Tumakur : ' ದೀನದಲಿತರ ಅಭಿವೃದ್ಧಿಗೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು'

By Kannadaprabha News  |  First Published Oct 31, 2022, 5:02 AM IST

ರಾಜ್ಯದಲ್ಲಿ ಬಡವರ, ದೀನದಲಿತರ ಅಭಿವೃದ್ಧಿಯಾಗಬೇಕೆಂದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ 2023ರ ವಿಧಾನಸಭೆಗೆ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್‌.ಉಮೇಶ್‌ ಹೇಳಿದರು.


  ಶಿರಾ (a.31):  ರಾಜ್ಯದಲ್ಲಿ ಬಡವರ, ದೀನದಲಿತರ ಅಭಿವೃದ್ಧಿಯಾಗಬೇಕೆಂದರೆ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ 2023ರ ವಿಧಾನಸಭೆಗೆ ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಆರ್‌.ಉಮೇಶ್‌ ಹೇಳಿದರು.

ತಾಲೂಕಿನ ಲಕ್ಕವ್ವನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ಯೋಜನೆಯ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ (HD Kumaraswamy)  ಸಮೃದ್ಧ ಗ್ರಾಮ ಭಾರತ ನಿರ್ಮಾಣ ಸಂಕಲ್ಪವಾದ ಪಂಚರತ್ನ ಯೋಜನೆಯಿಂದ ಉತ್ತಮ ಗುಣಮಟ್ಟದ ಹಾಗೂ ವ್ಯವಸ್ಥಿತ ಶಿಕ್ಷಣವನ್ನು ಉಚಿತವಾಗಿ ನೀಡಲಾಗುವುದು. ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ 24*7 ಕಾರ್ಯನಿರ್ವಹಿಸುವ ಹೈಟೆಕ್‌ ಆಸ್ಪತ್ರೆ, ರೈತರಿಗೆ ಆಧುನಿಕ ಕೃಷಿ ಪದ್ಧತಿ ಅಳವಡಿಕೆ ಹಾಗೂ ಲಾಭದಾಯಕ ಮಾರುಕಟ್ಟೆವ್ಯವಸ್ಥೆ, ಯುವ ಜನತೆ ಹಾಗೂ ಮಹಿಳೆಯರಿಗೆ ಉದ್ಯೋಗ ಪಡೆಯಲು ತರಬೇತಿ, ವಸತಿ ಇಲ್ಲದವರಿಗೆ ಸರ್ಕಾರದಿಂದಲೇ ವಸತಿ ಕಟ್ಟಿಸಿಕೊಡುವ ಯೋಜನೆ, ಇಷ್ಟೆಲ್ಲಾ ಯೋಜನೆಗಳು ಅನುಷ್ಠಾನಗೊಂಡರೆ ನಮ್ಮ ರಾಜ್ಯವು ದೆಹಲಿಯನ್ನೂ ಮೀರಿಸಲಿದೆ. ಈ ನಿಟ್ಟಿನಲ್ಲಿ ಪಂಚರತ್ನ ಯೋಜನೆಯ ಅನುಕೂಲದ ಬಗ್ಗೆ ಪ್ರತಿ ಮನೆಗೂ ತಲುಪಿಸಬೇಕೆಂದು ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಪ್ರಚಾರ ಕಾರ್ಯ ಆರಂಭಿಸಿದ್ದೆವೆ ಎಂದರು.

Tap to resize

Latest Videos

ತಾಪಂ ಮಾಜಿ ಅಧ್ಯಕ್ಷ ಸತ್ಯಪ್ರಕಾಶ್‌ ಮಾತನಾಡಿ, ಪಂಚರತ್ನ ಯೋಜನೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಕನಸಿನ ಯೋಜನೆ. ಬಡವರ, ಶ್ರಮಿಕರಿಗೆ ಅನುಕೂಲವಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಕುಮಾರಸ್ವಾಮಿಯವರು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ನುಡಿದಂತೆ ನಡೆದಿದ್ದಾರೆ. ರಾಜ್ಯದ ಜನತೆ ಕುಮಾರಸ್ವಾಮಿ ಅವರಿಗೆ ಒಂದು ಸಾರಿ ಪೂರ್ಣ ಪ್ರಮಾಣದ ಸರ್ಕಾರ ನೀಡಿದರೆ ರಾಜ್ಯದಲ್ಲಿಯೇ ಇತಿಹಾಸ ನಿರ್ಮಾಣವಾಗುವಂತಹ ಆಡಳಿತ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌.ಉಗ್ರೇಶ್‌, ಜೆಡಿಎಸ್‌ ಜಿಲ್ಲಾ ಮಾಧ್ಯಮ ವಕ್ತಾರ ಕೋಟೆ ಮಹದೇವ್‌, ಹುಂಜಿನಾಳು ರಾಜಣ್ಣ, ಪುಟ್ಟರಾಜು, ದೊಡ್ಡಕರಿಯಪ್ಪ, ಚಿಕ್ಕಕರಿಯಪ್ಪ, ಕಾಂತರಾಜು, ಜೋಗಣ್ಣ, ಗುಂಡೇಗೌಡ, ಆರ್‌.ಕೆ.ಮಾರುತಿ, ನಾಗರಾಜು, ಸುನಿಲ್‌, ಧನಂಜಯ್‌, ನಂದಿಶ್‌ ಸೇರಿದಂತೆ ಹಲವರು ಹಾಜರಿದ್ದರು.

