ನೆರೆ ಸಂತ್ರಸ್ತರಿಗೀಗ ಹೊಸ ಸವಾಲು ಎದುರಾಗಿದೆ. ಭಾರೀ ಪ್ರವಾಹದಿಂದ ಬಾವಿಗಳು ಸಂಪೂರ್ಣ ತುಂಬಿದ್ದು ಕೆಸರಿನಿಂದಾವೃತವಾದ ಬಾವಿಗಳ ಸ್ವಚ್ಛತೆಯೇ ದೊಡ್ಡ ಸವಾಲಾಗಿದೆ.
ಕಾರವಾರ [ಆ.21]: ಪ್ರವಾಹ ಪೀಡಿತ ಪ್ರದೇಶಗಳುದ್ದಕ್ಕೂ ಸಾವಿರಾರು ಬಾವಿಗಳು ನೆರೆ ನೀರು, ಕೆಸರಿನಿಂದ ಕಲುಷಿತಗೊಂಡಿವೆ.
ಕಲುಷಿತಗೊಂಡಿರುವ ಬಾವಿಗಳನ್ನು ಹಲವೆಡೆ ನಿರಾಶ್ರಿತರೇ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ, ಕೆಲವರು ಅಸಹಾಯಕರಾಗಿ ಕುಳಿತಿದ್ದಾರೆ.
undefined
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ನಡುವೆ ಬಾವಿ ನೀರು ಕುಡಿಯಲು ಯೋಗ್ಯವೇ ಎಂಬ ಕುರಿತು ಪರೀಕ್ಷಾ ಕಾರ್ಯ ಶುರುವಾಗಿದೆ. ಹಳಗಾ, ಉಳಗಾ, ಕೆರವಡಿ, ಕದ್ರಾ ಹೀಗೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಈಗ ನಿರಾಶ್ರಿತರು ಬಿಡುವಿಲ್ಲದ ಕೆಲಸದಲ್ಲಿ ಮಗ್ನರಾಗಿದ್ದಾರೆ.
ಬಹುತೇಕ ನಿರಾಶ್ರಿತರು ಮನೆಯನ್ನು ಸ್ವಚ್ಛಗೊಳಿಸಿದ್ದಾರೆ. ಇವೆಲ್ಲದರ ನಡುವೆ ಅನೇಕ ಕಡೆಗಳಲ್ಲಿ ಕುಡಿಯಲು ನೀರಿಲ್ಲದೇ ಜನ ಪರದಾಡುತ್ತಿದ್ದಾರೆ.