ಮಂಡ್ಯ : ಸರ್ಕಾರದ ಆಹಾರ ಕಿಟ್‌ಗಳ ಮೇಲೆ ದಳದ ಚಿಹ್ನೆ : ಆಕ್ರೋಶ

Kannadaprabha News   | Asianet News
Published : May 20, 2021, 12:20 PM IST
ಮಂಡ್ಯ : ಸರ್ಕಾರದ ಆಹಾರ ಕಿಟ್‌ಗಳ ಮೇಲೆ ದಳದ ಚಿಹ್ನೆ : ಆಕ್ರೋಶ

ಸಾರಾಂಶ

ತಾಲೂಕು ಅಡಳಿತದಿಂದ ನೀಡುತ್ತಿರುವ ಆಹಾರ ಕಿಟ್‌ ಮೇಲೆ ಜೆಡಿಎಸ್ ಸಿಂಬಲ್ ಕಾಂಗ್ರೆಸ್ ನಾಯಕರಿಂದ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ಮಂಡ್ಯದ ಮಳವಳ್ಳಿಯಲ್ಲಿ ಘಟನೆ 

ಮಳವಳ್ಳಿ (ಮೇ.20): ಕೋವಿಡ್ ಸೋಂಕಿನಿಂದ ಸೀಲ್‌ಡೌನ್‌ ಆಗಿರುವ ಪ್ರದೇಶಗಳಲ್ಲಿನ ಜನರಿಗೆ ತಾಲೂಕು ಆಡಳಿತದಿಂದ  ನೀಡುತ್ತಿರುವ ಆಹಾತ ಕಿಟ್‌ಗಳ ಮೇಲೆ ಜೆಡಿಎಸ್  ಚಿಹ್ನೆ ಹಾಗೂ  ಮುಖಂಡರ ಭಾವಚಿತ್ರ ಬಳಸುತ್ತಿರುವುದಕ್ಕೆ ಕಾಂಗ್ರೆಸ್ ವಿರೋದ ವ್ಯಕ್ತಪಡಿಸಿದೆ. 

ಪಟ್ಟಣದ ಟಿಎಪಿಸಿಎಂಎಸ್ ಸಮುದಾಯದಲ್ಲಿ ಬುದವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಶಾಸಕ ಡಾ.ಕೆ ಅನ್ನದಾನಿ ಹಾಗೂ ತಾಲೂಕು ಆಡಳಿತ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದವರನ್ನು ಕಡ್ಡಾಯವಾಗಿ ಕೋವಿಡ್‌ ಕೇರ್‌ ಸೆಂಟರಿನಲ್ಲಿಡಿ : DC ತಮ್ಮಣ್ಣ ...

ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು ಮಾತನಾಡಿ  ತಾಲೂಕಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿತರ ಸಂಖ್ಯೆ  ಹೆಚ್ಚುತ್ತಿದ್ದು ಸುಮಾರು 22 ಗ್ರಾಮಗಳ ಹಲವು ಪ್ರದೇಶಗಳನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ. 

ಅಲ್ಲಿನ  ಜನರು ಹೊರಗಡೆ ಹೋಗಿ ಅಗತ್ಯ ವಸ್ತುಗಲನ್ನು ಖರೀದಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಕ್ಷೇತ್ರದ ದಾನಿಗಳು ಉದ್ಯಮಿಗಳು ಸಂಘ ಸಂಸ್ಥೆಗಳಿಮದ  ದೇಣಿಗೆ ಸಂಗ್ರಹಿಸಿ ಆಹಾರ ಕಿಟ್ ತಯಾರಿಸಿ ಅದನ್ನು ನಿರಾಶ್ರಿತರಿಗೆ ನೀಡುತ್ತಿದ್ದರೆ ಶಾಸಕರು ಅದಕ್ಕೆ ತಮ್ಮ ಪಕ್ಷ ಚಿಹ್ನೆ ಮುಖಂಡರನ್ನು ಬಳಸುತ್ತಿದ್ದಾರೆಂದು ಆರೊಪಿಸಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!