ಸಾಂಸ್ಕೃತಿಕ ರಾಜಧಾನಿಯಲ್ಲಿ ಯಾವ ಪಕ್ಷಕ್ಕೂ ಒಲಿಯದ ಮತದಾರ

By Web DeskFirst Published Sep 3, 2018, 4:29 PM IST
Highlights

ಪುರಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣ ಮಾತ್ರ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದು, ಎಚ್.ಡಿ. ಕೋಟೆ, ನರಸೀಪುರದಲ್ಲಿ ಅತಂತ್ರವಾಗಿದ್ದರೂ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

ಮೈಸೂರು[ಸೆ.03]: ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಮತದಾರ ಯಾವ ಪಕ್ಷಕ್ಕೂ ಬೆಂಬಲ ನೀಡಿಲ್ಲ.

ಅತಂತ್ರ ಸೃಷ್ಟಿಯಾಗಿರುವ ಪಾಲಿಕೆ ಹಾಗೂ ಪುರಸಭೆಯಲ್ಲಿ ದೋಸ್ತಿ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಅಧಿಕಾರ ರಚಿಸುವ ಸಾಧ್ಯತೆ  ಹೆಚ್ಚಾಗಿದೆ. ಪಾಲಿಕೆಯಲ್ಲಿ ಹೆಚ್ಚು ಸ್ಥಾನ ಗಳಿಸಿದರೂ ಭಾರತೀಯ ಜನತಾ ಪಕ್ಷ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವ ಸ್ಥಿತಿ ಅನಿವಾರ್ಯವಾಗಿದೆ.  ಪುರಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣ ಮಾತ್ರ ಜೆಡಿಎಸ್ ತನ್ನ ಪ್ರಾಬಲ್ಯ ಉಳಿಸಿಕೊಂಡಿದ್ದು, ಎಚ್.ಡಿ. ಕೋಟೆ, ನರಸೀಪುರದಲ್ಲಿ ಅತಂತ್ರವಾಗಿದ್ದರೂ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿಯುವುದು ನಿಚ್ಚಳವಾಗಿದೆ.

ಮೈಸೂರು : 

ಮಹಾನಗರ ಪಾಲಿಕೆ 
ಒಟ್ಟು  : 65
ಕಾಂಗ್ರೆಸ್​ : ​19 
ಬಿಜೆಪಿ : 22
ಜೆಡಿಎಸ್​​ 18
ಬಿಎಸ್ಪಿ : 01,
ಇತರೆ 5 
ಅತಂತ್ರ

ಪುರಸಭೆ

ಟಿ.ನರಸೀಪುರ
ಒಟ್ಟು : 23
ಕಾಂಗ್ರೆಸ್ : 10,
ಜೆಡಿಎಸ್​ : 3,
ಇತರೆ :  6,
ಬಿಜೆಪಿ : 4
ಅತಂತ್ರ

ಪಿರಿಯಾಪಟ್ಟಣ
ಒಟ್ಟು  :  23
ಕಾಂಗ್ರೆಸ್ :​​ 8
ಜೆಡಿಎಸ್ :​​ 14
ಪಕ್ಷೇತರ : 1
ಜೆಡಿಎಸ್ಸಿಗೆ ಅಧಿಕಾರ

ಎಚ್.ಡಿ.ಕೋಟೆ 
ಒಟ್ಟು: 23 :
ಕಾಂಗ್ರೆಸ್​​ 11
ಜೆಡಿಎಸ್​​ - 8
ಬಿಜೆಪಿ -1, 
ಬಿಎಸ್ಪಿ-1
ಇತರೆ - 2 
ಅತಂತ್ರ

click me!