ಗುಬ್ಬಿ (ಜು.11): ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ಕಾಂಗ್ರೆಸ್‌ಗೆ ಹೋಗಲ್ಲ ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಅವರು ಗುಬ್ಬಿಯಲ್ಲಿ ಪಪಂ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಬಾಯಿ ತಪ್ಪಿಯಾದರೂ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದಿಲ್ಲ. ಆದರೂ ಈ ಬಗ್ಗೆ ಯಾಕೆ ಚರ್ಚೆಯಾಗುತ್ತಿದೆಯೋ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ. ವದಂತಿಗಳಿಗೆ ಮನ್ನಣೆ ನೀಡಿ ಸಲ್ಲದ ಹೇಳಿಕೆ ನೀಡಿದ ಗುಬ್ಬಿ ಕಾಂಗ್ರೆಸ್ ಅಧ್ಯಕ್ಷರಿಗೆ ತಲೆ ಕೆಟ್ಟಿರಬೇಕು. ಈ ಗಾಳಿ ಸುದ್ದಿಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ತುಮಕೂರು : ಈಗಲೇ ಟಿಕೆಟ್‌ಗಾಗಿ ಪಕ್ಷಗಳಲ್ಲಿ ಜೋರಾಗಿದೆ ಲಾಬಿ
ನಾನು ಸತತ ನಾಲ್ಕು ಬಾರಿ ಶಾಸಕನಾಗಿದ್ದು ನನ್ನ ಪ್ರತೀ ಸ್ಪರ್ಧಿ ಬಗ್ಗೆ ಎಂದೂ ಯೋಚಿಸಿಲ್ಲ. ಎದುರಾಳಿಗಳನ್ನು ಹೈಜಾಕ್ ಮಾಡುವ ಅಗತ್ಯವೂ ನನಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಡಮ್ಮಿ ಅಭ್ಯರ್ಥಿಗಳನ್ನು ನಾನು ನಿಲ್ಲಿಸುತ್ತೇನೆ. ಕಾಂಗ್ರೆಸ್ ಬಿ ಫಾರಂ ಹಂಚುತ್ತೇನೆ ಎಂದು ನನ್ನ ಅನುಯಾಯಿಗಳು ಗೊಂದಲ ಸೃಷ್ಟಿಸಿದ್ದಾರೆ ಎನ್ನುವ ಕಾಂಗ್ರೆಸ್ ಅಧ್ಯಕ್ಷರು ಮೊದಲು ನನ್ನ ಅನುಯಾಯಿ ಯಾರು ಎಂದು ತಿಳಿಸಲಿ.
ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ: ಕಾರ್ಯಕರ್ತರಿಗೊಂದು ಕರೆ ಕೊಟ್ಟ ಎಚ್‌ಡಿಕೆ
ಈ ರೀತಿ ಹಿಟ್ ಅಂಡ ರನ್ ಹೇಳಿಕೆ ನೀಡುವ ಮುನ್ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಬಿ ಫಾರಂ ನೀಡುವವರ್ಯಾರು ಎನ್ನುವುದನ್ನು ಯೋಚಸಬೇಕು ಎಂದು ಕುಟುಕಿದರು.
ಜೆಡಿಎಸ್ ಪಕ್ಷದಿಂದಲೇ ಸ್ಥಳೀಯ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಭರ್ಜರಿಯಾಗಿಯೇ ನಡೆಸಿದ್ದೇವೆ. ಈಗಲೂ ಜಿಪಂ ಮತ್ತು ತಾಪಂ ಚುನಾವಣೆಗೆ ಪಕ್ಷ ಸಜ್ಜಾಗಿದೆ. ನನ್ನ ಕಾರ್ಯಕರ್ತರು ಸಹ ಚುರುಕಾಗಿ ಕೆಲಸ ಆರಂಭಿಸಿದ್ದಾರೆ. ಜೆಡಿಎಸ್ ಬಿಡುತ್ತೇನೆ ಎಂದು ಯಾರು ಹೇಳಿದ್ದಾರೆ ಎಂದರು.