ಡಿಸಿಎಂ ಜೊತೆ BJP ಶಾಸಕ ಬರಲಿಲ್ಲ, JDS ಶಾಸಕ ಸಾಥ್ ಬಿಡಲಿಲ್ಲ

Published : Sep 03, 2019, 03:52 PM ISTUpdated : Sep 03, 2019, 03:54 PM IST
ಡಿಸಿಎಂ ಜೊತೆ BJP ಶಾಸಕ ಬರಲಿಲ್ಲ, JDS ಶಾಸಕ ಸಾಥ್ ಬಿಡಲಿಲ್ಲ

ಸಾರಾಂಶ

ಜೆಡಿಎಸ್‌ ಶಾಸಕ ಜಿ. ಟಿ. ದೇವೇಗೌಡ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರ ಜೊತೆಗೇ ಹೆಚ್ಚು ಕಾಣಿಸಿಕೊಳ್ತಿದ್ದಾರೆ ಅನ್ನೋ ಮಾತಿಗೆ ಮತ್ತೊಮ್ಮೆ ಪುಷ್ಠಿ ಸಿಕ್ಕಿದೆ. ಡಿಸಿಎಂ ಗೋವಿಂದ ಕಾರಜೋಳ ಅವರು ಮೈಸೂರಿಗೆ ಭೇಟಿ ನೀಡಿದ್ದು, ಈ ಸಂದರ್ಭ ಜಿ. ಟಿ. ದೇವೆಗೌಡ ಅವರು ಕಾರಜೋಳ ಜೊತೆಗೇ ಕಾಣಿಸಿಕೊಂಡಿದ್ದಾರೆ.   

ಮೈಸೂರು(ಸೆ.03): ಜೆಡಿಎಸ್‌ ಶಾಸಕ ಜಿ. ಟಿ. ದೇವೇಗೌಡ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರ ಜೊತೆಗೇ ಹೆಚ್ಚು ಕಾಣಿಸಿಕೊಳ್ತಿದ್ದಾರೆ ಅನ್ನೋ ಮಾತಿಗೆ ಮತ್ತೊಮ್ಮೆ ಪುಷ್ಠಿ ಸಿಕ್ಕಿದೆ. ಡಿಸಿಎಂ ಗೋವಿಂದ ಕಾರಜೋಳ ಅವರು ಮೈಸೂರಿಗೆ ಭೇಟಿ ನೀಡಿದ್ದು, ಈ ಸಂದರ್ಭ ಜಿ. ಟಿ. ದೇವೆಗೌಡ ಅವರು ಕಾರಜೋಳ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಮೈಸೂರಿಗೆ ಇಂದು(ಮಂಗಳವಾರ) ಭೇಟಿ ನೀಡಿದ ಡಿಸಿಎಂ ಅವರ ಜೊತೆ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರೂ ಕಾಣಿಸಿಕೊಂಡಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳ ಜೊತೆ ಜಿ. ಟಿ. ದೇವೇಗೌಡ ಅವರು ಫುಲ್ ರೌಂಡ್ಸ್ ಹೊಡೆದಿದ್ದಾರೆ.

ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್‌

ಡಿಸಿಎಂ ಕಾರಿನಲ್ಲಿಯೇ ಜಿಟಿಡಿ ಸುತ್ತು:

ಕಾರಜೋಳ ಕಾರಿನಲ್ಲೇ ಸುತ್ತೂರು ಮಠಕ್ಕೆ ಬಂದಿಳಿದ ಜಿಟಿಡಿ ಚಾಮುಂಡಿಬೆಟ್ಟ ಮತ್ತು ಸುತ್ತೂರು ಮಠದಲ್ಲಿ ಡಿಸಿಎಂಗೆ ಸಾಥ್ ಕೊಟ್ಟಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕರ ಜೊತೆಗೆ ಜಿಟಿಡಿ ಹೆಚ್ಛಾಗಿ ಓಡಾಡುತ್ತಿದ್ದಾರೆ. ಜೆಡಿಎಸ್ ಶಾಸಕರಾಗಿದ್ದರೂ, ಸ್ವ ಪಕ್ಷದ ನಾಯಕರಿಂದಲೇ ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಸ್ವಪಕ್ಷದ ಶಾಸಕ ಎಸ್.ಎ.ರಾಮ್‌ದಾಸ್ ಮಾತ್ರ ಉಪ ಮುಖ್ಯಮಂತ್ರಿಗಳ ಬಳಿ ಸುಳಿದಿಲ್ಲ.

ಐಟಿ, ಇಡಿ ದುರುಪಯೋಗ: ಕಾಂಗ್ರೆಸ್‌ಗೆ ಕಾರಜೋಳ ಟಾಂಗ್

PREV
click me!

Recommended Stories

ಬೆಂಗಳೂರು : ನಗರದ 5 ಪಾಲಿಕೆಗೆ ಬ್ಯಾಲೆಟ್‌ ಪೇಪರಲ್ಲೇ ಚುನಾವಣೆ
ತವರಿನಲ್ಲಿ ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟಗೆ ಅದ್ಧೂರಿ ಸ್ವಾಗತ