ಬಿಎಸ್‌ವೈ ಕಾಲಿಗೆ ಬಿದ್ದ ಮಂಡ್ಯ JDS ಶಾಸಕ ಸುರೇಶ್ ಗೌಡ

By Suvarna NewsFirst Published Dec 12, 2019, 1:16 PM IST
Highlights

ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ನೆಲಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಸಿಎಂ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಪಕ್ಷ ಬಿಟ್ಟು ಹೋಗುತ್ತಾರಾ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.

ಮಂಡ್ಯ(ಡಿ.12): ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ನೆಲಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಸಿಎಂ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕ ಪಕ್ಷ ಬಿಟ್ಟು ಹೋಗುತ್ತಾರಾ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ."

ಸಿಎಂ‌ ಕಾಲಿಗೆ ಬಿದ್ದು ಜೆಡಿಎಸ್‌ ಶಾಸಕ‌ ಸುರೇಶ್ ಗೌಡ ಆಶೀರ್ವಾದ ಪಡೆದಿದ್ದಾರೆ. ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದೇನೆ. ಯಡಿಯೂರಪ್ಪ ಅವರ ಜಾಗದಲ್ಲಿ ಸಿದ್ದರಾಮಯ್ಯ ಬಂದಿದ್ರು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ. ನಾನು ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಆದಿಚುಂಚನಗಿರಿಯಲ್ಲಿ ಯಡಿಯೂರಪ್ಪ ಅವರಿಂದ ಹುಣ್ಣಿಮೆ ಪೂಜೆ

ಹಿಂದೆ ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂದಿದ್ದೆ. ಈಗ ಅವ್ರಿಗೆ ಯಾರ ಅವಶ್ಯಕತೆಯೂ ಇಲ್ಲ. ನಾರಾಯಣಗೌಡ ನಾನು ಸ್ನೇಹಿತರು. ಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ನಡೆಸಿದ್ದೇನೆ. ವೈಯಕ್ತಿಕವಾಗಿ ನಾವಿಬ್ರು ಸ್ನೇಹಿತರು. ಕೆ. ಆರ್. ಪೇಟೆಯಲ್ಲಿ ಜೆಡಿಎಸ್‌ ಏರಡನೇ ಸ್ಥಾನಕ್ಕೆ ಬಂದಿದೆ.

ಕಾಂಗ್ರೆಸ್ ಸ್ಥಿತಿ ಅದೋಗತಿಯಾಗಿದೆ. ಜೆಡಿಎಸ್‌ ಪಕ್ಷದಲ್ಲಿ ನನಗೆ ಯಾವುದೇ ನೋವಿಲ್ಲ. ನಾನು ಪಕ್ಷಬಿಡುವ ಮಾತೇ ಇಲ್ಲ ಎಂದು ಆದಿಚುಂಚನಗಿರಿಯಲ್ಲಿ ಶಾಸಕ ಸುರೇಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.

ಈರುಳ್ಳಿಯಲ್ಲ ಬಂಗಾರ! ಚಿತ್ರದುರ್ಗದ ರೈತನ ಜೇಬಿಗೆ 90 ಲಕ್ಷ ರೂ. ಸಿಂಗಾರ!

click me!