ಲಾಕ್‌ಡೌನ್‌ ನಡುವೆ ಜೆಡಿಎಸ್‌ ಪ್ರತಿಭಟನೆ

By Kannadaprabha NewsFirst Published Apr 7, 2020, 11:55 AM IST
Highlights

ಲಾಕ್‌ಡೌನ್‌ ವೇಳೆ ನಗರದ ಕ್ವಾಲಿಟಿ ಬಾರ್‌ ರೆಸ್ಟೋರೆಂಟ್‌ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದರೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು, ಸಂಸದ ಪ್ರಜ್ವಲ್‌ ರೇವಣ್ಣ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಹಾಸನ(ಏ.07): ಲಾಕ್‌ಡೌನ್‌ ವೇಳೆ ನಗರದ ಕ್ವಾಲಿಟಿ ಬಾರ್‌ ರೆಸ್ಟೋರೆಂಟ್‌ ಅಕ್ರಮವಾಗಿ ಮದ್ಯ ಸರಬರಾಜು ಮಾಡುತ್ತಿದ್ದರೂ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದ ಜಿಲ್ಲಾಡಳಿತದ ವಿರುದ್ಧ ಜೆಡಿಎಸ್‌ ಕಾರ್ಯಕರ್ತರು, ಸಂಸದ ಪ್ರಜ್ವಲ್‌ ರೇವಣ್ಣ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಲಾಕ್‌ಡೌನ್‌ ಮಾಡಿದ್ದರೂ ಸಹ ನಗರದ ಬಿ.ಎಂ. ರಸ್ತೆಯಲ್ಲಿ ಇರುವ ಕ್ವಾಲಿಟಿ ಬಾರ್‌ನಲ್ಲಿ ಜನರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ನಂತರ ಜನರೇ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಆದರೆ, ಬಾರ್‌ ಮಾಲೀಕನ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿ

ಕ್ವಾಲಿಟಿ ಬಾರ್‌ನ ಮಾಲೀಕರು ಬಿಜೆಪಿ ಕಾರ್ಯಕರ್ತನಾದ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿ​ಧಿಯ ಶ್ರೀರಕ್ಷೆಯಿಂದ ಆತನ ಮೇಲೆ ಯಾವ ಕ್ರಮವೂ ಕೈಗೊಂಡಿಲ್ಲ. ಆದರೆ, ಇದೇ ರೀತಿ ಪ್ರಕರಣ ನಿಟ್ಟೂರಿನ ಪೃಥ್ವಿ ವೈನ್ಸ್‌ ಎಂಬ ಮೇಲೆ ನಡೆದಿತ್ತು. ಆದರೆ, ಆ ಮಾಲೀಕನ ವಿರುದ್ಧ ಕ್ರಮ ಕೈಗೊಂಡಿರುವ ಸಂಬಂಧಪಟ್ಟವರು, ಕ್ವಾಲಿಟಿ ಬಾರ್‌ ಮಾಲೀಕನ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬರಿಗೆ ಒಂದು ನ್ಯಾಯ ಎಂಬಂತಿದೆ ಇವರ ನಡವಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಜಿಲ್ಲಾಡಳಿತ ಕ್ವಾಲಿಟಿ ಬಾರ್‌ನ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಾಸ್ಕ್‌ ಮೇಲೆ ವಾರ, ನೋಟ್‌ನಲ್ಲಿ 2 ದಿನ ಇರುತ್ತೆ ಕೊರೋನಾ!

ಈ ವೇಳೆ ಸಂಸದ ಪ್ರಜ್ವಲ್‌ ರೇವಣ್ಣ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತು ಜೆಡಿಸ್‌ ಮುಖಂಡರು, ಕಾರ್ಯಕರ್ತರು ಇದ್ದರು.

ಎಎಸ್ಪಿಗೆ ಪ್ವಜಲ್‌ ತರಾಟೆ

ಜಿಲ್ಲೆಯಲ್ಲಿ 144 ಸೆಕ್ಷನ್‌ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದವರ ವಿರುದ್ಧ ಅಪರ ಪೊಲೀಸ್‌ ವರಿಷ್ಠಾ​ಕಾರಿ ನಂದಿನಿ ಅವರು ಗರಂ ಆದರು. ಕೂಡಲೇ ಜಿಲ್ಲಾ​ಧಿಕಾರಿಗಳ ಕಚೇರಿ ಆವರಣಕ್ಕೆ ದೌಡಾಯಿಸಿದ ಎಎಸ್‌ಪಿ ನಂದಿನಿ ಪ್ರತಿಭಟನಾಕಾರರನ್ನು ಸ್ಥಳದಿಂದ ಹೊರ ಹೋಗುವಂತೆ ಸೂಚಿಸಿದರು. ಇದಕ್ಕೆ ಕುಪಿತರಾದ ಸಂಸದ ಪ್ರಜ್ವಲ್‌ ರೇವಣ್ಣ ಎಎಸ್‌ಪಿ ವಿರುದ್ಧ ಹರಿಹಾಯ್ದರು. ಬಾರ್‌ ಬಂದ್‌ ಮಾಡಿಸದ ನೀವು ಪ್ರತಿಭಟನೆ ಮಾಡದಂತೆ ನಿರ್ಬಂಧ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನ ಸಾಮಾನ್ಯರನ್ನು ಅಲ್ಲಲ್ಲಿ ತಡೆದು ನೂರು ಪ್ರಶ್ನೆ ಕೇಳುವ ಪೊಲೀಸರು ಇಂದು ಮಾತ್ರ ದಿವ್ಯ ಮೌನಕ್ಕೆ ಶರಣಾಗಿದ್ದರು.

click me!