ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿದ್ದ ನಾನು ಅನ್ಯ ಕಾರ್ಯ ನಿಮಿತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಭಾವಚಿತ್ರ ಇದೆ ಎಂಬ ಕಾರಣಕ್ಕೆ ತೇಜೋವಧೆ ಮಾಡಿ ಗ್ರಾಪಂ ಉಪಾಧ್ಯಕ್ಷ ಸ್ಥಾನ ನೀಡದೆ ಅಪಮಾನ ಮಾಡಿದ್ದನ್ನು ಸಹಿಸದೆ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ಮಿರ್ಲೆ ಗ್ರಾಪಂ ಸದಸ್ಯ ಹರೀಶ್ ಹೇಳಿದರು.
ಕೆ.ಆರ್. ನಗರ (ಅ.31): ಜೆಡಿಎಸ್ ಸಕ್ರಿಯ ಕಾರ್ಯಕರ್ತನಾಗಿದ್ದ ನಾನು ಅನ್ಯ ಕಾರ್ಯ ನಿಮಿತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಭಾವಚಿತ್ರ ಇದೆ ಎಂಬ ಕಾರಣಕ್ಕೆ ತೇಜೋವಧೆ ಮಾಡಿ ಗ್ರಾಪಂ ಉಪಾಧ್ಯಕ್ಷ ಸ್ಥಾನ ನೀಡದೆ ಅಪಮಾನ ಮಾಡಿದ್ದನ್ನು ಸಹಿಸದೆ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ಮಿರ್ಲೆ ಗ್ರಾಪಂ ಸದಸ್ಯ ಹರೀಶ್ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬ ದಶಕಗಳಿಂದ ಜೆಡಿಎಸ್ ಪರವಾಗಿ ದುಡಿಯುತ್ತಿದ್ದರೂ ಅದನ್ನು ಪರಿಗಣಿಸದ ಪಕ್ಷದ ಮುಖಂಡರು ನೀನು ಸಿದ್ದರಾಮಯ್ಯ ಅವರ ಜೊತೆ ನಿಂತು ಪೋಟೋ ತೆಗೆಸಿಕೊಂಡಿದ್ದೀಯ ಅಲ್ಲಿಗೆ ಹೋಗು ಎಂದು ಹೇಳಿದ್ದರಿಂದ ಮತ್ತು ಗ್ರಾಮದಲ್ಲಿ ಅಭಿವೃದ್ದಿ ಕೆಲಸಗಳು ನಡೆಯದೆ ಇರುವುದರಿಂದ ಪಕ್ಷ ಬಿಡುತ್ತಿದ್ದೇನೆ ಎಂದು ತಿಳಿಸಿದರು.
undefined
ಗ್ರಾಪಂ ಉಪಾಧ್ಯಕ್ಷನನ್ನಾಗಿ ಮಾಡುತ್ತೇನೆ ಎಂದು ಬಾಂಡ್ ಪೇಪರ್ ಪಡೆದಿರುವ ಜೆಡಿಎಸ್ ಮುಖಂಡರು ಆ ಸ್ಥಾನವನ್ನು ನೀಡಿದೆ ಅನ್ಯಾಯ ಮಾಡಿದ್ದು, ನಾನು ಚುನಾವಣೆಯಲ್ಲಿ ಇಂತಹ ವರ್ತನೆಯಿಂದ ಬೇಸತ್ತು )ನಾನು ಹಾಗೂ ನನ್ನ ಬೆಂಬಲಿಗರು ಕಾಂಗ್ರೇಸ್ ಸೇರ್ಪಡೆಯಾಗುತ್ತಿದ್ದು ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಡಿ. ರವಿಶಂಕರ್ ಪರ ಕೆಲಸ ಮಾಡಿ ಅವರ ಗೆಲುವಿಗೆ ದುಡಿಯುವುದಾಗಿ ಪ್ರಕಟಿಸಿದರು.
ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಸಾಲಿಗ್ರಾಮ ಬ್ಲಾಕ್ ಅಧ್ಯಕ್ಷ ಉದಯಶಂಕರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಮಿರ್ಲೆ ನಂದೀಶ್ ಇದ್ದರು.
