ಬಿಜೆಪಿ ಪರ ಬ್ಯಾಟ್ ಬೀಸಿದ ಜೆಡಿಎಸ್ ಶಾಸಕ

By Web DeskFirst Published Aug 21, 2019, 12:08 PM IST
Highlights

ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗಳ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಇದೇ ವೇಳೆ ಮಂಡ್ಯದ ಜೆಡಿಎಸ್ ಶಾಸಕರೋರ್ವರು ಬಿಜೆಪಿ ಬೆಂಬಲವಾಗಿ ಮಾತನಾಡಿದ್ದಾರೆ. 

ಮಂಡ್ಯ [ಆ.21]: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಮೊದಲ ಹಂತದಲ್ಲಿ 17 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ನಿಟ್ಟಿನಲ್ಲಿ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಆದರೆ ಇದೇ ವೇಳೆ ಮಂಡ್ಯದ ಜೆಡಿಎಸ್ ಶಾಸಕರೋರ್ವರು ಬಿಜೆಪಿ ಪರ ಬ್ಯಾಟ್ ಬೀಸಿದ್ದಾರೆ. 

ಬಿಜೆಪಿ ತಮ್ಮಲ್ಲಿರುವ ಅಸಮಾಧಾನ ಸರಿಪಡಿಸಿಕೊಂಡು‌ ಸರ್ಕಾರ ನಡೆಸಲಿದೆ. ಸಚಿವ ಸಂಪುಟದ ರಚನೆ ಬಳಿಕ ಎದ್ದಿರುವ ಅಸಮಾಧಾನ ಸರಿಪಡಿಸಿಕೊಂಡು ಸರ್ಕಾರ ನಡೆಸಲಿದೆ ಎಂದಿದ್ದಾರೆ. 

ನಾಗಮಂಗದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ ಪ್ರತಿಯೊಬ್ಬ ರಾಜಕೀಯ ನಾಯಕನಿಗೂ ನಾನು ಮಂತ್ರಿಯಾಗಬೇಕೆಂಬ ಆಸೆ ಇದ್ದೆ ಇರುತ್ತದೆ.  ಹಾಗಾಗಿ ಆಡಳಿತ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುವುದು ಸಹಜ. ಸಚಿವ ಸಂಪುಟ ರಚನೆ ಬಳಿಕ ಬಿಜೆಪಿಯಲ್ಲೂ ಅಸಮಾಧಾನ ಎದ್ದಿದೆ ಎಂದು ಹೇಳಿದರು. 

ಖಾತೆ ಹಂಚಿಕೆ ಫೈನಲ್.. ಬಿಜೆಪಿ ಈ ಪಟ್ಟಿ ಬದಲಾಗಲ್ಲ

ಆದರೆ ಈಗ ಎದ್ದಿರುವ  ಅಸಮಾಧಾನವನ್ನುಯ ಬಿಜೆಪಿ‌ ಪಕ್ಷ ಹೋಗಲಾಡಿಸಿಕೊಂಡು ಸರ್ಕಾರ ನಡೆಸಲಿದೆ ಎನ್ನುವ ವಿಶ್ವಾಸವಿದೆ. ನಮ್ಮ ಸರ್ಕಾರ ಬೀಳುವ ಸಮಯದಲ್ಲೂ ನಾವು ಆಪರೇಷನ್ ಕಾಂಗ್ರೆಸ್ ಅಥವಾ ಬಿಜೆಪಿ ಮಾಡಲಿಲ್ಲ. ಈಗಲೂ ನಾವು ಸರ್ಕಾರ ಉರುಳಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದರು. 

click me!