'ಕಟೀಲು ಕಲಾವಿದರ ಮೇಲೆ ದಬ್ಬಾಳಿಕೆ, ಸುಳ್ಳು ಹೇಳೋದು ಅಸ್ರಣ್ಣರಿಗೆ ಶಿಸ್ತೇ'..?

By Web DeskFirst Published Nov 25, 2019, 2:16 PM IST
Highlights

ಕಟೀಲು ಮೇಳದಿಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕೈಬಿಟ್ಟಿದ್ದು, ಈ ಬಗ್ಗೆ ಕರಾವಳಿಯಲ್ಲಿ ವಿವಾದ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ, ಪಟ್ಲ ಅವರನ್ನು ಕೈಬಿಡುವುದಕ್ಕಿರುವ ಕಾರಣವನ್ನೂ ಸ್ಪಷ್ಟಪಡಿಸಿದ್ದಾರೆ. ಈಗ ಪಟ್ಲ ಸತೀಶ್ ಶೆಟ್ಟಿಯವರು ಘಟನೆ ಬಗ್ಗೆ ಮಾತನಾಡಿದ್ದಾರೆ.

ಮಂಗಳೂರು(ನ.25): ಕಟೀಲು ಮೇಳದಿಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕೈಬಿಟ್ಟಿದ್ದು, ಈ ಬಗ್ಗೆ ಕರಾವಳಿಯಲ್ಲಿ ವಿವಾದ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರು ಪತ್ರಿಕಾಗೋಷ್ಠಿ ನಡೆಸಿ, ಪಟ್ಲ ಅವರನ್ನು ಕೈಬಿಡುವುದಕ್ಕಿರುವ ಕಾರಣವನ್ನೂ ಸ್ಪಷ್ಟಪಡಿಸಿದ್ದಾರೆ. ಈಗ ಪಟ್ಲ ಸತೀಶ್ ಶೆಟ್ಟಿಯವರು ಘಟನೆ ಬಗ್ಗೆ ಮಾತನಾಡಿದ್ದಾರೆ.

ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಹೊರಕ್ಕೆ

ಕಟೀಲು ಮೇಳದ ರಂಗಸ್ಥಳದಿಂದ ಕೆಳಗಿಳಿಸಿದ ಪ್ರಕರಣದಲ್ಲಿ ಭಾಗವತ ಪಟ್ಲ ಹೇಳಿಕೆ ನೀಡಿದ್ದು, ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಬಳಗದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಮೇಳದಿಂದ ಗೇಟ್ ಪಾಸ್ ನೀಡಿದ್ದು ರಂಗಸ್ಥಳದಿಂದ ಕೆಳಗಿಳಿವವರೆಗೂ ಲಿಖಿತವಾಗಿಯೂ ಮೌಖಿಕವಾಗಿಯೂ ಹೇಳಿರಲಿಲ್ಲ. ಪ್ರಮಾಣಕ್ಕೆ ಸಿದ್ಧ ಎಂದು ಅವರು ಹೇಳಿದ್ದಾರೆ.

ಒಮ್ಮೆಯೂ ರಜೆ ಹಾಕಿ ಬೇರೆ ಆಟಕ್ಕೆ ಹೋಗಿಲ್ಲ:

19 ವರ್ಷದಲ್ಲಿ ಒಮ್ಮೆಯೂ ಮೇಳಕ್ಕೆ ರಜೆ ಹಾಕಿ ಬೇರೆ ಆಟಕ್ಕೆ ಹೋಗಿಲ್ಲ. ಒಂದೇ ಒಂದು ಅಶಿಸ್ತು ಇದ್ದರೆ ತೋರಿಸಲಿ. ಆಸ್ರಣ್ಣ ರಿಗೆ ಸುಳ್ಳು ಹೇಳೋದೆ ಶಿಸ್ತೇ ಎಂದು ಅವರು ಪ್ರಶ್ನಿಸಿದ್ದಾರೆ. - ಬೆಳೆಯುತ್ತಿರುವ ನನ್ನ ಹೆಸರಿಗೆ ಕಳಂಕ ತರುವ ಯತ್ನ ಕೆಲವು ವರ್ಷದಿಂದಲೇ ನಡೆಯುತ್ತಿದೆ ಎಂದು ಆರೋಪಿಸಿದ್ಧಾರೆ.

ಕಲಾವಿದರ ಮೇಲೆ ದಬ್ಬಾಳಿಕೆ:

ಕಟೀಲು ಕಲಾವಿದರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇಷ್ಟಕ್ಕೆಲ್ಲ ಕಾರಣ ಕಲ್ಲಾಡಿ ಅಳಿಯ ಸುಪ್ರೀತ್ ರೈ. ಕಲಾವಿದರ ಮೇಲೆ ದಬ್ಬಾಳಿಕೆ ಮಾಡೋ ಇವರು ಮೇಳದಲ್ಲಿ ಯಾರು ಎಂದು ಪಟ್ಲ ಪ್ರಶ್ನಿಸಿದ್ದಾರೆ.

ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?

click me!