ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ : ಎಲ್ಲಿ? ಯಾವಾಗ..?

Published : Nov 14, 2023, 09:50 AM IST
 ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ : ಎಲ್ಲಿ? ಯಾವಾಗ..?

ಸಾರಾಂಶ

ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್ ಆರ್ ಐ ಒಕ್ಕಲಿಗರ ಬ್ರಿಗೇಡ್ ಸಂಯುಕ್ತ ಆಶ್ರಯದಲ್ಲಿ 19ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಹೆಬ್ಬಾಳ ಕೈಗಾರಿಕಾ ವಲಯದ ಬಿಜಿಎಸ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಂಗಣದಲ್ಲಿ ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ತಿಳಿಸಿದರು.

 ಮೈಸೂರು :  ಒಕ್ಕಲಿಗ ಯುವ ಬ್ರಿಗೇಡ್ ಮತ್ತು ಎನ್ ಆರ್ ಐ ಒಕ್ಕಲಿಗರ ಬ್ರಿಗೇಡ್ ಸಂಯುಕ್ತ ಆಶ್ರಯದಲ್ಲಿ 19ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಹೆಬ್ಬಾಳ ಕೈಗಾರಿಕಾ ವಲಯದ ಬಿಜಿಎಸ್ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭಾಂಗಣದಲ್ಲಿ ಅನ್ನದಾತರ ಮಕ್ಕಳಿಗಾಗಿ ಉದ್ಯೋಗ ಮೇಳ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ತಿಳಿಸಿದರು.

ನಮ್ಮ ಸಂಸ್ಥೆ ವರ್ಷಕ್ಕೆ ಎರಡು ಸಾವಿರ ಉದ್ಯೋಗ ಹಾಗೂ 150 ಮಕ್ಕಳಿಗೆ ಶಿಕ್ಷಣದ ಜವಾಬ್ದಾರಿ ಹೊತ್ತಿದೆ. ಈ ಉದ್ಯೋಗ ಮೇಳದಲ್ಲಿ 60 ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ನಾಲ್ಕು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸುವ ಅವಕಾಶವಿದೆ. ಇದು ಉಚಿತ ಕಾರ್ಯಕ್ರಮವಾಗಿದೆ. ಆಸಕ್ತರು ಸಂಬಂಧಪಟ್ಟ ದಾಖಲೆ ತರಬೇಕು ಎಂದು ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಉತ್ತೀರ್ಣ ಅಥವಾ ಅನುತ್ತೀರ್ಣ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಮೊದಲದ ವಿದ್ಯಾರ್ಹತೆಯುಳ್ಳವರು ಪಾಲ್ಗೊಳ್ಳಬಹುದು. ಈ ಉದ್ಯೋಗ ಮೇಳದಲ್ಲಿ ಪ್ರಬೋದಿತ, ರಿಲಯನ್ಸ್ ಸ್ಮಾರ್ಟ್, ಜೆ.ಕೆ. ಟೈಯರ್ಸ್, ಟ್ರಿಟಾನ್, ಸಬ್ ವೇ, ಶಿ ಕಾಮರ್ಸ್, ಮ್ಯಾನ್ ಪವರ್ ಗ್ರೂಪ್, ಬಕಾರ್ಡಿ ಇಂಡಿಯಾ, ಜಿಆರ್ಎಸ್, ಬೀರಾ, ಎಲ್ಸಿಬಿ, ವಿದ್ಯಾಂ, ರುಚಾ, ರಿಶಿ ಎಫ್ಐಬಿಸಿ ಸೇರಿದಂತೆ ಹಲವು ಕಂಪನಿಗಳು ಪಾಲ್ಗೊಳ್ಳುತ್ತಿವೆ.

ಪ್ರಮುಖವಾಗಿ ಹೌಸ್ ಕೀಪಿಂಗ್, ಸೇಲ್ಸ್ ಬಾಯ್, ಕಚೇರಿ ಸಹಾಯಕರು, ಚಾಲಕರು, ಸೆಕ್ಯೂರಿಟಿ ಸರ್ವೀರಸ್, ಟಿಡಿಪಿ, ಶಿಕ್ಷಕರು, ಮಾರುಕಟ್ಟೆ ಕಾರ್ಯ ನಿರ್ವಹಣೆ, ಕೌಂಟರ್ ಸೇಲ್ಸ್, ಇನ್ಶೂರೆನ್ಸ್, ಆಡಳಿತ, ಕೆಪಿಒ, ಬಿಪಿಒ ಮುಂತಾದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಉದ್ಯೋಗಾವಕಾಶ ದೊರಕಲಿದೆ.

ಉದ್ಘಾಟನಾ ಸಮಾರಂಭ: ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭ ಭಾನುವಾರ ಬೆಳಿಗ್ಗೆ 10 ಕ್ಕೆ ನಡೆಯಲಿದ್ದು ಆದಿಚುಂಚನಗಿರಿ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್‌, ಆದಿಚುಂಚನಗಿರಿ ಶಾಖಾಮಠದ ಗೌರವ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ ಉಪಸ್ಥಿತರಿರುವರು. ರಿಯಲ್‌ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಎಚ್‌. ಸಿ. ಕಿಶೋರ್‌ಚಂದ್ರ ಅಧ್ಯಕ್ಷತೆ ವಹಿಸುವರು. ಕಿದ್ವಾಯಿ ಮೆಮೋರಿಯಲ್ ಇನ್ಸ್‌ಟಿಟ್ಯೂಟ್‌ ಆಫ್ ಆಂಕೋಲಾಜಿಯ ಮಾಜಿ ನಿರ್ದೇಶಕ ಡಾ. ಸಿ. ರಾಮಚಂದ್ರ ಉದ್ಘಾಟಿಸುವರು, ಕೇಂದ್ರದ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮುಖ್ಯ ಸಲಹೆಗಾರ ಅಭಿಜಿತ್‌ ಮುಖ್ಯ ಅತಿಥಿಗಳಾಗಿರುವರು, ವಿಜಯವಾಣಿ ಮುಖ್ಯ ಸಂಪಾದಕ ಚನ್ನೇಗೌಡ ಮತ್ತಿತರರು ಪಾಲ್ಗೊಳ್ಳುವರು.

ಹೆಚ್ಚಿನ ಮಾಹಿತಿಗೆ ಮೋಹನ್‌ ಮೊ. 96865 64192, ರವಿಚಂದ್ರ..ಮೊ. 98869 43810, ಕಿರಣಕುಮಾರ್‌.. ಮೊ.8660569173 ಸಂಪರ್ಕಿಸಬಹುದು.

PREV
Read more Articles on
click me!

Recommended Stories

ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