ಮೈಸೂರು : ದಸರಾಗೆ ರಾಜವಂಶಸ್ಥರಿಗೆ ಆಹ್ವಾನ

By Kannadaprabha News  |  First Published Oct 6, 2021, 10:55 AM IST
  • ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಗೆ ಆಹ್ವಾನ
  •  ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಮದ ಅರಮನೆಯಲ್ಲಿ ಭೇಟಿಯಾಗಿ ಅಧಿಕೃತವಾಗಿ ಆಹ್ವಾನ

ಮೈಸೂರು (ಅ.06): ನಾಡಹಬ್ಬ ದಸರಾ (Dasara) ಮಹೋತ್ಸವಕ್ಕೆ ಮೈಸೂರು (Mysuru) ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ (Pramoda Devi wadiyar) ಅವರನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ (ST somashekar) ಅವರು ಮಂಗಳವಾರ ಅರಮನೆಯಲ್ಲಿ ಭೇಟಿಯಾಗಿ ಅಧಿಕೃತವಾಗಿ ಆಹ್ವಾನಿಸಿದರು. 

ಜಿಲ್ಲಾಡಳಿತದಿಂದ ರಾಜವಂಶಸ್ಥರಿಗೆ ಫಲಪುಷ್ಪ ತಾಂಬೂಲ ನೀಡಿ ಗೌರವಿಸಿ ಆಹ್ವಾನ ನೀಡಲಾಯಿತು. ಸಚಿವರ ಆಹ್ವಾನ ಸ್ವೀಕರಿಸಿದ ಪ್ರಮೋದಾದೇವಿ ಒಡೆಯರ್‌ ಅವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

Tap to resize

Latest Videos

undefined

ಮೈಸೂರು ದಸರಾ ಹೊಸ ಗೈಡ್‌ಲೈನ್ ಬಿಡುಗಡೆ : ಏನೇನಿದೆ ರೂಲ್ಸ್?

ಈ ವೇಳೆ ಎಸ್‌.ಟಿ. ಸೋಮಶೇಖರ್‌ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿವರ್ಷದ ಪದ್ಧತಿಯಂತೆ ದಸರಾ ಮಹೋತ್ಸವಕ್ಕೆ ರಾಜವಂಶಸ್ಥರನ್ನು ಆಹ್ವಾನಿಸಲಾಯಿತು. ದಸರಾಗೆ ಪೂರ್ಣ ಸಹಕಾರ ನೀಡುವಂತೆ ಕೋರಲಾಯಿತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಅರಮನೆಯ (Palace) ಕಾರ್ಯಕ್ರಮಗಳಿಗೂ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಸಹಕಾರ ನೀಡುವಂತೆ ಅವರೂ ಕೋರಿದರು. ಅದಕ್ಕೆ ಸಂಪೂರ್ಣ ಸಹಕಾರ ಕೊಡುವುದಾಗಿ ತಿಳಿಸಲಾಗಿದೆ ಎಂದರು.

 

ನಾಡಹಬ್ಬ ದಸರಾ ಮಹೋತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಅವರನ್ನು ಇಂದು ಅಧಿಕೃತವಾಗಿ ಆಹ್ವಾನಿಸಲಾಯಿತು.ರಾಜಮಾತೆಗೆ ಫಲಪುಷ್ಪ ತಾಂಬೂಲ ನೀಡಿ ಗೌರವಿಸಿ ಆಹ್ವಾನ ನೀಡಲಾಯಿತು. ಆಹ್ವಾನ ಸ್ವೀಕರಿಸಿದ ಪ್ರಮೋದಾದೇವಿ ಅವರು ದಸರಾ ಆಚರಣೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. pic.twitter.com/1cB1JYEebx

— S T Somashekar Gowda (@STSomashekarMLA)

ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ್ ನಾಗೇಂದ್ರ, ಮೇಯರ್‌ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಇದ್ದರು.

