ಪಕ್ಷ ಕಷ್ಟದಲ್ಲಿದೆ, ದಯಮಾಡಿ ಜೆಡಿಎಸ್ ಉಳಿಸಿಕೊಡಿ ಎಂದ ನಿಖಿಲ್ ಕುಮಾರಸ್ವಾಮಿ

By Web Desk  |  First Published Nov 25, 2019, 2:48 PM IST

ಜೆಡಿಎಸ್‌ ಪಕ್ಷ ಕಷ್ಟದಲ್ಲಿದೆ. ನಮ್ಮ ಕೈ ಹಿಡಿಯಿರಿ ಎಂದು ನಿಖಿಲ್ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಮಂಡ್ಯಸ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚಿಸಿದ ಅವರು, ಕ್ಷೇತ್ರದಲ್ಲಿ ಮತಬೇಟೆ ನಡೆಸಿದ್ದಾರೆ.


ಮಂಡ್ಯ(ನ.25): ಜೆಡಿಎಸ್‌ ಪಕ್ಷ ಕಷ್ಟದಲ್ಲಿದೆ. ನಮ್ಮ ಕೈ ಹಿಡಿಯಿರಿ ಎಂದು ನಿಖಿಲ್ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ. ಮಂಡ್ಯಸ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಯಾಚಿಸಿದ ಅವರು, ಕ್ಷೇತ್ರದಲ್ಲಿ ಮತಬೇಟೆ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಮಾಕವಳ್ಳಿಯಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷ ಕಷ್ಟದಲ್ಲಿದೆ, ನಮ್ಮನ್ನ ಕೈ ಹಿಡಿಯಿರಿ. ಕುಮಾರಸ್ವಾಮಿಗೆ ಕೆಲವರು ಬೆನ್ನಿಗೆ ಚೂರಿ ಹಾಕಿ ಹೋದರು ಎಂದಿದ್ದಾರೆ.

Tap to resize

Latest Videos

ಆಮಿಷಕ್ಕೆ ಬಲಿಯಾದ್ರು ನಾರಾಯಣ ಗೌಡ:

ನಾರಾಯಣಗೌಡ ಕೂಡ‌ ಆಮಿಷಕ್ಕೆ ಬಲಿಯಾಗಿ ಬಿಜೆಪಿ ಸೇರಿದ್ದಾರೆ. ಲೋಕಸಭಾ ಚುನಾವಣೆ ನನಗೆ ಸಾಕಷ್ಟು ಪಾಠ ಕಲಿಸಿದೆ. ದೊಡ್ಡ ಮಟ್ಟದ ಅನುಭವ ಪಡೆದಿದ್ದೇನೆ. ರಾಜಕೀಯದ ಮೊದಲ ಹೆಜ್ಜೆಯಲ್ಲೇ‌ ದೊಡ್ಡ ಅನುಭವ ಆಗಿದೆ. ನಾನು ರಾಜಕೀಯ ಷಡ್ಯಂತ್ರದಿಂದ ಸೋತಿರಬಹುದು. ಜನರು ನನಗೆ ಮೋಸ ಮಾಡಿಲ್ಲ. ನನ್ನ ಮನಸ್ಸಲ್ಲಿ ಸೋಲಿನ ಯಾವುದೇ ನೋವು ಇಲ್ಲ ಎಂದು ಹೇಳಿದ್ದಾರೆ.

2 ದಶಕಗಳ ನಂತರ ಹುಣಸೂರಿನಲ್ಲಿ ಮತ್ತೆ ಅರಳುತ್ತಾ ಕಮಲ..?

ಇಂದು ಜೆಡಿಎಸ್ ಪಕ್ಷ ಕಷ್ಠದಲ್ಲಿದೆ, ದಯಮಾಡಿ ಪಕ್ಷವನ್ನ ಉಳಿಸಿಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಉಪ ಚುನಾವಣೆಯ ಪ್ರಚಾರದಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ. ಯಶವಂತಪುರ, ಕಾಮಾಕ್ಷಿಪಾಳ್ಯ, ಕೆ.ಆರ್.ಪುರಂ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ. ಹೊಸಕೋಟೆ ಶರತ್ ಬಚ್ಚೇಗೌಡ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಯಾವುದಾದರೂ ಒಂದು‌ ದಿನ ಪ್ರಚಾರಕ್ಕೆ ಬರುವಂತೆ ಹೇಳಿದ್ದಾರೆ. ಅವರು ಹೇಳಿದ ದಿನದಂದು ಹೊಸಕೋಟೆಯಲ್ಲಿ ಶರತ್ ಪರ‌ ಪ್ರಚಾರ ಮಾಡ್ತೀನಿ ಎಂದಿದ್ದಾರೆ.

ಕೆ. ಆರ್‌. ಪೇಟೆಯಲ್ಲಿ ಸಿಎಂ ಮತಬೇಟೆ, JDS ಪರ ನಿಖಿಲ್ ಪ್ರಚಾರ

click me!