ತುಮಕೂರು (ಅ.06): ಕಾಂಗ್ರೆಸ್ (Congress) ಪಕ್ಷ ಹಿಂದಿನಿಂದಲೂ ದೀನ ದಲಿತರ, ಬಡವರ, ರೈತರ, ಹಿಂದುಳಿದವರ, ಕೂಲಿಕಾರ್ಮಿಕರ ಹಾಗೂ ಶೋಷಿತರ ಪರವಾಗಿ ನಿಂತಿದೆಯೇ ಹೊರತು ಬೇರೆ ಯಾವುದೇ ಪಕ್ಷ ನಿಂತಿಲ್ಲ. ಹಾಗಾಗಿ ಇಡೀ ದೇಶದ ಮತ್ತು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr.G.Parameshwar) ಕರೆ ನೀಡಿದರು.
ತುಮಕೂರಿನ (Tumkur) ಗಿರಿಗೌಡನಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಈ ದೇಶವನ್ನು 58 ವರ್ಷಗಳ ಕಾಲ ಆಳ್ವಿಕೆ ಮಾಡಿದೆ. ಆದರೆ ಎಂದಿಗೂ ಬಡವರ, ರೈತರ, ದೀನ ದಲಿತರ ವಿರುದ್ಧ ಕೆಲಸ ಮಾಡಲಿಲ್ಲ, ಇಡೀ ದೇಶದ ಜನತೆ ಬಿಜೆಪಿಗೆ (BJP) ಓಟು ಹಾಕಿ ಗೆಲ್ಲಿಸಿದರು. ಆದರೆ ನೀವು ಈ ದೇಶಕ್ಕೆ ಸ್ವಾತಂತ್ರ್ಯ (Freedom) ತಂದು ಕೊಟ್ಟ ಮಹಾತ್ಮ ಗಾಂಧಿ (Mahathma Gandhi) ಅವರನ್ನೇ ಅವಹೇಳನ ಮಾಡುತ್ತಿರಲ್ಲ ಕಾಂಗ್ರೆಸ್ ಸರ್ಕಾರವಿದ್ದಾಗ ಪೆಟ್ರೊಲ್, ಡೀಸೆಲ್, ಗ್ಯಾಸ್ ಮತ್ತು ದಿನಸಿ ಅಗತ್ಯ ಪದಾರ್ಥಗಳ ಬೆಲೆ ಏಷ್ಟಿತ್ತು. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಎಷ್ಟಾಗಿದೆ.
ಮೈಸೂರಿನಲ್ಲಿ ಸಿದ್ದುಗೆ ಬಿಗ್ ಶಾಕ್: ಜೆಡಿಎಸ್ ಸೇರಿದ ಕಾಂಗ್ರೆಸ್ ಘಟಾನುಘಟಿ ಮುಖಂಡರು
ದೆಹಲಿಯಲ್ಲಿ (Delhi) ರೈತರು ವರ್ಷದಿಂದ ಪ್ರತಿಭಟಿಸುತ್ತಿದ್ದಾರೆ. ಅದರಿಂದ 260 ಜನ ಅಸುನೀಗಿದ್ದಾರೆ. ಆದರೂ ನೀವು ಅವರ ಪರ ನಿಂತಿಲ್ಲ, ಕೇಂದ್ರ ಸಚಿರೊಬ್ಬರ ಪುತ್ರ ರೈತರ ಮೇಲೆ ಕಾರು ಹರಿಸಿ 8 ಜನರನ್ನು ಸಾಯಿಸಿದ್ದಾರೆ. ಇದರ ಬಗ್ಗೆ ಪ್ರಿಯಾಂಕಾ ಗಾಂಧಿ ಪ್ರತಿಭಟಿಸಿರೆ ನೀವು ಬಂಧಿಸುತ್ತೀರಾ, ಇದೇ ರೀತಿ ನೀವು ಅದೇಷ್ಟು ಜನ ಹೆಣ್ಣು ಮಕ್ಕಳನ್ನು ಬಂಧಿಸುವಿರಿ ನಮ್ಮ ಕಾಂಗ್ರೆಸ್ ಪಕ್ಷದ ಹಳ್ಳಿಗಾಡಿನ ಹೆಣ್ಣು ಮಕ್ಕಳನ್ನು ಬಂಧಿಸಲು ನಿಮಗೆ ಸಾಧ್ಯವೆ ಎಂದರು.
1989ರಲ್ಲಿ ನಾನು ಮೊದಲ ಬಾರಿ ಚುನಾವಣೆಗೆ ಬಂದಾಗ ನನ್ನನ್ನು ಮಗುವಿನಂತೆ ಸಾಕಿ, ಬೆಳೆಸಿ ದೊಡ್ಡವನನ್ನಾಗಿ ಮಾಡಿದ್ದೀರಿ, ಹಾಗಾಗಿ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮತ್ತು ಇತರೆ ಜನರನ್ನು ನನ್ನ ವಿರುದ್ಧ ಏನೇ ಅಪಪ್ರಚಾರ ಮಾಡಿದರೂ ನೀವು ನನಗೆ ರಾಜಕೀಯ ಜನ್ಮ ನೀಡಿ ಆಶೀರ್ವದಿಸಿದವರು. ಹಾಗಾಗಿ ನನ್ನಲ್ಲಿ ಉಸಿರಿರುವ ತನಕ ನಿಮ್ಮ ಋಣವನ್ನು ಮರೆಯುವುದಿಲ್ಲ ಮತ್ತು ನಿಮ್ಮ ಸೇವೆಗೆ ಸದಾ ಸಿದ್ದನಿರುತ್ತೇನೆ ಎಂದರು.
ಜಿ.ಪಂ. ಮಾಜಿ ಸದಸ್ಯ ಎಚ್.ಕೆಂಚಮಾರಯ್ಯ, ಧಾರ್ಮಿಕ ಮುಖಂಡ ಎಂ.ಜಿ. ಶ್ರೀನಿವಾಸಮೂರ್ತಿ, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿದರು. ಮಧುಗಿರಿ ರಾಘವೇಂದ್ರ ಆಸ್ಪತ್ರೆ ಡಾ.ಜಿ.ಕೆ.ಜಯಾಂ, ಗ್ರಾಪಂ ಅಧ್ಯಕ್ಷೆ ಸವಿತಾ, ಉಪಾಧ್ಯಕ್ಷ ಮಂಜುಳಾ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ, ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ನಾಗ ಮಣಿ, ಎಪಿಎಂಸಿ ಸದಸ್ಯ ರಮಾಬಾಯಿ, ಗ್ರಾಪಂ ಸದಸ್ಯರಾದ ರಂಗನಾಥ್, ಕೃಷ್ಣ ನಾಯ್‌ಕ್, ಲಕ್ಷ್ಮೀಪತಿ, ಚಂದ್ರಶೇಖರ್, ಗೋವಿಂದಪ್ಪ, ಮಲ್ಲಿಕಾರ್ಜುನ ಇದ್ದರು