ಮಾಸ್ಕ್‌ನೊಂದಿಗೆ ಡಿಸಿ ಭೇಟಿ ಮಾಡಲು ಬಂದ ಅರ್ಜುನ್ ಇಟಗಿ| ತಂದೆಯೊಂದಿಗೆ ಆಗಮಿಸಿರುವ ಅರ್ಜುನ್| ಅರ್ಜುನ್ ಜೊತೆಗೆ ಮಾಸ್ಕ್ ಹಾಕಿಕೊಂಡು ಬಂದ ತಂದೆ|
ಕೊಪ್ಪಳ(ಮಾ.16): ಅದ್ಭುತ ಕಂಠದಿಂದ ರಾಜ್ಯಾದ್ಯಂತ ಮನೆ ಮಾತಾಗಿರುವ ಗಾಯಕ ಅರ್ಜುನ್ ಇಟಗಿಗೂ ಮಹಾಮಾರಿ ಕೊರೋನಾ ಕಾಟ ಕೊಟ್ಟಿದೆ. ಹೌದು, ಇಂದು(ಸೋಮವಾರ) ಅರ್ಜುನ್ ಇಟಗಿ ತನ್ನ ತಂದೆಯೊಂದಿಗೆ ನಗರದ ಜಿಲ್ಲಾಧಿಕಾರಿ ಸುನೀಲ ಕುಮಾರ್ ಅವರನ್ನ ಭೇಟಿಯಾಗಲು ಬಂದಿದ್ದ.
ರಾತ್ರಿಯಿಡೀ ಎಣ್ಣೆ ಪಾರ್ಟಿ, ಮಜಾ ಮಾಡಿದವರಿಗೆ ನಾಲ್ಕೇ ದಿನದಲ್ಲಿ ಕೊರೋನಾ ಶಾಕ್!
ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಜಿಲ್ಲಾಧಿಕಾರಿ ಅವರನ್ನ ಭೇಟಿಯಾಗಲು ತನ್ನ ತಂದೆಯ ಜೊತೆ ಆಗಮಿಸಿದ್ದ. ಈ ವೇಳೆ ಅರ್ಜುನ ಇಟಗಿ ಹಾಗೂ ಅವನ ತಂದೆ ಕೂಡ ಮಾಸ್ಕ್ ಧರಿಸಿಯೇ ಬಂದಿದ್ದರು. ಈ ವೇಳೆ ಅಭಿಮಾನಿಗಳಯ ಹ್ಯಾಂಡ್ ಶೇಕ್ ಮಾಡಲು ಮುಂದಾಗಿದ್ದಾರೆ. ಆದರೆ, ಅರ್ಜುನ್ ಇಟಗಿ ಕೈಕೊಡದೆ ಕೇವಲ ಕೈಮುಗಿದ್ದಾನೆ.
'ಮಲ್ಲಿಕಾರ್ಜುನ ಸ್ವಾಮಿಗೂ ಕೊರೋನಾ ಕಾಟ: ಶ್ರೀಶೈಲಕ್ಕೆ ಹೋಗಬೇಡಿ'
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅರ್ಜುನ ಇಟಗಿ, ಕೊರೋನಾ ವೈರಸ್‌ನಿಂದ ಜಾಗೃತವಾಗಿರಲು ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳುವಂತೆ ಅರ್ಜುನ್ ಇಟಗಿ ಮನವಿ ಮಾಡಿದ್ದಾನೆ.