ರಾಜ್ಯದಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಬಿಜೆಪಿ : ಜೆಡಿಎಸ್ ಆರೋಪ

By Sujatha NRFirst Published Oct 3, 2022, 4:29 AM IST
Highlights

ರಾಜಕೀಯ ದುರುದ್ದೇಶದಿಂದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ಸಮಾಜದಲ್ಲಿ ಅಂತರವನ್ನು ಬಿಜೆಪಿ ಹೆಚ್ಚಿಸುತ್ತಿದೆ ಎಂದು ಜೆಡಿಎಸ್‌ ಮುಖಂಡ ಗೋವಿಂದರಾಜು ಆರೋಪಿಸಿದ್ದಾರೆ.

ತುಮಕೂರು (ಅ.03) :  ರಾಜಕೀಯ ದುರುದ್ದೇಶದಿಂದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ಸಮಾಜದಲ್ಲಿ ಅಂತರವನ್ನು ಬಿಜೆಪಿ ಹೆಚ್ಚಿಸುತ್ತಿದೆ ಎಂದು ಜೆಡಿಎಸ್‌ ಮುಖಂಡ ಗೋವಿಂದರಾಜು ಆರೋಪಿಸಿದ್ದಾರೆ.

ನಗರದ ಟೌನ್‌ ಹಾಲ್‌ ವೃತ್ತದಲ್ಲಿ ಜೆಡಿಎಸ್‌  ಪಕ್ಷದ ವತಿಯಿಂದ ಕೋಮು ಸಾಮರಸ್ಯಕ್ಕಾಗಿ, ದೇಶದ ಐಕ್ಯತೆಗಾಗಿ ಸತ್ಯಾಗ್ರಹ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತಂದಿರುವ ಬಿಜೆಪಿ ವಿರುದ್ಧ ಜಾತ್ಯತೀತ ಶಕ್ತಿ ಸಂಘಟಿತ ಹೋರಾಟ ಮಾಡಬೇಕಾಗಿರುವುದು ಇಂದಿನ ಅನಿವಾರ್ಯತೆ ಎಂದುಅವರು ತಿಳಿಸಿದರು.

ರಾಜ್ಯಾದ್ಯಂತ ಜೆಡಿಎಸ್‌ ಸಾಮರಸ್ಯ ಮತ್ತು ಸಮಾನತೆಗಾಗಿ ಆಗ್ರಹಿಸಿ ಇಂದು ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಕೋಮು ಪ್ರಯೋಗ ಶಾಲೆಯಂತಾಗಿರುವ ನಮ್ಮ ರಾಜ್ಯವನ್ನು ಪಾರು ಮಾಡುವ ನಿಟ್ಟಿನಲ್ಲಿ ಗಾಂಧೀಜಿಯವರ ಅಹಿಂಸೆ ಮತ್ತು ಶಾಂತಿ ಮಾರ್ಗದಲ್ಲಿ ಜಾತ್ಯತೀತರು ಹೋರಾಟ ಮಾಡಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ಹಕ್ಕುಗಳನ್ನು ಕಸಿಯಲಾಗುತ್ತಿದೆ, ಎಲ್ಲ ಮತ ಧರ್ಮಗಳಿಗೆ ಸಮಾನವಾದ ಸ್ವಾತಂತ್ರ್ಯ ನೀಡಿದ್ದರೂ ಸಹ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತ್ತಿವೆ ಎಂದು ಹೇಳಿದರು.

ಜೆಡಿಎಸ್‌ ಸೇವಾದಳದ ರಾಜ್ಯಾಧ್ಯಕ್ಷ ಬಸವರಾಜು ಪಾದಯಾತ್ರೆ ಮಾತನಾಡಿ, JDS ಪಕ್ಷ ಮಹಾತ್ಮ ಗಾಂಧಿಯವರ ಅಹಿಂಸೆ, ಲಾಲ್‌ಬಹದ್ದೂರ್‌ ಶಾಸ್ತ್ರಿಯವರ ಜೈ ಜವಾನ್‌, ಜೈ ಕಿಸಾನ್‌ ಹಾಗೂ ಅಂಬೇಡ್ಕರ್‌ರ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು, ದೇಶದಲ್ಲಿ ಕೋಮು ಸಾಮರಸ್ಯ ಕಾಪಾಡಲು ನಿರಂತರ ಹೋರಾಟ ನಡಸುತ್ತಿದೆ. ತನ್ನ ಅಧಿಕಾರದ ಆಸೆಗಾಗಿ ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತು ದೇಶವನ್ನು ವಿಭಜಿಸುತ್ತಿರುವ ಬಿಜೆಪಿಯ ವಿರುದ್ಧ BJP ಯವರ ದೇಶ ಬಿಟ್ಟು ತೊಲಗಿ ಎಂಬ ಎರಡನೇ ಸ್ವಾತಂತ್ರ್ಯ ಹೋರಾಟ ಆರಂಭವಾಗಬೇಕಾಗಿದೆ ಎಂದರು.

ಸತ್ಯಾಗ್ರಹದಲ್ಲಿ ಕಾರ್ಯಾಧ್ಯಕ್ಷ ಟಿ.ಆರ್‌.ನಾಗರಾಜು, ಗಂಗಣ್ಣ, ರವೀಶ್‌ ಜಹಾಂಗೀರ್‌, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ತನ್ವೀರ್‌ ರೆಹಮಾನ್‌ ಖಾನ್‌ ಸತ್ಯಾಗ್ರಹ ಕುರಿತು ಮಾತನಾಡಿದರು. ಸಾಮರಸ್ಯಕ್ಕಾಗಿ ಸತ್ಯಾಗ್ರಹದಲ್ಲಿ ಪಾಲಿಕೆ ಉಪಮೇಯರ್‌ ನರಸಿಂಹಮೂರ್ತಿ, ಸದಸ್ಯರಾದ ನರಸಿಂಹರಾಜು, ಮನು, ಹಾಲನೂರು ಅನಂತ್‌, ತಾಹೇರ ಬಾನು, ಪ್ರೆಸ್‌ ರಾಜಣ್ಣ, ಉಮಾಶಂಕರ್‌, ಪ್ರಸನ್ನಕುಮಾರ್‌, ಗಣೇಶ್‌ ಮಧು ಸೇರಿದಂತೆ ಇತರರಿದ್ದರು.

ಸತ್ಯಾಗ್ರಹಕ್ಕೂ ಮುನ್ನ ನಗರದ ಜೆಡಿಎಸ್‌ ಕಚೇರಿಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜನಪ್ಪರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.

ರಾಜ್ಯದಲ್ಲಿ ಉಂಟಾಗಿರುವ ಕೋಮು ಗಲಭೆಗೆ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುವ ಸಂಘಟನೆಗಳೇ ಕಾರಣವಾಗಿದೆ. ಹಿಜಾಬ್‌, ಹಲಾಲ್‌ ಹೆಸರಿನಲ್ಲಿ ರಾಜ್ಯದಲ್ಲಿದ್ದ ಸಹೋದರತ್ವ ದೂರವಾಗಿದ್ದು, ಅಸಹಿಷ್ಣುತೆಯನ್ನು ಸೃಷ್ಟಿರುವ ಶಕ್ತಿಗಳ ವಿರುದ್ಧ ಹೋರಾಡಲು ನಾವೆಲ್ಲರು ತಯಾರಾಗಬೇಕು.

ಬೆಳ್ಳಿ ಲೋಕೇಶ್‌ ರಾಜ್ಯ ಪ್ರಧಾನ ಕಾರ್ಯದರ್ಶಿ, ಜೆಡಿಎಸ್‌

 

ರಾಜಕೀಯ ದುರುದ್ದೇಶದಿಂದ ಕೋಮು ಸಾಮರಸ್ಯವನ್ನು ಕದಡುವ ಮೂಲಕ ಸಮಾಜದಲ್ಲಿ ಅಂತರ

ಜೆಡಿಎಸ್‌ ಮುಖಂಡ ಗೋವಿಂದರಾಜು ಆರೋಪ

ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ ಹಕ್ಕುಗಳನ್ನು ಕಸಿಯಲಾಗುತ್ತಿದೆ

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುತ್ತಿವೆ

ಗಾಂಧಿಯವರ ಅಹಿಂಸೆ, ಲಾಲ್‌ಬಹದ್ದೂರ್‌ ಶಾಸ್ತ್ರಿಯವರ ಜೈ ಜವಾನ್‌, ಜೈ ಕಿಸಾನ್‌ ಹಾಗೂ ಅಂಬೇಡ್ಕರ್‌ರ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಂಡು, ದೇಶದಲ್ಲಿ ಕೋಮು ಸಾಮರಸ್ಯ ಕಾಪಾಡಲು ನಿರಂತರ ಹೋರಾಟ

ಬಿಜೆಪಿಯವರ ದೇಶ ಬಿಟ್ಟು ತೊಲಗಿ ಎಂಬ ಎರಡನೇ ಸ್ವಾತಂತ್ರ್ಯ ಹೋರಾಟ ಆರಂಭವಾಗಬೇಕಾಗಿ ಎಂದ ಜೆಡಿಎಸ್ ಮುಖಂಡರು

click me!