ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆ

By Web DeskFirst Published Sep 5, 2018, 9:37 PM IST
Highlights

ಧರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ನಾಗಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಧರ್ಮಾಪುರದ ರಾಮಚಂದ್ರ ಅವಿರೋಧ ಆಯ್ಕೆಯಾದರು.

ಹುಣಸೂರು(ಸೆ.05): ಧರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಾಮಚಂದ್ರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಿಇಒ ನಾರಾಯಣ ನಾಯಕ ಹೇಳಿದ್ದಾರೆ.

ಧರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ನಾಗಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಧರ್ಮಾಪುರದ ರಾಮಚಂದ್ರ ಅವಿರೋಧ ಆಯ್ಕೆಯಾದರು.

ಸಹಕಾರ ಸಂಘದ ನೂತನ ಅಧ್ಯಕ್ಷ ರಾಮಚಂದ್ರ ಮಾತನಾಡಿ, ಸಂಘದ ಅಭಿವೃದ್ದಿ ಮತ್ತು ವ್ಯಾಪ್ತಿಗೆ ಬರುವ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯಗಳನ್ನು ನೀಡಲು ಡಿಸಿಸಿ ಬ್ಯಾಂಕಿನಿಂದ ಮಾಡಿಸಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ. ಹರೀಶ್‌ಗೌಡ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಚುನಾಯಿತರಾದ ನಿರ್ದೇಶಕರು ರೈತರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಮಾತ್ರ ರೈತರು ಅಭಿವೃದ್ಧಿಯಾಗುವ ಮೂಲಕ ಹಳ್ಳಿ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಜಿಪಂ ಸದಸ್ಯ ಎಂ.ಬಿ. ಸುರೇಂದ್ರ, ನಿರ್ದೇಶಕರಾದ ಕೆಂಪೇಗೌಡ, ನಿಂಗೇಗೌಡ, ನಾಗಣ್ಣ, ನಾಗರಾಜ್, ಪಾರ್ವತಮ್ಮ, ಸಿದ್ದೇಗೌಡ, ಚನ್ನಮಲ್ಲೇಗೌಡ,ಸಿದ್ದಯ್ಯ , ಮುಖಂಡರಾದ ಗೋವಿಂದರಾಜ್, ವಿಶ್ವನಾಥ್, ಕೃಷ್ಣ, ಕೆ.ಎಚ್. ರಾಜು, ಜೆ. ಮಹದೇವ್, ಪುಣ್ಯಶೀಲ, ರಾಜಶೇಖರ್, ಸಿಇಒ ನಾರಾಯಣನಾಯ್ಕ ಇದ್ದರು.

click me!