ಜೆಡಿಎಸ್ ಶಾಸಕಗೂ ತಟ್ಟಿದ ಕೊರೋನಾ : ಸಂಪರ್ಕಿತರಿಗೆ ಕ್ವಾರಂಟೈನ್

Suvarna News   | Asianet News
Published : Aug 25, 2020, 03:09 PM IST
ಜೆಡಿಎಸ್ ಶಾಸಕಗೂ ತಟ್ಟಿದ ಕೊರೋನಾ : ಸಂಪರ್ಕಿತರಿಗೆ ಕ್ವಾರಂಟೈನ್

ಸಾರಾಂಶ

ಹಲವು ರಾಜಕೀಯ ಮುಖಂಡರನ್ನು ಕಾಡಿದ ಕೊರೋನಾ ಇದೀಗ ಜೆಡಿಎಸ್ ಶಾಸಕರೋರ್ವರಿಗೂ ತಟ್ಟಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾಸನ (ಆ.25): ಮಹಾಮಾರಿ ಕೊರೋನಾ ಇದೀಗ ಹಾಸನ ಶಾಸಕರಿಗೂ ತಟ್ಟಿದೆ. 

ಹಾಸನ ಶಾಸಕ ಶಿವಲಿಂಗೇಗೌಡರಿಗೆ  ಟೆಸ್ಟ್ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. 

ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

8 ದಿನ ಕ್ವಾರಂಟೈನ್ ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಶಿವಲಿಂಗೇಗೌಡರ ಸಂಪರ್ಕದಲ್ಲಿದ್ವರಿಗೂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. 

ಕಲಬುರಗಿ: ಸಂಸದ ಡಾ.ಜಾಧವ್‌ ಕುಟುಂಬದ ಬಹುತೇಕರಿಗೆ ಕೊರೋನಾ ಸೋಂಕು...

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ಕೊರೋನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈಗಾಗಲೇ ಹಲವು ರಾಜಕೀಯ ಮುಖಂಡರಿಗೆ ಕೊರೋನಾ ಮಹಾಮಾರಿ ತಟ್ಟಿದ್ದು, ಹಲವರು ಗುಣಮುಖರಾಗಿ ಮರಳಿದ್ದಾರೆ. 

ಮುಂಡರಗಿ: ಕೊರೋನಾ ವಾರಿಯರ್‌ ವೈದ್ಯನ ನೆರವಿಗೆ ಧಾವಿಸಿದ ಸರ್ಕಾರ...

ಸಿಎಂ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಅವರಿಗೂ ಕೊರೋನಾ ತಟ್ಟಿ ಗುಣಮುಖರಾಗಿದ್ದಾರೆ.

PREV
click me!

Recommended Stories

ಬೆಳಗಾವಿ ಗಡಿ ವಿವಾದಕ್ಕೆ ಇಂದು ಸುಪ್ರೀಂ ಪರೀಕ್ಷೆ
ಭದ್ರಾವತಿಯಲ್ಲಿ ನಾಳೆ ಅಭಿಮಾನಿಗಳಿಂದ ಡಾ. ರಾಜ್, ಪುನೀತ್ ದೇಗುಲ ಲೋಕಾರ್ಪಣೆ!