ಉದ್ಘಾಟನೆಗೆ 400, ಜಂಬೂಸವಾರಿಗೆ 500 ಮಂದಿಗೆ ಅವಕಾಶ

ಅ.7ರಂದು ನಡೆಯಲಿರುವ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ 400 ಜನರಿಗೆ ಅವಕಾಶ ನೀಡಲಾಗಿದ್ದು 15ರಂದು ನಡೆಯಲಿರುವ ಜಂಬೂ ಸವಾರಿ ವೀಕ್ಷಣೆಗೆ 500 ಮಂದಿಗೆ ಅವಕಾಶ ನೀಡಲಾಗಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ. ಯಾವ ರೀತಿ ಅವಕಾಶ ಕಲ್ಪಿಸಬೇಕು ಚರ್ಚಿಸಿ ತೀರ್ಮಾನಿಸಲಾಗುವುದು. ಉದ್ಘಾಟನೆಯಂದು ಚಾಮುಂಡಿಬೆಟ್ಟದಲ್ಲಿ ಯಾವುದೇ ನಿರ್ಬಂಧ ಇಲ್ಲ. ದೇವರ ದರ್ಶನ ಮಾಡುವವರು ಮಾಡಬಹುದು ಎಂದು ತಿಳಿಸಿದರು.

ಭಕ್ತರ ಪ್ರವೇಶ ನಿರ್ಬಂಧ

 

ಮಹಾಲಯ ಅಮಾವಸೆ  ಹಾಗೂ ದಸರಾ ಮಹೋತ್ಸವ (Dasara Festival) ಉದ್ಘಾಟನೆ ಹಿನ್ನೆಲೆಯಲ್ಲಿ ಮೈಸೂರಿನ (Mysuru) ಚಾಮುಂಡಿಬೆಟ್ಟಕ್ಕೆ (Chamundi Hill) ಅ.5ರ ಬೆಳಗಿನ ಜಾವ 4 ರಿಂದ ಅ.7ರ ಮಧ್ಯಾಹ್ನದವರೆಗೂ ಸಾರ್ವಜನಿಕರು ಹಾಗೂ ಭಕ್ತಾದಿಗಳ ಪ್ರವೇಶ, ಸಾರ್ವಜನಿಕರ ವಾಹನಗಳ ಪ್ರವೇಶವನ್ನು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ (DC Bagadi Goutham) ಅವರು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಅ.6 ರಂದು ಮಹಾಲಯ ಅಮಾವಸೆ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಚಾಮುಂಡಿಬೆಟ್ಟಕ್ಕೆ ಆಗಮಿಸಲಿದ್ದು, ಅ.7 ರಂದು ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಪೊಲೀಸರು ಭದ್ರತಾ ಕ್ರಮವನ್ನು ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ವಿಧಿಸಲಾಗಿದೆ.

ದಸರಾಗೆ ವಿದ್ಯುತ್‌ ಬೆಳಕಿನ ಸಿಂಗಾರ...! 100 ಕಿ.ಮಿ ದೀಪಾಲಂಕಾರ

ಈ ನಿರ್ಬಂಧಿತ ಅವಧಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ (Chamundeshwari Temple) ನಡೆದು ಬಂದಿರುವ ರೂಢಿ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಾಲಯದ ಅಧಿಕಾರಿಗಳು, ಅರ್ಚಕರು, ಸಿಬ್ಬಂದಿ ಮಾತ್ರ ನಡೆಸಲು ಅನುಮತಿಸಿದೆ. ಮೆಟ್ಟಿಲು ಮಾರ್ಗವಾಗಿ ಭಕ್ತರು, ಸಾರ್ವಜನಿಕರು ಬೆಟ್ಟಕ್ಕೆ ಬರುವುದು, ದಾನಿಗಳಿಂದ ದಾಸೋಹ ವ್ಯವಸ್ಥೆ ನಿಷೇಧಿಸಿದೆ.

click me!