಂದ ಸೀತೆ ವನವಾಸ ಮುಗಿಸಿದಂತೆ, ಕ್ಷೇತ್ರದ ಜನತೆ ಇಪ್ಪತ್ತು ವರ್ಷಗಳ ಬಿಜೆಪಿ ಸರ್ಕಾರದ ದುರಾಡಳಿತ ವನವಾಸವನ್ನು ಮುಗಿಸಿ ಸದೃಢ ಕಾಂಗ್ರೆಸ್ ಸರ್ಕಾರ ರಚನೆಗೆ ನ್ಯಾಯಸಮ್ಮತವಾಗಿ ಬೆಂಬಲಿಸಿರುವುದು ಅತ್ಯಂತ ಖುಷಿಯ ಸಂಗತಿ ಎಂದು ಮಾಜಿ ಶಾಸಕ ಸಿ.ಟಿ ರವಿ ವಿರುದ್ದ ಕಿಡಿ ಕಾರಿದರು. ಕ್ಷೇತ್ರ ಸೇರಿದಂತೆ ವಿವಿದೆಡೆ ಧರ್ಮ ಒಡೆಯುವ ಕೆಲಸ ಮಾಡುವವರ ಗತಿ ಏನೆಂಬುದನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜನತೆ ಮಾಜಿ ಶಾಸಕರಿಗೆ ಸ್ಪಷ್ಟವಾಗಿ ತೋರ್ಪಡಿಸಿದ್ದಾರೆ. ಜೊತೆಗೆ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವ ಮೂಲಕ ಬಹುಮತದೊಂದಿಗೆ ಅಧಿಕಾರ ನೀಡಿರುವುದು  ಖುಷಿಯ ಸಂಗತಿ ಎಂದು ತಿಳಿಸಿದರು.

ಮೌಢ್ಯ ತೊರೆದು ಚಾಮರಾಜನಗರ ಜಿಲ್ಲೆ ಉದ್ಘಾಟಿಸಿದ್ದ ಸಿದ್ದರಾಮಯ್ಯ

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್