ಜೆಡಿಎಸ್ ಹೆಚ್ಚು ಸ್ಥಾನದಲ್ಲಿ ಗೆಲುವು ಪಡೆದಿದ್ದು, ಇದೀಗ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವುದು ಪ್ರಶ್ನೆಯಾಗಿದೆ. ಅಲ್ಲದೇ ಅಧ್ಯಕ್ಷ ಸ್ಥಾನದ ಕುತೂಹಲವು ಗರಿಗೆದರಿದೆ.
ಹನೂರು [ಮಾ.16]: ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪಟ್ಟಿ ಪ್ರಕಟಿಸುತ್ತಿದ್ದಂತೆ ಜೆಡಿಎಸ್ ಕಾಂಗ್ರೆಸ್, ಬಿಜೆಪಿ, ಪಕ್ಷಗಳ ಸದಸ್ಯರು ಅಧಿಕಾರಕ್ಕಾಗಿ ವರಿಷ್ಠರ ಹಿಂದೆ ದುಂಬಾಲು ಬಿದ್ದಿದ್ದಾರೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಬಿ)ಗೆ ನಿಗದಿಯಾಗಿರುವುದರಿಂದ ಮೂರು ಪಕ್ಷಗಳ ಮುಖಂಡರು ಮತ್ತು ಸದಸ್ಯರಲ್ಲಿ ಸಂಚಲನವನ್ನೇ ಉಂಟು ಮಾಡಿದೆ. ಮೂರು ಪಕ್ಷಕ್ಕೂ ಯಾವುದೇ ರೀತಿಯ ಸ್ಪಷ್ಟ ಬಹಮತವನ್ನು ಪಟ್ಟಣದ ಜನತೆ ನೀಡದೇ ಇರುವುದರಿಂದ ಇತರೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುವಂತಹ ಪರಿಸ್ಥಿತಿ ಉಂಟಾಗಿರುವುದು ಮುಖಂಡರು ಕಸರತ್ತು ನಡೆಸಬೇಕಾಗಿದೆ.
ಗ್ರಾಮ ಪಂಚಾಯಿತಿಯಿಂದ 2002 ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇರ್ಲ್ದಜೆಗೆ ಹೊಂದಿದ ನಂತರ ಈ ಹಿಂದೆ ನಡೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವುರೊಂದಿಗೆ ಸ್ವಂತ ಬಲದ ಮೇಲೆ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಮೂರನೇ ಬಾರಿ 2019 ಮೇ 29ರಂದು ಪಪಂ ವ್ಯಾಪ್ತಿಯ 13 ವಾರ್ಡ್‌ಗಳಿಗೆ ನಡೆದ ಮೂರನೇ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಂದ ಹಿನ್ನೆಲೆಯಲ್ಲಿ ಜೆಡಿಎಸ್ 6, ಕಾಂಗ್ರೆಸ್ 4, ಬಿಜೆಪಿ 3 ಸ್ಥಾನಗಳನ್ನು ಪಡೆದಿದ್ದು, ಯಾರ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ ಮೂರು ಪಕ್ಷಗಳ ವರಿಷ್ಠರ ತೀರ್ಮಾನಕ್ಕೆ ಸಿಲುಕಿದೆ.
ಕಾಂಗ್ರೆಸ್‌ಗೆ ಕಗ್ಗಂಟು : ಬಿಜೆಪಿ - ಜೆಡಿಎಸ್ ನಡುವೆ ಮೈತ್ರಿ?...
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೂ, ಉಪಾ ಧ್ಯಕ್ಷ ಸ್ಥಾನ ಬಿಸಿಎಂ ಬಿ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್ ನಲ್ಲಿ ಮಹಿಳಾ ಪಕ್ಷದ ಸದಸ್ಯೆಯರು ಆಯ್ಕೆಯಾಗದೇ ಇರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಥವಾ ಬಿಜೆಪಿ ಅಭ್ಯರ್ಥಿಗಳು ಆಯ್ಕೆ ಯಾಗುವುದು ಬಹುತೇಕ ಖಚಿತವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಜೆಡಿಎಸ್‌ನಿಂದ 1 ನೇ ವಾರ್ಡಿನ ಮಮ್ತಾಜ್ ಭಾನು, 4 ನೇ ವಾರ್ಡಿನ ಮಂಜುಳ, 7ನೇ ವಾರ್ಡಿನ ಪವಿತ್ರ ಹಾಗೂ ಬಿಜೆ ಪಿಯಿಂದ 5ನೇ ವಾರ್ಡಿನ ರೂಪ ಹಾಗೂ 12 ನೇ ವಾರ್ಡಿನ ಚಂದ್ರಮ್ಮ ಆಯ್ಕೆಯಾಗಿದ್ದಾರೆ. ಸಾಮಾನ್ಯ ಮಹಿಳೆಗೆ ಈ ಬಾರಿ ಅವಕಾಶವಿ ರುವುದರಿಂದ ಪೈಪೋಟಿ ಜೋರಾಗಿಯೇ ಇದೆ.