* ಕೊರೋನಾ ಕಡಿಮೆಯಾಗ್ತಿದ್ದಂತೆ ಹೆಚ್ಚಾಯ್ತು ಬ್ಲಾಕ್ ಫಂಗಸ್ ಭೀತಿ
* ಬಾಗಲಕೋಟೆಯಲ್ಲಿ 3, ಜಮಖಂಡಿಯಲ್ಲಿ ಇಬ್ಬರಲ್ಲಿ ಬ್ಲ್ಯಾಕ್ ಫಂಗಸ್
* ರೋಗಿಗಳಿಗೆ ಚಿಕಿತ್ಸೆಗೆ ಮುಂದಾದ ಜಿಲ್ಲಾಡಳಿತ
ಬಾಗಲಕೋಟೆ(ಮೇ.20): ಜಿಲ್ಲೆಯಲ್ಲಿ ನಿನ್ನೆ(ಬುಧವಾರ) ಒಂದೇ ದಿನ 5 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 4 ರಿಂದ 9ಕ್ಕೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯ ಜನರೆ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
ಇಂದು(ಗುರುವಾರ) ಈ ಬಗ್ಗೆ ಏಟ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ ಡಿಎಚ್ಓ ಡಾ.ಅನಂತ ದೇಸಾಯಿ ಅವರು ಬಾಗಲಕೋಟೆಯಲ್ಲಿ 3, ಜಮಖಂಡಿಯಲ್ಲಿ ಇಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಜಮಖಂಡಿಯ ಇಬ್ಬರು ರೋಗಿಗಳು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ತೆರಳಿದ್ದಾರೆ. ಇತ್ತ ಬಾಗಲಕೋಟೆ ನಗರದ ಕುಮಾರೇಶ್ವರ ಆಸ್ಪತ್ರೆಯಲ್ಲಿ 3 ಜನ ಫಂಗಸ್ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಎಫೆಕ್ಟ್: ಅಲರ್ಟ್ ಆದ ಬಾಗಲಕೋಟೆ ಜಿಲ್ಲಾಡಳಿತ
ದಿದೇ ದಿನೆ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಡಳಿತ ರೋಗಿಗಳಿಗೆ ಚಿಕಿತ್ಸೆಗೆ ಮುಂದಾಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳ ಔಷಧಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆ ಬೆಂಗಳೂರಿಗೆ ಸಂಪರ್ಕ ಮಾಡಿದೆ ಎಂದು ಡಿಎಚ್ಓ ಡಾ.ಅನಂತ ದೇಸಾಯಿ ಮಾಹಿತಿ ನೀಡಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona