ವಿಶ್ವಪ್ರಖ್ಯಾತ ಪ್ರವಾಸಿತಾಣವಾದ ಮುರ್ಡೇಶ್ವರದ ಘನತೆ ಹೆಚ್ಚಿಸುವ ಈ ವಿಶೇಷ ರೈಲಿಗೆ ಮುರ್ಡೇಶ್ವರದ ನಾಗರಿಕ ವೇದಿಕೆಯ ಅಧ್ಯಕ್ಷ ಎಸ್.ಎಸ್. ಕಾಮತ್ ನೇತೃತ್ವದಲ್ಲಿ ಸದಸ್ಯರು, ಸಾರ್ವಜನಿಕರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಭಟ್ಕಳ(ಅ.03): ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಭಾನುವಾರ ಮಧ್ಯಾಹ್ನ ಆಗಮಿಸಿದ ಬೆಂಗಳೂರು-ಮುರ್ಡೇಶ್ವರ ಪ್ರಾಯೋಗಿಕ ರೈಲಿಗೆ ಮುರ್ಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ವಿಶ್ವಪ್ರಖ್ಯಾತ ಪ್ರವಾಸಿತಾಣವಾದ ಮುರ್ಡೇಶ್ವರದ ಘನತೆ ಹೆಚ್ಚಿಸುವ ಈ ವಿಶೇಷ ರೈಲಿಗೆ ಮುರ್ಡೇಶ್ವರದ ನಾಗರಿಕ ವೇದಿಕೆಯ ಅಧ್ಯಕ್ಷ ಎಸ್.ಎಸ್. ಕಾಮತ್ ನೇತೃತ್ವದಲ್ಲಿ ಸದಸ್ಯರು, ಸಾರ್ವಜನಿಕರು ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
undefined
ಉತ್ತರಕನ್ನಡ: ಹವಾಮಾನ ವೈಪರೀತ್ಯ: ಸಾಂಪ್ರದಾಯಿಕ ಉಪ್ಪಿನ ಕೊರತೆ
ರೈಲಿನಲ್ಲಿ ಪ್ರಯಾಣಿಕರು ಸಾಕಷ್ಟುಸಂಖ್ಯೆಯಲ್ಲಿದ್ದರು ಎನ್ನಲಾಗಿದೆ. ಈ ವಿಶೇಷ ರೈಲನ್ನು ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಪ್ರತಿದಿನ ಬಿಡುವಂತೆ ಮತ್ತು ಇದನ್ನು ಕಾರವಾರದವರೆಗೂ ವಿಸ್ತರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುರ್ಡೇಶ್ವರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಕಾಮತ್, ಇದೊಂದು ಪ್ರಾಯೋಗಿಕ ರೈಲಾಗಿದೆ. ಈ ವಿಶೇಷ ರೈಲನ್ನು ಮುರ್ಡೇಶ್ವರಕ್ಕೆ ಪ್ರತಿದಿನ ಓಡಿಸಬೇಕೆಂದು ಒತ್ತಾಯಿಸಲಾಗಿದೆ. ದಿನಂಪ್ರತಿ ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಮತ್ತು ಮುರ್ಡೇಶ್ವರದಿಂದ ಬೆಂಗಳೂರಿಗೆ ಈ ರೈಲು ಸಂಚರಿಸಿದರೆ ಪ್ರಯಾಣಿಕರಿಗೆ, ಮುರ್ಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗುತ್ತೆಂದರು.