ತುತ್ತು ಅನ್ನಕ್ಕಾಗಿ ಬಡವರ ಪರದಾಟ: ಜೆಡಿಎಸ್‌ ನಾಯಕ YSV ದತ್ತಾ ಉಪವಾಸ ಸತ್ಯಾಗ್ರಹ

Suvarna News   | Asianet News
Published : Apr 10, 2020, 01:02 PM ISTUpdated : Apr 10, 2020, 01:29 PM IST
ತುತ್ತು ಅನ್ನಕ್ಕಾಗಿ ಬಡವರ ಪರದಾಟ: ಜೆಡಿಎಸ್‌ ನಾಯಕ YSV ದತ್ತಾ ಉಪವಾಸ ಸತ್ಯಾಗ್ರಹ

ಸಾರಾಂಶ

ಸಮಾನ ಮನಸ್ಕರೊಂದಿಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಜೆಡಿಎಸ್ ನಾಯಕ ದತ್ತಾ| ದೇಶದಲ್ಲಿ ಬಡಜನರು ಹಸಿವಿನಿಂದ ಸಾಯುತ್ತಿದ್ದಾರೆ| ಈ ಸ್ಥಿತಿಗೆ ನಾವು ಕೂಡ ಪಾಲುದಾರರಾಗಿದ್ದೇವೆ| ಪಶ್ಚಾತಾಪ, ಪ್ರಾಯಶ್ಚಿತದ ಫಲವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ: ದತ್ತಾ|  

ಚಿಕ್ಕಮಗಳೂರು(ಏ.10): ಲಾಕ್‌ಡೌನ್‌ ಹಿನ್ನಲೆಯಲ್ಲಿ ನಿರ್ಗತಿಕರು, ಬಡವರು, ವಲಸಿಗರು ಹಸಿವಿನಿಂದ ಪರದಾಡುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದು ಸಾರಲು ಜೆಡಿಎಸ್‌ ನಾಯಕ ವೈ ಎಸ್ ವಿ ದತ್ತಾ ಸೇರಿದಂತೆ ಸಮಾನ ಮನಸ್ಕರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನಗರದ ಶಂಕರಪುರದ ದಲಿತ ಮಹಿಳೆ ಸಾವಿತ್ರಮ್ಮ ಎಂಬವರ ಮನೆಯಲ್ಲಿ ಉಪವಾಸ ಆರಂಭಿಸಿರುವ ಅವರು, ಇಂದು(ಶುಕ್ರವಾರ) ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. 

ಪಕ್ಷಿಗಳ ಪರದಾಟ: ಧಾನ್ಯ ನೀಡಿ ಮಾನವೀಯತೆ ಮೆರೆದ ಸಚಿವ ಅಶೋಕ್‌

ಈ ವೇಳೆ ಮಾತನಾಡಿದ ಅವರು, ದೇಶದಲ್ಲಿ ಬಡಜನರು ಹಸಿವಿನಿಂದ ಸಾಯುತ್ತಿದ್ದಾರೆ. ಈ ಸ್ಥಿತಿಗೆ ನಾವು ಕೂಡ ಪಾಲುದಾರರಾಗಿದ್ದೇವೆ. ಪಶ್ಚಾತಾಪ, ಪ್ರಾಯಶ್ಚಿತದ ಫಲವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ವೈ ಎಸ್ ವಿ ದತ್ತಾ ಅವರಿಗೆ ಮಾಜಿ ಸಚಿವ ಬಿ ಬಿ ನಿಂಗಯ್ಯ , ಜೆಡಿಎಸ್, ಸಿಪಿಐ, ಬಿಎಸ್ ಪಿ ಮುಖಂಡರು ಸಾಥ್ ನೀಡಿದ್ದಾರೆ. 

"

PREV
click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಉಬರ್ ಆ್ಯಪ್‌ನಲ್ಲೂ ಬೆಂಗಳೂರು ಮೆಟ್ರೋ ಟಿಕೆಟ್ ಖರೀದಿ ಸೌಲಭ್ಯ, ಬುಕಿಂಗ್ ಮಾಡುವುದು ಹೇಗೆ?