6 7 ಕ್ಷೆತ್ರದಿಂದ ಸ್ಪರ್ಧೆಗೆ ಒತ್ತಡ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ, ವರುಣಾ, ಚಾಮರಾಜನಗರ, ಕೋಲಾರ ಸೇರಿದಂತೆ ಆರೇಳು ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಒತ್ತಡವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ‘ವರುಣಾ ಕ್ಷೇತ್ರದಲ್ಲಿ ನನ್ನ ಮಗ ಶಾಸಕನಾಗಿದ್ದಾನೆ. ಹೀಗಾಗಿ, ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇನ್ನೊಂದು ತಿಂಗಳಲ್ಲಿ ನಿರ್ಧರಿಸುತ್ತೇನೆ’ ಎಂದರು. ‘ಮೋದಿಯವರು ವಾರಣಾಸಿಯಿಂದ ಸ್ಪರ್ಧೆ ಮಾಡಿದರೆ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಅದೇ ನಾನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ವಿಭಿನ್ನ ವ್ಯಾಖ್ಯಾನ ಮಾಡಲಾಗುತ್ತದೆ. ಹಾಗೇಕೆ?’ ಎಂದು ಪ್ರಶ್ನಿಸಿದರು.
ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷದ ವಾತಾವರಣ ಹೆಚ್ಚಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಬಿಜೆಪಿಯರಿಗೆ ಅಪಪ್ರಚಾರ ಮತ್ತು ಸುಳ್ಳು ಹೇಳುವುದನ್ನು ಬಿಟ್ಟರೆ ಇನ್ನೇನು ಕೆಲಸವಿಲ್ಲ ಎಂದು ಟೀಕಿಸಿದರು. ಇದೇ ವೇಳೆ, ಶ್ರೀರಾಮುಲು, ನಳಿನ್‌ಕುಮಾರ್ ಕಟೀಲ್ ಹಾಗೂ ಈಶ್ವರಪ್ಪ ವಿರುದ್ದ ಕಿಡಿ ಕಾರಿದ ಸಿದ್ದು, ‘ಕಟೀಲ್ ಒಬ್ಬ ಜೋಕರ್. ಅವರ ಮಾತಿಗೆಲ್ಲ ಉತ್ತರ ಕೊಡುತ್ತ ಸಮಯ ವ್ಯರ್ಥ ಮಾಡಲು ನಾನು ಸಿದ್ಧನಿಲ್ಲ’ ಎಂದರು. ಶಿವಮೊಗ್ಗದಲ್ಲಿ ಜನರನ್ನು ಎತ್ತಿಕಟ್ಟಿಗಲಾಟೆ ಮಾಡಿಸುವುದು ಈಶ್ವರಪ್ಪನವರು.
ಬಾದಾಮಿಯ ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡ ಸಿದ್ದು: ಯಡಿಯೂರಪ್ಪ
144 ಸೆಕ್ಷನ್ ಇದ್ದರೂ, ಹರ್ಷ ಕೊಲೆಯಾದಾಗ ಆತನ ಹೆಣ ಇಟ್ಟುಕೊಂಡು ಮೆರವಣಿಗೆ ಮಾಡಿದರು. ಈಶ್ವರಪ್ಪ ಅವರಂತವರಿಂದಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದರು. ‘ನಾನು ರಾಮುಲು ಅವರನ್ನು ಪೆದ್ದ ಎನ್ನಲು ಕಾರಣ ಅವರೇ. ಒಮ್ಮೆ ತಮ್ಮನ್ನು ತಾವೇ ಪೆದ್ದ ಎಂದು ಅವರು ಕರೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಾತನಾಡುವಾಗ ‘ನಾನು ಉದ್ದವಿದ್ದೇನೆ, ಆದರೂ ಪೆದ್ದ. ಬಸವರಾಜ ಬೊಮ್ಮಾಯಿ ಕುಳ್ಳ ಇದ್ದರೂ ಬುದ್ಧಿವಂತ’ ಎಂದು ಹೇಳಿದ್ದರು. ಅವರ ಮಾತನ್ನೇ ನಾನು ನೆನಪು ಮಾಡಿದ್ದೇನೆ ಅಷ್ಟೆ ಎಂದರು.