ಮೀನು ಪ್ರಿಯರಿಗೆ ಸಿಹಿಸುದ್ದಿ: ಸಾಂಪ್ರದಾಯಿಕ ಮೀನುಗಾರಿಕೆಗೆ ಕಡಲಿಗಿಳಿದ ನಾಡದೋಣಿಗಳು

By Sathish Kumar KHFirst Published Jul 15, 2023, 9:49 PM IST
Highlights

ಈ ಬಾರಿ ಮುಂಗಾರು ಕೈ ಕೊಟ್ಟ ಕಾರಣ ನಾಡದೋಣಿ ಮೀನುಗಾರಿಕೆ ತಡವಾಗಿದೆ. ವ್ಯಾಪಕವಾದ ಮಳೆಯಾಗಿ ತೂಫಾನು ಬಂದರೆ ಮಾತ್ರ ನಾಡದೋಣಿಗಳಿಗೆ ಮೀನು ಲಭ್ಯವಾಗುತ್ತವೆ.

ಉಡುಪಿ (ಜು.15): ಕೊನೆಗೂ ಪಶ್ಚಿಮ ಕರಾವಳಿಯಲ್ಲಿ ನಾಡ ದೋಣಿಗಳು ಕಡಲಿಗೆ ಇಳಿದಿವೆ. ಜೂನ್ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗಬೇಕಾಗಿದ್ದ ಈ ಸಾಂಪ್ರದಾಯಿಕ ಮೀನುಗಾರಿಕೆ, ಸರಿಯಾಗಿ ಒಂದು ತಿಂಗಳಷ್ಟು ತಡವಾಗಿ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮೀನು ಮಾಂಸ ಸೇವನೆ ಮಾಡುವವರಿಗೆ ವಿವಿಧ ಜಾತಿಯ ಮೀನುಗಳು ಲಭ್ಯವಾಗಲಿದ್ದು, ದರವೂ ಕೂಡ ತಗ್ಗಲಿದೆ. 

ಈ ಬಾರಿ ಮುಂಗಾರು ಕೈ ಕೊಟ್ಟ ಕಾರಣ ನಾಡದೋಣಿ ಮೀನುಗಾರಿಕೆ ತಡವಾಗಿದೆ. ವ್ಯಾಪಕವಾದ ಮಳೆಯಾಗಿ ತೂಫಾನು ಬಂದರೆ ಮಾತ್ರ ನಾಡದೋಣಿಗಳಿಗೆ ಮೀನು ಲಭ್ಯವಾಗುತ್ತವೆ. ಕಡಲು ಅಡಿಮೇಲಾದರೆ ಸಾಂಪ್ರದಾಯಿಕ ದೋಣಿಗಳ ಬಲೆಗೆ ಮೀನು ಬೀಳುತ್ತವೆ. ತೀರ ಪ್ರದೇಶದಲ್ಲಿ ಈ ಮೀನುಗಾರಿಕೆ ನಡೆಯುವುದರಿಂದ, ಸಂಪೂರ್ಣವಾಗಿ ತೂಫಾನಿನ ಮೇಲೆ ಈ ಪಾರಂಪರಿಕ ಮೀನುಗಾರಿಕೆ ಅವಲಂಭಿತವಾಗಿದೆ. ಸಮುದ್ರದ ನೀರು ಅಡಿಮೇಲಾದಷ್ಟು ಮೀನುಗಾರಿಕೆಗೆ ಹೆಚ್ಚಿನ ಅನುಕೂಲ ಆಗುತ್ತದೆ. 

Latest Videos

ತರಕಾರಿ ಬಳಿಕ ನಾನ್ ವೆಜ್ ಪ್ರಿಯರಿಗೆ ಶಾಕ್: ಮೀನುಗಳ ಬೆಲೆ ಏರಿಕೆ

ಬಿಪೋರ್‌ಜಾಯ್‌ ಚಂಡಮಾರುತದಿಂದ ವಿಳಂಬ: ಈ ಬಾರಿ ತಡವಾಗಿ ಬಿಪೋರ್‌ಜಾಯ್‌ ​​​​​​ಚಂಡಮಾರುತ ಬಂತು. ಬಳಿಕ ಒಂದು ವಾರದ ನಂತರ ಮುಂಗಾರು ಕರಾವಳಿಯ ಮೂಲಕ ಎಂಟ್ರಿ ಕೊಟ್ಟಿತು. ಈ ವೇಳೆ ಸತತ ಒಂದು ವಾರಗಳ ಕಾಲ ಮಳೆ ಸುರಿದು ಕಡಲು ಹದವಾದ ನಂತರ ನಾಡ ದೋಣಿಗಳು ಮೀನುಗಾರಿಕೆ ನಡೆಸಲು ಸಿದ್ಧವಾಗಿವೆ. ಮಳೆಗಾಲದ ಈ ಮೀನುಗಾರಿಕೆ ಒಂದು ಸಾಹಸಮಯ ಯಾತ್ರೆ. ಅಲೆಗಳ ಆರ್ಭಟವನ್ನು ಸೀಳಿಕೊಂಡು, ಸಣ್ಣ ಇಂಜಿನ್ ಬಳಸಿದ ಪುಟ್ಟ ದೋಣಿಗಳಲ್ಲಿ ಮೀನುಗಾರಿಕೆ ನಡೆಸಬೇಕು. ಯಾವುದೇ ಧನಿಕ -ಯಜಮಾನರು ನಡೆಸುವ ಮೀನುಗಾರಿಕೆ ಇದಲ್ಲ. ಬಡ ಕಾರ್ಮಿಕರೇ ಗುಂಪು ಕಟ್ಟಿಕೊಂಡು ಮಳೆಗಾಲದಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಈ ಬಾರಿ ಒಂದು ತಿಂಗಳ ಮೀನುಗಾರಿಕೆ ನಷ್ಟವಾದ ಕಾರಣ, ನಾಡದೋಣಿ ಮೀನುಗಾರರು ಸಂಕಷ್ಟದಲ್ಲಿದ್ದಾರೆ.

