ಕೊರೋನಾ ವೈರಸ್ ತಡೆಗೆ ಎಚ್‌ಡಿಕೆಯಿಂದ ಸೋಂಕು ನಿವಾರಕ ಸುರಂಗ

By Kannadaprabha News  |  First Published Apr 7, 2020, 11:33 AM IST

ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ​ಕು​ಮಾ​ರ​ಸ್ವಾಮಿ ಅವರು ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ಗಳ ಎಪಿ​ಎಂಸಿ, ರೇಷ್ಮೆ ಮಾರು​ಕ​ಟ್ಟೆ​ಗ​ಳಿಗೆ ಕೊರೋನಾ ಡಿಸ್‌ಇನ್‌ ಫೆಕ್ಷನ್‌ ಟನಲ್‌ (ಸೋಂಕು ನಿವಾ​ರಕ ದ್ರಾವಣ ಸಿಂಪ​ಡ​ಣೆಯ ಸುರಂಗ​) ಅನ್ನು ಕೊಡು​ಗೆ​ಯಾಗಿ ನೀಡಿದ್ದಾರೆ.


ರಾಮ​ನ​ಗರ(ಏ.07): ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ. ​ಕು​ಮಾ​ರ​ಸ್ವಾಮಿ ಅವರು ರಾಮ​ನ​ಗರ ಮತ್ತು ಚನ್ನ​ಪ​ಟ್ಟಣ ಕ್ಷೇತ್ರ​ಗಳ ಎಪಿ​ಎಂಸಿ, ರೇಷ್ಮೆ ಮಾರು​ಕ​ಟ್ಟೆ​ಗ​ಳಿಗೆ ಕೊರೋನಾ ಡಿಸ್‌ಇನ್‌ ಫೆಕ್ಷನ್‌ ಟನಲ್‌ (ಸೋಂಕು ನಿವಾ​ರಕ ದ್ರಾವಣ ಸಿಂಪ​ಡ​ಣೆಯ ಸುರಂಗ​) ಅನ್ನು ಕೊಡು​ಗೆ​ಯಾಗಿ ನೀಡಿದ್ದು, ರಾಮ​ನ​ಗರ ಎಪಿ​ಎಂಸಿ, ರೇಷ್ಮೆ ಗೂಡು ಮಾರು​ಕಟ್ಟೆಹಾಗೂ ಚನ್ನ​ಪ​ಟ್ಟಣ ಎಪಿ​ಎಂಸಿ, ರೇಷ್ಮೆ​ಗೂಡು ಮಾರು​ಕ​ಟ್ಟೆ​ಗ​ಳ ಆವ​ರ​ಣ​ದಲ್ಲಿ ಕೊರೋನಾ ಡಿಸ್‌ಇನ್‌ಫೆಕ್ಷನ್‌ ಟನಲ್‌ ಅಳ​ವ​ಡಿ​ಸುವ ಕಾರ್ಯ ನಡೆ​ಯು​ತ್ತಿದೆ.

"

Latest Videos

undefined

ಟನಲ್‌ಗೆ ಏ​. 6ರಂದು ಚಾಲನೆ ಸಿಗ​ಲಿ​ದೆ. ಇಲ್ಲಿ ಜನರ ಮೇಲೆ ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣ ಸಿಂಪಡಿಸಲಾಗುತ್ತದೆ. ಈ ದ್ರಾವಣ ಜನರ ಬಟ್ಟೆಮತ್ತು ದೇಹದ ಮೇಲೆ ವೈರಸ್‌ ಇದ್ದರೆ ಅದನ್ನು ನಾಶಪಡಿಸಲಿದೆ. ಇದರಿಂದ ವೈರಾಣು ಹರಡದಂತೆ ತಡೆಗಟ್ಟಲು ಸಾಧ್ಯವಾಗಲಿದೆ.

ದಾವಣಗೆರೆಯಲ್ಲಿ ಇಬ್ಬರು COVID19 ಸೋಂಕಿತರು ಗುಣಮುಖ..!

ಈಗಾಗಲೇ ದೇಶದ ಹಲವು ಕಡೆ ಇಂತಹ ಸುರಂಗಗಳನ್ನು ಮಾಡಿ ವೈರಸ್ ನಾಶ ಪಡಿಸಲು ಕ್ರಮ ವಹಿಸಲಾಗುತ್ತಿದೆ. ಲಾಕ್‌ಡೌನ್ ಘೋಷಿಸಿದ್ದರೂ ಜನರು ಅಗತ್ಯ ವಸ್ತುಗಳಿಗಾಗಿ ಓಡಾಡುವುದರಿಂದ ಈ ರೀತಿ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ಸಿಡಿಲು ಬಡಿದು 8 ಮೇಕೆಗಳು ಸಾವು

click me!