ಜೆಡಿಎಸ್‌ದಿಂದ ತುಮಕೂರು ನಗರ ಸಮಗ್ರ ಅಭಿವೃದ್ಧಿಗೆ ಚಿಂತನೆ

By Kannadaprabha News  |  First Published Oct 31, 2022, 4:57 AM IST

ತುಮಕೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಜೆಡಿಎಸ್‌ ಪಕ್ಷದ ಪಂಚರತ್ನ ಯೋಜನೆಯಲ್ಲಿ ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು, 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಗುಣಮಟ್ಟದ ಆರೋಗ್ಯ ಸೇವೆ ಇನ್ನಿತರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವುದಾಗಿ ಜೆಡಿಎಸ್‌ ಅಭ್ಯರ್ಥಿ ಎನ್‌.ಗೋವಿಂದರಾಜು ತಿಳಿಸಿದ್ದಾರೆ.


 ತುಮಕೂರು (ಅ.31):ತುಮಕೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಜೆಡಿಎಸ್‌ ಪಕ್ಷದ ಪಂಚರತ್ನ ಯೋಜನೆಯಲ್ಲಿ ನಗರದ ಜನತೆಗೆ ಉಚಿತವಾಗಿ ಕುಡಿಯುವ ನೀರು, 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಗುಣಮಟ್ಟದ ಆರೋಗ್ಯ ಸೇವೆ ಇನ್ನಿತರ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವುದಾಗಿ ಜೆಡಿಎಸ್‌ ಅಭ್ಯರ್ಥಿ ಎನ್‌.ಗೋವಿಂದರಾಜು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ (JDS)  ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ರೈತರೊಂದಿಗೆ, (Farmers)  ಮಧ್ಯಮವರ್ಗ ಹಾಗೂ ಬಡಜನರಿಗಾಗಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್‌, ಶಿಕ್ಷಣ, ಆರೋಗ್ಯ ಸೇವಗಳನ್ನು ಒಳಗೊಂಡ ಹಲವಾರು ಜನಮುಖಿ ಯೋಜನೆಗಳನ್ನು ಜಾರಿಗೆ ತರಲಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕೈಗೊಂಡ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಮಾನಸದಲ್ಲಿವೆ. ಅದೇ ಮಾದರಿಯಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರಲಿವೆ ಎಂದರು.

Tap to resize

Latest Videos

ಜನರಿಗೆ ವಾರದ ಏಳು ದಿನವೂ ಉಚಿತವಾಗಿ ಶುದ್ಧ ಕುಡಿಯುವ ನೀರು ಒದಗಿಸುವುದು, ಅದೇ ರೀತಿಯಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಗುಣಮಟ್ಟದ ಸೇವೆ ಒದಗಿಸುವುದು, ವಿದ್ಯಾವಂತ ಯುವ ಜನತೆಗೆ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಹಾಗೂ ಉದ್ಯೋಗಾಧಾರಿತ ತರಬೇತಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅಗತ್ಯ ಯೋಜನೆಗಳು ಹಾಗೂ ವಿದ್ಯುತ್‌ ಖಾಸಗೀಕರಣ ತಡೆಗಟ್ಟುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಎನ್‌.ಗೋವಿಂದರಾಜು ನುಡಿದರು.

ತುಮಕೂರಿಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜನ್ನು ಸಹ ಬರದಂತೆ ನೋಡಿಕೊಂಡರು. ಹಾಲಿ ಮತ್ತ ಮಾಜಿ ಶಾಸಕರ ಶಿಕ್ಷಣ ಲಾಭಿಯಿಂದ ಬಡವರ ಮಕ್ಕಳ ಮೆಡಿಕಲ್‌ ಶಿಕ್ಷಣಕ್ಕೆ ಮಣ್ಣು ಬಿತ್ತು ಎಂದು ದೂರಿದರು. ಮುಂಬರುವ 2023 ಚುನಾವಣೆಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಪಕ್ಷ ನನ್ನನೇ ಆಯ್ಕೆ ಮಾಡಲಿದೆ. ಈಗಾಗಲೇ ಮಾಧ್ಯಮಗಳಲ್ಲಿ ಈ ವಿಚಾರವನ್ನು ಎಚ್‌.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದು, ಕಳೆದ ಚುನಾವಣೆಯಲ್ಲಿ 55 ಸಾವಿರ ಮತ ಪಡೆದು ಸೋತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎಂದು ಜನತಾ ಜಲಧಾರೆ ನಡೆದ ಕಾರ್ಯಕ್ರಮದ ಸಮಯದಲ್ಲೇ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಪಕ್ಷದ ಜಿಲ್ಲಾ ವಕ್ತಾರ ಮಧು, ಮುಖಂಡರಾದ ಪ್ರೆಸ್‌ ರಾಜಣ್ಣ, ಸೋಲಾರ್‌ ಕೃಷ್ಣಮೂರ್ತಿ, ತಾಹೀರಾಭಾನು, ಗಂಗಹನುಮಯ್ಯ, ಪಾಲಿಕೆ ಸದಸ್ಯ ಧರಣೇಂದ್ರಕುಮಾರ್‌, ರಂಗನಾಥ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತುಮಕೂರು ಜಿಲ್ಲೆಗೆ ಪಂಚರತ್ನ ರಥಯಾತ್ರೆ, ನವೆಂಬರ್‌ 15ರಂದು ಜಿಲ್ಲೆಗೆ ಆಗಮಿಸಲಿದೆ. ಆ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅವರೊಂದಿಗೆ ಜಿಲ್ಲೆಯ ಎಲ್ಲಾ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಎನ್‌.ಗೋವಿಂದರಾಜು ಜೆಡಿಎಸ್‌ ಅಭ್ಯರ್ಥಿ

ಶುರುವಾಗಿದೆ ರಾಜಕೀಯ ಗುದ್ದಾಟ : 

ಕೋಲಾರ(ಅ.27): ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ಜೆಡಿಎಸ್ ಒಂದೆಡೆ ಪಂಚರತ್ನ ಯಾತ್ರೆಯನ್ನ ಜಿಲ್ಲೆಯಿಂದಲೇ ಆರಂಭಿಸುವ ಮೂಲಕ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದ್ದರೆ ಇತ್ತ ಆಡಳಿತಾರೂಢ ಬಿಜೆಪಿ ಕೂಡ ಜಿಲ್ಲೆಯಲ್ಲಿ ಕೆಂಪೇಗೌಡ ಯಾತ್ರೆ ಮೂಲಕ ರಾಜಕೀಯ ಆರಂಭಿಸಿದೆ. 

ಹೌದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಂದ ಒಟ್ಟು ಹನ್ನೊಂದು ವಿಧಾನಸಭಾ ಕ್ಷೇತಗಳಿವೆ. ಈ ಕ್ಷೇತ್ರಗಳ ಮೇಲೆ ತಮ್ಮ ಕಣ್ಣು ನೆಟ್ಟಿರುವ ರಾಜಕೀಯ ಪಕ್ಷಗಳೀಗ ಜಿಲ್ಲೆಯಲ್ಲಿ ಯಾತ್ರೆಗಳ ಆಯೋಜನೆ‌ ಮಾಡಿ  ರಾಜಕೀಯ ಆರಂಭಿಸಿವೆ. ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಹಿಡಿತಹೊಂದಿರುವ ಜೆಡಿಎಸ್ ಪಕ್ಷ ಸದ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ‌ ಕ್ಷೇತ್ರದಿಂದ ಶ್ರೀನಿವಾಸಗೌಡ ಮಾತ್ರ‌ ಗೆಲುವು ಕಂಡಿದ್ದರು, ಅವರೂ ಕೂಡ ಈಗ ಕಾಂಗ್ರೆಸ್ ಪಾಲಾಗಿದ್ದಾರೆ. ಕಳೆದ‌ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವಿನ ಸಮೀಪದಲ್ಲಿ ಜೆಡಿಎಸ್ ಎಡವಿತ್ತು.ಹೀಗಾಗಿ ಈ ಬಾರಿ ಶತಾಯಗತಾಯ ಕ್ಷೇತ್ರಗಳನ್ನು ಗೆಲವು ಕಾಣಲು ಹವಣಿಸುತ್ತಿದೆ. ಹೀಗಾಗಿ ರಾಜ್ಯದ ಮೂಡಲ ಬಾಗಿಲು ಎಂತಲೇ ಹೆಸರಾದ ಮುಳಬಾಗಿಲು ತಾಲೂಕಿನಿಂದ ತನ್ನ ಪಂಚರತ್ನ ಯಾತ್ರೆ ಆರಂಭಿಸುತ್ತಿದೆ. ನವಂಬರ್ ಒಂದ ರಿಂದ ಕುರುಡುಮಲೆ ವಿನಾಯಕನ ಪೂಜೆ ಮುಖಾಂತರ ಈ ಯಾತ್ರೆಯನ್ನು ಆರಂಭಿಸಲಿದೆ. ಜೆಡಿಎಸ್ ವರಿಷ್ಠ ಮಾಜಿ ಪ್ರದಾನಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ಗ್ರಾಮಗಳಲ್ಲಿ ಗ್ರಾಮವಾಸ್ಥವ್ಯವನ್ನೂ ಸಹ ಹೆಚ್‌ಡಿಕೆ ಮಾಡಲಿದ್ದಾರೆ. 

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಇನ್ನೂ ಆಡಳಿತಾರೂಡ ಬಿಜೆಪಿ ಪಕ್ಷ ಈಗ ಜಿಲ್ಲೆಯಲ್ಲಿ ತನ್ನ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ಮುಂದುವರಸಿದೆ. ಕೋಲಾರ ಸಂಸದ ಮುನಿಸ್ವಾಮಿ ಇಲ್ಲಿಯ ಸಂಸದರೆನ್ನೋದು ಬಿಟ್ಟರೆ ಇನ್ನಾವುದೇ ಶಾಸಕರು ಇಲ್ಲಿ ಬಿಜೆಪಿಯಿಂದ ಗೆದ್ದಿಲ್ಲ.ಆದ್ರೆ ಮಾಜಿ ಶಾಸಕ ವರ್ತೂರು ಪ್ರಕಾಶ್, ಮಾಲೂರು ಮಾಜಿ ಶಾಸಕ ಕೋಡಿಹಳ್ಳಿ ಮಂಜುನಾಥ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷವನ್ನು ಕೋಲಾರ ಜಿಲ್ಲೆಯಲ್ಲಿ ಬಲಪಡಿಸಲು ಪ್ರಯತ್ನಿಸಿದೆ. ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಜಿಲ್ಲೆಗಿರುವ ಬಿಜೆಪಿ ಶಾಸಕರೆಂದರೆ ಅದು ಸಚಿವ ಸುಧಾಕರ್ ಮಾತ್ರ. ಹೀಗಾಗಿ ಬಿಜೆಪಿ ಈ ಭಾರಿ ಇವರಡು ಜಿಲ್ಲೆಗಳಿಗೆ ತನ್ನ ಪ್ರಭಲ ಪೈಪೋಟಿಯನ್ನು ನೀಡುವುದು ಅನಿವಾರ್ಯ. ಹಾಗಾಗಿ ಜಿಲ್ಲೆಯಲ್ಲಿ ಮತದಾರ ಓಲೈಕೆಯನ್ನು ಮತ್ತು ತನ್ನ ರಾಜಕೀಯ ಪ್ರಯತ್ನಗಳನ್ನು ಮುಂದುವರೆಸಿದೆ.ಇದೇ ಪ್ರಯತ್ನಗಳ ಅಂಗವಾಗಿ ಜಿಲ್ಲೆಯಾದ್ಯಂತ ಕೆಂಪೇಗೌಡ ಯಾತ್ರೆಯನ್ನ ಹಮ್ಮಿಕೊಂಡಿದೆ.

click me!