ಬಡ ಕಾರ್ಮಿಕರ ಮೀನುಗಾರಿಕೆ:  ಆಳಸಮುದ್ರ ಮೀನುಗಾರಿಕೆ ಆರಂಭವಾದರೆ, ಮತ್ತೆ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಸಾಧ್ಯವಿಲ್ಲ. ಇನ್ನು ಕೇವಲ ಮೂರು ವಾರಗಳು ಮಾತ್ರ ಬಾಕಿ ಇದೆ. ಹಾಗಾಗಿ ತರಾತುರಿಯಲ್ಲಿ ಮೀನುಗಾರಿಕೆ ನಡೆಸಬೇಕಾಗಿದೆ. ವ್ಯಾಪಕ ಮಳೆಯಾದರೆ ಅನುಕೂಲವೇನೋ ನಿಜ, ಆದರೆ ನಿರಂತರ ಮಳೆಯಾದರೆ ನಾಡದೋಣಿಗಳು ಕಡಲಿಗೆ ಇಳಿಯಲು ಸಾಧ್ಯವಿಲ್ಲ. ಮತ್ತೊಮ್ಮೆ ಭಾರಿ ಮಳೆ ಆರಂಭವಾಗುವ ಮುನ್ನ ಬಡ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಗೆ ಮುಂದಾಗಿದ್ದಾರೆ. ಅನೇಕ ಮೀನುಗಾರರು ಪ್ರತಿಕೂಲ ಹವಾಮಾನದಿಂದ  ವಾಪಾಸಾಗುತ್ತಿದ್ದಾರೆ. ಹಿಂದೆಲ್ಲ ಸಾಂಪ್ರದಾಯಿಕ ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ ಇತ್ತು. ಆದರೆ ಆಳಸಮುದ್ರ ಬೋಟುಗಳ ಸಂಖ್ಯೆ ಹೆಚ್ಚಿದ ಮೇಲೆ, ಸಾಂಪ್ರದಾಯಿಕ ಮೀನುಗಾರಿಕೆ ನಶಿಸುತ್ತಿದೆ.

ಅನ್ನಭಾಗ್ಯ ಯೋಜನೆ ಹಣಕ್ಕಾಗಿ ಬ್ಯಾಂಕ್‌ ಖಾತೆ ತೆರೆಯಲು ಶಿಬಿರ ಆಯೋಜನೆ

ಪಡಿತರ ಚೀಟಿದಾರರ ಬ್ಯಾಂಕ್‌ ಖಾತೆಗಾಗಿ ಶಿಬಿರ ಆಯೋಜನೆ: ಉಡುಪಿ (ಜು.15): ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಎಲ್ಲ ಪಡಿತರ ಕುಟುಂಬಗಳಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಉಳಿದ 5 ಕೆಜಿ. ಅಕ್ಕಿಯ ಬದಲಾಗಿ 170 ರೂ. ಹಣವನ್ನು ಬ್ಯಾಂಕ್‌ ಖಾತೆಗೆ ಸರ್ಕಾರವೇ ನೇರವಾಗಿ ವರ್ಗಾವಣೆ ಮಾಡುತ್ತಿದೆ. ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ 170 ರೂ. ಹಣವನ್ನು ವರ್ಗಾಯಿಸಬೇಕಾಗಿರುತ್ತದೆ.  ಆದ್ದರಿಂದ ಎಲ್ಲ ಪಡಿತರ ಚೀಟಿದಾರರು ಬ್ಯಾಂಕ್‌ ಖಾತೆ ಹೊಂದುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತದಿಂದ ಇಂಡಿಯನ್‌ ಪೋಸ್ಟಲ್‌ ಪೇಮೆಂಟ್‌ ಬ್ಯಾಂಕ್‌ ನೆರವಿನಿಂದ ಬ್ಯಾಂಕ್‌ ಖಾತೆ ತೆರೆಯಲು ತಾಲೂಕುವಾರು ಶಿಬಿರ ಆಯೋಜನೆ ಮಾಡಲಾಗುತ್ತಿದೆ.

click me!