ಕರ್ನಾಟಕವನ್ನು ನೀವು ಹಂದಿ ತರಹ ಮೇಯಲು ಇದ್ದೀರಾ?: ಎಡಿಜಿಪಿ ವಿರುದ್ಧ ಸಾ.ರಾ. ಮಹೇಶ್ ವಾಗ್ದಾಳಿ

By Kannadaprabha News  |  First Published Oct 1, 2024, 8:27 AM IST

ನೀವು ಎಡಿಜಿಪಿಯಾದರೆ ಕೊಂಬಿಲ್ಲ. ನಿಮ್ಮ ಆಸ್ತಿಯನ್ನು ಬಹಿರಂಗ ಪಡಿಸಿ. ಈತನ ವಿರುದ್ಧ ಮೇಲಾಧಿಕಾರಿಗಳು ಕ್ರಮ ವಹಿಸಬೇಕು. ಪ್ರೋಟೋಕಾಲ್ ವ್ಯವಸ್ಥೆಯೇ ಇಲ್ಲ. ಕೆಲವು ನಮ್ಮ ಸ್ನೇಹಿತ ಕುಮ್ಮಕ್ಕಿನಿಂದ ಈ ಕೆಲಸ ಮಾಡಿದ್ದಾರೆ. ಅಧಿಕಾರ ಎನ್ನೋದು ಯಾರಿಗೂ ಶಾಶ್ವತ ಅಲ್ಲ ಎಂದು ಕುಟುಕಿದ ಜೆಡಿಎಸ್ ಮಾಜಿ ಸಚಿವ ಸಾ.ರಾ. ಮಹೇಶ್


ಮೈಸೂರು(ಅ.01):  ಕರ್ನಾಟಕವನ್ನು ನೀವು ಹಂದಿ ತರಹ ಮೇಯಲು ಇದ್ದೀರಾ? ಎಂದು ಜೆಡಿಎಸ್ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ವಾಗ್ದಾಳಿ ನಡೆಸಿದರು. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಎಡಿಜಿಪಿಯಾದರೆ ಕೊಂಬಿಲ್ಲ. ನಿಮ್ಮ ಆಸ್ತಿಯನ್ನು ಬಹಿರಂಗ ಪಡಿಸಿ. ಈತನ ವಿರುದ್ಧ ಮೇಲಾಧಿಕಾರಿಗಳು ಕ್ರಮ ವಹಿಸಬೇಕು. ಪ್ರೋಟೋಕಾಲ್ ವ್ಯವಸ್ಥೆಯೇ ಇಲ್ಲ. ಕೆಲವು ನಮ್ಮ ಸ್ನೇಹಿತ ಕುಮ್ಮಕ್ಕಿನಿಂದ ಈ ಕೆಲಸ ಮಾಡಿದ್ದಾರೆ. ಅಧಿಕಾರ ಎನ್ನೋದು ಯಾರಿಗೂ ಶಾಶ್ವತ ಅಲ್ಲ ಎಂದು ಕುಟುಕಿದರು. 

Latest Videos

undefined

ಕುಮಾರಸ್ವಾಮಿ, ಐಪಿಎಸ್‌ ಅಧಿಕಾರಿ ಜಟಾಪಟಿ: ಹಂದಿಗಳ ಜೊತೆಗೆ ಕುಸ್ತಿ ಆಡಲ್ಲ, ಎಚ್‌ಡಿಕೆಗೆ ಚಂದ್ರಶೇಖ‌ರ್ ತಿವಿತ

ಸಿಎಂಗೆ ತಮ್ಮ ಕೈಯಲ್ಲಿ ಸಚಿವ ಸಂಪುಟದ ಸದಸ್ಯರಿಗೆ ಮಾತಾಡೋಕೆ ಆಗಿಲ್ಲ. ಅದಕ್ಕೆ ಅಧಿಕಾರಿಗಳಿಂದ ಹೀಗೆ ಮಾಡಿಸುತ್ತಿದ್ದಾರೆ. ಕೇಂದ್ರ ಸಚಿವರಿಗೆ ಒಬ್ಬ ಭ್ರಷ್ಟ ಅಧಿಕಾರಿಯಿಂದ ಹೀಗೆ ಹೇಳಿಸಿದ್ದಾರೆ. ಕರ್ನಾಟಕದಲ್ಲಿ ಹಂದಿಯ ತರ ತಿಂದಿರುವ ಅಧಿಕಾರಿಯಿಂದ ಈ ಹೇಳಿಕೆ ಬಂದಿದೆ. ಕಾಂಗ್ರೆಸ್ ಗೆ ಎಂತಹ ದುರ್ದೈವ ಬಂದಿದೆ. ಅಧಿಕಾರಿಗಳನ್ನು ಇವರು ಬಳಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಕೇಂದ್ರ ಸಚಿವನಿಗೆ ಹೀಗೆ ಹೇಳಿರೋದು ಮೊದಲ ಸಾರಿ. ಕಾಂಗ್ರೆಸ್ ಸರ್ಕಾರದ ಪಾತ್ರ ಇಲ್ಲ ಅಂದಿದ್ದರೇ ಕ್ರಮ ಆಗಬೇಕಾಗಿತ್ತು. ಪರವಾಗಿ ಇದ್ದಾರೆ ಎಂದರೆ ರಾಜ್ಯ ಸರ್ಕಾರ ಇದರ ಹಿಂದೆ ಇದೆ ಎಂದು ಅವರು ಹರಿಹಾಯ್ದರು. 

ದಕ್ಷ ಅಧಿಕಾರಿ ಅಂತೀರಾ, ಇಲ್ಲಿ ಚಮಚಗಿರಿ ಮಾಡಿ ಉಳಿದುಕೊಂಡಿದ್ದೀರಾ. ಜನ ಬೀದಿಗೆ ಇಳಿದು ಹೋರಾಟ ಮಾಡುವ ಮುನ್ನ ಡಿಜಿ, ಐಜಿ ಇಲಾಖೆ ಸರಿ ಮಾಡಿ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ತುಘಲಕ್ ದರ್ಬಾರ್‌ಹೆಚ್ಚು ದಿನ ನಡೆಯೋದಿಲ್ಲ. ಹಿಸ್ಪರಿ ರಿಪಿಟ್ ಆಗುತ್ತೆ. ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದರು. ಸಿಎಂಗೆ ಇಷ್ಟ ಆದ್ರೆ ನಿಮ್ಮ ಕಾನೂನು ಸಲಹೆಗಾರನನ್ನಾಗಿ ಮಾಡಿಕೊಳ್ಳಿ. ಚಂದ್ರಶೇಖರ್‌ಗೆ ಇಷ್ಟ ಆದರೆ ಖಾಕಿ ಕಳಚಿ ರಾಜಕಾರಣಕ್ಕೆ ಬರಲಿ ನೀವು ತಿನ್ನೋದು ಸಾರ್ವಜನಿಕರ ಅನ್ನ. ಅದನ್ನು ನೆನಪು ಇಟ್ಟುಕೊಂಡು ಕೆಲಸ ಮಾಡಬೇಕು. ಮಾನನಷ್ಟ ಮೊಕದ್ದಮೆ, ಅಧಿಕಾರ ದುರುಪಯೋಗ, ಹಕ್ಕುಚ್ಯುತಿ ಈ ರೀತಿಯ ಕಾನೂನು ಹೋರಾಟಗಳು ಇವೆ. ಕುಮಾರಣ್ಣನಿಗೆ ಬೈಯಲು ನಿಮಗೆ ಆಗಲ್ವಾ ಸರ್ಕಾರಿ ಸಂಬಳ ಕೊಟ್ಟು ಕುಮಾರಣ್ಣನಿಗೆ ಬೈಯ್ಯಲು ಇಟ್ಟುಕೊಂಡಿದ್ದೀರಾ. ನಿಮಗೆ ನಾಚಿಕೆ ಆಗಬೇಕುಎಂದು ಅವರು ವಾಗ್ದಾಳಿ ನಡೆಸಿದರು. 

ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರ ಹರಿದಾಡುತ್ತಿದೆ. ಯಾವುದೇ ಲೆಟರ್ ಹೆಡ್ ಸೀಲ್ ಏನು ಇಲ್ಲ. ಇದು ಆಂತರಿಕ ಪತ್ರ. ಇದು ಸರ್ಕಾರಿ ನೌಕರ ಬರೆದಿರೋದ, ಯಾರೋ ಕಿಡಿಗೇಡಿ ಬರೆದಿರೋದ ಎಂದೂ ಗೊತ್ತಾಗುತ್ತಿಲ್ಲ. ನೌಕರ ಬರೆದಿದ್ರೆ ಸ್ಪಷ್ಟನೆ ಕೊಡಬೇಕು ಎಂದು ಅವರು ಆಗ್ರಹಿಸಿದರು. 

ಕುಮಾರಸ್ವಾಮಿ ಕೇಂದ್ರ ಮತ್ತು ರಾಜ್ಯದ ಎಲ್ಲಾ ಅಧಿಕಾರಿಗಳನ್ನು ಒಳ್ಳೆಯ ರೀತಿ ನಡೆಸಿಕೊಳ್ಳುತ್ತಾರೆ.ಅಧಿಕಾರಿಗಳಿಗೆ ಕುಮಾರಣ್ಣ ಅವರಿಂದನೋವಾಗಿದ್ಯಾ? ಅವರಿಗೆನೋವಾಗಿದ್ದರೆ ಅದಕ್ಕೊಂದು ರೀತಿ ನೀತಿ ಇದೆ. ನ್ಯಾಯಾಲಯಕ್ಕೆ ಬೇಕಿದ್ರೆ ಹೋಗಬಹುದಿತ್ತು. ಅದನ್ನು ಬಿಟ್ಟು ಸರ್ಕಾರಿ ನೌಕರ ಕೇಂದ್ರ ಸಚಿವರ ಬಗ್ಗೆ ಈ ರೀತಿ ಪತ್ರ ಹರಿಬಿಟ್ಟಿದ್ದಾರೆ ಎಂದು ಅವರು ಕಿಡಿ ಕಾರಿದರು.

ಕುಮಾರಸ್ವಾಮಿ ವಿರುದ್ಧ 'ಹಂದಿ' ಪದ ಬಳಕೆ; ಎಡಿಜಿಪಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾರ್ನ್!

ಈ  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟಿದೆ ಎಂದು ಗೊತ್ತಾಗುತ್ತದೆ. ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಮಾಡುತ್ತಿದ್ದಾರೆ. ಅಧಿಕಾರಿಗಳು ಬಹಳಷ್ಟು ಪ್ರಾಮಾಣಿಕರು ಇದ್ದಾರೆ. ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ಮೇಲೆ ಇನ್ಸ್ ಪೆಕ್ಟರ್‌ ಒಬ್ಬರು ಯಾಕೆ ಆರೋಪ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿಮ್ಮ ಐಪಿಎಸ್ ಅಧಿಕಾರ ಇರೋದು. ಐಪಿಎಸ್ ಅಧಿಕಾರಿ ಒಬ್ಬರಿಗೆ ಒಂದು ರಾಜ್ಯದಲ್ಲಿ 5 ವರ್ಷ ಮಾತ್ರ. ರಾಜ್ಯಕ್ಕೆಬಂದು 11 ವರ್ಷ ಆಗಿದೆ. ಕುಮಾರಣ್ಣ ನಿಮ್ಮಂತ ಹಲವರ ಸಂಚಿನಿಂದ ಆರೋಪಿ ಅಷ್ಟೇ, ಕುಮಾರಣ್ಣ ಅಪರಾಧಿ ಅಲ್ಲ. ನೀವು ಯಾರ ಕಾಲು ಹಿಡಿದು ರಾಜ್ಯದಲ್ಲಿ ಉಳಿದುಕೊಂಡಿದ್ದೀರಾ. ಅವರಿವರ ಮನೆಯಲ್ಲಿ ಚಮಚಗಿರಿ ಮಾಡುವ ಅಧಿಕಾರಿಗಳು ಇದ್ದಾರೆ ಎಂದು ಟೀಕಿಸಿದರು. 

ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ಮೊದಲಾದವರು ಇದ್ದರು. 

click me!