ಸಿಂಧನೂರು: ಹಸೆಮಣೆ ಏರಬೇಕಿದ್ದ ಮದುಮಗ ಅಕಾಲಿಕ ನಿಧನ

Kannadaprabha News   | Asianet News
Published : Dec 07, 2020, 12:50 PM IST
ಸಿಂಧನೂರು: ಹಸೆಮಣೆ ಏರಬೇಕಿದ್ದ ಮದುಮಗ ಅಕಾಲಿಕ ನಿಧನ

ಸಾರಾಂಶ

ಹೃದಯಘಾತದಿಂದ ಮದುಮಗ ನಿಧನ| ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ನಡೆದ ಘಟನೆ| ಭಾನುವಾರ ದೈಹಿಕ ಶಿಕ್ಷಕಿ ಶಂಕುತಲಾ ಅವರನ್ನು ಬಾಳ ಸಂಗಾತಿಯನ್ನಾಗಿ ವರಿಸಿಕೊಳ್ಳಬೇಕಾಗಿದ್ದ ವರ|   

ಸಿಂಧನೂರು(ಡಿ.07): ತಾಲೂಕಿನ ಗೊರೇಬಾಳದ ಶರಣಬಸವೇಶ್ವರ ದೇವಸ್ಥಾನದಲ್ಲಿ ಡಿ.6 ರಂದು ಭಾನುವಾರ ಮದುವೆಯಾಗಲು ಹಸೆಮಣೆ ಏರಬೇಕಿದ್ದ, ಜವಳಗೇರಾ ಗ್ರಾಮದ ಹುಲಗಪ್ಪ ಬುದ್ದಿನ್ನಿ (36) ಶನಿವಾರ ರಾತ್ರಿ ತೀವ್ರ ಹೃದಯಘಾತದಿಂದ ನಿಧನರಾಗಿದ್ದಾರೆ.

ಮದುವೆಯಾಗಿ ನವದಾಂಪತ್ಯಕ್ಕೆ ಕಾಲಿಡಬೇಕಾಗಿದ್ದ ಮದುಮಗ ಹುಲಗಪ್ಪ ಬುದ್ದಿನ್ನಿ ರಾಮತ್ನಾಳ ಗ್ರಾಮ ಪಂಚಾಯಿತಿಯಲ್ಲಿ ದ್ವೀತಿಯ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ. 

ರಾಯಚೂರು; ಬಾಲ್ಯದ ಗೆಳೆಯ.. ವರನನ್ನೇ ಕೊಲೆ ಮಾಡಿಸಿದ ಮಾಟಗಾತಿ!

ಮನೆಯಲ್ಲಿ ಮದುವೆಯ ಸಡಗರ ಹೆಚ್ಚಿತ್ತು. ಶನಿವಾರ ಮದುಮಗನನ್ನಾಗಿ ಮಾಡಲು ಮನೆಯವರೆಲ್ಲ ಸಂಭ್ರಮ ಸಡಗರದಲ್ಲಿ ಕೆಲಸ ಮಾಡುತ್ತಿದ್ದರು. ಮರುದಿನ ಭಾನುವಾರ ದೈಹಿಕ ಶಿಕ್ಷಕಿ ಶಂಕುತಲಾ ಅವರನ್ನು ಬಾಳ ಸಂಗಾತಿಯನ್ನಾಗಿ ವರಿಸಿಕೊಳ್ಳಬೇಕಾಗಿತ್ತು. ಆದರೆ, ಹುಲಗಪ್ಪ ಹೃದಯಘಾತದಿಂದ ಶನಿವಾರ ರಾತ್ರಿಯೇ ನಿಧನರಾಗಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