ರಾಜ್ಯದಲ್ಲಿ ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಲಿದ್ದಾರೆ. ವಿಧಾನಸಭೆಯಲ್ಲಿ ಜೆಡಿಎಸ್‌ ಬಾವುಟ ಹಾರಲಿದೆ. ಇದು ಶತಸಿದ್ಧ.

ಸಿ.ಆರ್‌.ಉಮೇಶ್‌ ಮಾಜಿ ಸದಸ್ಯ, ಜಿಲ್ಲಾ ಪಂಚಾಯಿತಿ

ಮತ್ತೆ ನಾನೇ ಸಿಎಂ

ಬಿಜೆಪಿ ಸರ್ಕಾರದ ಲೂಟಿ, ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದು, ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು.

ನಗರದ ಶೇರ್ವಾ ಹೋಟೆಲ್‌ ಬಳಿ ಜೆಡಿಎಸ್‌ ಅಲ್ಪಸಂಖ್ಯಾತ ಘಟಕದ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾರ್ಯವೈಖರಿಯಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ರಾಜ್ಯದ ಜನ ನಿರ್ಧರಿಸಿದ್ದು, ಅವರು ಇನ್ನು ಹತ್ತು ಜನ್ಮ ಎತ್ತಿ ಬಂದರು ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿಯವರು ಹೋದಲ್ಲಿ ಬಂದಲ್ಲಿ 160 ಸೀಟ್‌ ಗೆಲ್ಲುತ್ತೇವೆ ಎಂದು ಹೇಳುತ್ತಾರೆ. ಆದರೆ, ಅವರು ಏನು ಕಿತ್ತುಗುಡ್ಡೆ ಹಾಕಿದ್ದಾರೆ ಎಂದು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಾರೆ. ಕೋವಿಡ್‌ನಿಂದ ಮೃತಪಟ್ಟಕುಟುಂಬದರಿಗೆ ಘೋಷಿಸಿದ್ದ ಪರಿಹಾರದ ಹಣ ಎಷ್ಟುಕುಟುಂಬಕ್ಕೆ ನೀಡಿದ್ದೀರಿ. ರಾಜ್ಯದಲ್ಲಿ ಮಳೆ ಅವಾಂತರದಿಂದ ಮನೆಗಳು ಬಿದ್ದಿದ್ದರೂ ಒಂದು ಮನೆ ಕಟ್ಟಿಸುವ ಹೋಗತ್ಯ ಇಲ್ಲದ ನಿಮಗೆ ಜನ ಏಕೆ ಅಧಿಕಾರ ನೀಡಬೇಕು ಎಂದು ಪ್ರಶ್ನಿಸಿದರು.

ಚನ್ನಪಟ್ಟಣದಿಂದಲೇ ಸ್ಪರ್ಧೆ, ನಾನು ಟಾಕೀಸ್ ಟೂರ್ ಅಲ್ಲ ಎಂದು ಸಿದ್ದುಗೆ ಗುದ್ದಿಗ ಹೆಚ್‌ಡಿಕೆ!

ರಾಷ್ಟ್ರೀಯ ಪಕ್ಷಗಳಿಂದ ಕೋಮು ವೈಷಮ್ಯ: ರಾಷ್ಟ್ರೀಯ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಕೋಮು ಗಲಭೆಗಳು ಸಾಮಾನ್ಯ ಎಂಬಂತಾಗಿದೆ. ಆದರೆ, ಪ್ರಾದೇಶಿಕ ಪಕ್ಷಗಳು ಅಧಿಕಾರಿದಲ್ಲಿ ಇರುವ ಕಡೆ ಅಂತಹ ವಾತಾವರಣವಿಲ್ಲ. ಇದಕ್ಕೆ ನೆರೆಯ ತಮಿಳುನಾಡು, ಆಂಧ್ರ, ತೆಲಂಗಾಣಗಳೇ ಉದಾಹರಣೆ. ಆದರೆ, ಬಿಜೆಪಿ ಅಧಿಕಾರಿದಲ್ಲಿರುವ ಗುಜುರಾತ್‌, ಉತ್ತರಪ್ರದೇಶಗಳಲ್ಲಿ ಸೌಹಾರ್ದಯುತ ವಾತಾವರಣವಿಲ್ಲ ಎಂದು ಟೀಕಿಸಿದರು.

click me!