ತುಮಕೂರು : ಈಗಲೇ ಟಿಕೆಟ್‌ಗಾಗಿ ಪಕ್ಷಗಳಲ್ಲಿ ಜೋರಾಗಿದೆ ಲಾಬಿ

By Kannadaprabha NewsFirst Published Jul 11, 2021, 11:23 AM IST
Highlights
  • ಜಿಪಂ ತಾಪಂ ಮೀಸಲು ಕ್ಷೇತ್ರಗಳ ಅಕ್ಷೇಪಣೆ ಪಟ್ಟಿ ಬಿಡುಗಡೆ ಬೆನ್ನಲ್ಲೇ ಲಾಬಿ
  • ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಂದ ಟಿಕೆಟ್ ಪಡೆಯುವ ಪ್ರಯತ್ನ
  • ವಿವಿಧ ಪಕ್ಷಗಳಲ್ಲಿ ಚುನಾವಣಾ ಟಿಕೆಟ್‌ಗಾಗಿ ನಡೆಯುತ್ತಿದೆ ಭರ್ಜರಿ ಲಾಬಿ

ವರದಿ : ನಾಗೇಂದ್ರ ಜೆ.

 ಪಾವಗಡ (ಜು.11): ರಾಜ್ಯ ಚುನಾವಣಾ ಆಯೊಗದಿಂದ  ಜಿಪಂ ತಾಪಂ ಮೀಸಲು ಕ್ಷೇತ್ರಗಳ ಅಕ್ಷೇಪಣೆ ಪಟ್ಟಿ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರಿಂದ ಟಿಕೆಟ್ ಪಡೆಯುವ ಪ್ರಯತ್ನಗಳು ಅತ್ಯಂತ ಬಿರುಸಿನಿಂದ ಸಾಗುತ್ತಿರುವುದು ಸಾಮಾನ್ಯವಾಗಿದೆ. 

ಪ್ರಸಕ್ತ ಸಾಲಿಗೆ ರಾಜ್ಯ ಚುನಾವಣೆ ಅಯೊಗ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವಾರು ವಿಂಗಡಣೆ ನಡೆಸಿ ಜಿ.ಪಂ.ತಾಪಂ ಚುನಾವಣೆ ಆಕ್ಷೇಪಣೆ ಸಲ್ಲಿಗೆ ಜು.8ರ ಗಡುವುದು ವಿಧಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. 

ಇನ್ನೂ ಚುನಾವಣೆಯ ಅಂತಿಮ ಗಡುವು ವಿಧಿಸುವ ಮುನ್ನವೇ  ಕಾಂಗ್ರೆಸ್ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಇತರೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ.  ಕ್ಷೇತ್ರವಾರು ಟಿಕೆಟ್‌ಗಾಗಿ ದುಂಬಾಲು ಬೀಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. 

ಮೀಸಲಾತಿ ಪ್ರಕಟ : ಗರಿಗೆದರಿದ ರಾಜಕೀಯ ...

ಚುನಾವಣೆ ಆಯೋಗ ನಿಯಮಾನುಸಾರ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವಾರು ವಿಂಗಡಣೆ ನಡೆಸಿದ್ದು, ಈ ಸಂಬಂಧ ಪಾವಗಡ ತಾಲೂಕಿನಲ್ಲಿ 7 ಜಿಪಂ ಹಾಗೂ 18 ತಾಪಂ ಕ್ಷೇತ್ರಗಳಿವೆ. ಈ ಕ್ಷೇತ್ರಗಳಿಗೆ ಮೀಸಲು ಪ್ರಕಟಿಸಿದ್ದು ಇನ್ನೂ ಆಕ್ಷೇಪಣೆ ಹಂತದಲ್ಲ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ. 

ಈ ಮಧ್ಯೆಯೇ ಮೀಸಲು ಅನ್ವಯ ಜಿಪಂ ತಾಪಂ ಕ್ಷೇತ್ರಗಳ ಆಕಾಂಕ್ಷಿಗಳು ಟಿಕೆಟ್ಗೆ ಒತ್ತಾಯಿಸಿ  ವಿವಿಧ ಪಕ್ಷಗಳ ಮುಖಂಡರೊಂದಿಗೆ ಲಾಬಿ ಸಂಧಾನಗಳ ದೃಶ್ಯಗಳು ಕಂಡು ಬರುತ್ತಿದೆ. 

click me!