ಸಾಲ ಮಾಡಿ ಬೆಳೆದಿದ್ದ ರಾಗಿ ತೆನೆ ತಿಂದು ತೇಗಿದ ಕಾಡು ಹಂದಿಗಳು: ರೈತರ ಕಣ್ಣೀರು

By Govindaraj S  |  First Published Nov 13, 2023, 9:03 PM IST

ಮೊದಲೇ ಮಳೆ ಬೀಳದೇ ಬರದಿಂದ ಕಂಗಾಲಿರುವ ರೈತನಿಗೆ ಕಾಡು ಪ್ರಾಣಿಗಳ ಹಾವಳಿ ನಿದ್ದೆಗೆಡಿಸಿದೆ. ಮಳೆ ಇಲ್ಲದಿದ್ದರೂ ಕಷ್ಟ ಪಟ್ಟು ಬೆಳೆದ ಬೆಳೆಯನ್ನ ಕಾಡುಪ್ರಾಣಿಗಳು ನಾಶಪಡಿಸಿರೋದು ರೈತರಿಗೆ ನುಂಗಲಾರದ ತುತ್ತಾಗಿದೆ. 


ವರದಿ: ಜಗದೀಶ್ ಏಷ್ಯಾನೆಟ್, ಸುವರ್ಣನ್ಯೂಸ್, ರಾಮನಗರ

ರಾಮನಗರ (ನ.13): ಮೊದಲೇ ಮಳೆ ಬೀಳದೇ ಬರದಿಂದ ಕಂಗಾಲಿರುವ ರೈತನಿಗೆ ಕಾಡು ಪ್ರಾಣಿಗಳ ಹಾವಳಿ ನಿದ್ದೆಗೆಡಿಸಿದೆ. ಮಳೆ ಇಲ್ಲದಿದ್ದರೂ ಕಷ್ಟ ಪಟ್ಟು ಬೆಳೆದ ಬೆಳೆಯನ್ನ ಕಾಡುಪ್ರಾಣಿಗಳು ನಾಶಪಡಿಸಿರೋದು ರೈತರಿಗೆ ನುಂಗಲಾರದ ತುತ್ತಾಗಿದೆ. ಬರಗಾಲದಲ್ಲಿ ಚಿಗುರಿದ್ದ ರಾಗಿ ಬಳೆ ಕಾಡುಹಂದಿಗಳ ಪಾಲಾಗಿದ್ದು ರೈತರ ಕಣ್ಣೀರಿಗೆ ಕಾರಣವಾಗಿದೆ. 

Tap to resize

Latest Videos

ಬರಗಾಲದಲ್ಲಿ ಚಿಗುರಿದ್ದ ರಾಗಿ ತೆನೆ ಕಾಡುಹಂದಿಗಳ ಪಾಲು: ರೇಷ್ಮೆ ನಾಡು ರಾಮನಗರದಲ್ಲಿ ಒಂದೆಡೆ ಮಳೆ ಕೊರತೆಯಿಂದ ಬರಗಾಲ ಆವರಿದ್ರೆ, ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ ರೈತರ ನಿದ್ದೆಗೆಡಿಸಿದೆ. ರಾಮನಗರ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ಜೊತೆಗೆ ಇದೀಗ ಕಾಡು ಹಂದಿಗಳ ಕಾಟ ಮಿತಿಮೀರಿದೆ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ತುಂಬೇನಹಳ್ಳಿಯಲ್ಲಿ ಕೊಯ್ಲಿಗೆ ಬಂದಿದ್ದ ರಾಗಿ ಫಸಲನ್ನ ಕಾಡುಹಂದಿಗಳು ತಿಂದುಹಾಕಿವೆ.

ರಾಮನಗರದಲ್ಲಿ ಒನಕೆ ಓಬವ್ವ ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಇಕ್ಬಾಲ್ ಹುಸೇನ್

ಪರಿಹಾರಕ್ಕೆ ಅರಣ್ಯ ಕಚೇರಿ ಮೆಟ್ಟಿಲೇರಿದ ರೈತ ಕುಟುಂಬ: ಗ್ರಾಮದ ತುಂಬೇನಹಳ್ಳಿಯ ರೈತ ರಾಮಯ್ಯ ತಮ್ಮ ಒಂದುವರೆ ಎಕರೆಯಲ್ಲಿ ಬೆಳೆದಿದ್ದ ರಾಗಿ ಕಾಡುಹಂದಿಗಳಿಂದ ಸಂಪೂರ್ಣ ನಾಶವಾಗಿದೆ. ರೈತ ರಾಮಯ್ಯ ಬೆಳೆ ರಕ್ಷಿಸಿಕೊಳ್ಳಲಾಗದೇ ಲಕ್ಷಾಂತರ ರೂಪಾಯಿ‌ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕಾಡುಹಂದಿಗಳ ಕಾಟ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಸೂಕ್ತ ಪರಿಹಾರ ನೀಡವಂತೆ ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 

ಇನ್ನೂ ತುಂಬೇನಹಳ್ಳಿಯ ಒಂದು ಎಕರೆ ತೋಟದಲ್ಲಿ ಸಾಗುವಳಿ ಭೂಮಿಯಲ್ಲಿ ರಾಗಿ ಬೆಳೆದಿದ್ದ ರಾಮಯ್ಯ ಬರಗಾಲದಲ್ಲೂ ರಾಗಿ‌ ತೆನೆ ಮೂಡಿದಕ್ಕೆ ಬಹಳ‌ ಖಷಿಯಾಗುದ್ರು. ಆದರೆ ಅವರ ಹೊಲಕ್ಕೆ ನುಗ್ಗಿದ್ದ ಕಾಡಂದಿಗಳ ಗುಂಪು ಒಂದು ತೆನೆಯೂ ಬಿಡದೆ ಎಲ್ಲವನ್ನೂ ತಿಂದು ಹಾಕಿದೆ. ನನ್ನ ಮಗ ಅದೆಲ್ಲಿ ಸಾಲ ಮಾಡಿ ತಂದು ಹೊಲ‌ ಬಿತ್ತಿದ್ನೋ ಈಗ ಉಪವಾಸ ಬೀಳೋ ಪರಿಸ್ಥಿತಿ ಬಂದಿದೆ ಅಂತ ರಾಮಯ್ಯ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ. 

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ತಮ್ಮ ಹೊಲಗದ್ದೆಗಳಿಗೆ ಪದೇ ಪದೇ ಕಾಡಂದಿಗಳ ಬರುತ್ತಿದ್ದು ಕಾಡು ಮೃಗಗಳ ಕಾಟ‌ ಹೆಚ್ಚಾಗಿದೆ ಅಂತ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡ್ರೂ ಅರಣ್ಯಾಧಿಕಾರಿಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ,‌ ಹುಲಿಯುಗುರು ವಿಚಾರಕ್ಕೆ ಇಡೀ ರಾಜ್ಯಾಂದ್ಯಂತ ಕಾರ್ಯಾಚರಣೆ ಮಾಡಿದ ಅಧಿಕಾರಿಗಳು ರೈತರ ಗೋಳು ಯಾಕೆ ಕೇಳುತ್ತಿಲ್ಲ ಅಂತ ರೈತರು ಪ್ರಶ್ನೆ ಮಾಡಿದ್ದಾರೆ.

click me!