ಜೆಡಿಎಸ್ ಪಕ್ಷ ಹಮ್ಮಿಗೊಂಡಿರುವ ಜನತಾ ಜಲಧಾರೆ ಸೇರಿದಂತೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಾನಸ ಪುತ್ರ ವೈ.ಎಸ್.ವಿ.ದತ್ತಾ ಸುಳಿದಿಲ್ಲ. ಹಾಗಾಗಿ ಪಕ್ಷ ಬಿಡುವ ಚಿಂತನೆಯಲ್ಲಿ ದತ್ತಾ ಇದ್ದಾರಾ ಎನ್ನುವ ಚರ್ಚೆಇದೀಗ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.04): ಜೆಡಿಎಸ್ (JDS) ಪಕ್ಷ ಹಮ್ಮಿಗೊಂಡಿರುವ ಜನತಾ ಜಲಧಾರೆ (Janata Jaladhare) ಸೇರಿದಂತೆ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ (HD Devegowda) ಮಾನಸ ಪುತ್ರ ವೈ.ಎಸ್.ವಿ.ದತ್ತಾ (YSV Datta) ಸುಳಿದಿಲ್ಲ. ಹಾಗಾಗಿ ಪಕ್ಷ ಬಿಡುವ ಚಿಂತನೆಯಲ್ಲಿ ದತ್ತಾ ಇದ್ದಾರಾ ಎನ್ನುವ ಚರ್ಚೆಇದೀಗ ರಾಜ್ಯ ರಾಜಕಾರಣದಲ್ಲಿ (Karnataka Politics) ಹರಿದಾಡುತ್ತಿದೆ. ದತ್ತಾ ಕಾಂಗ್ರೆಸ್ (Congress) ಸೇರುತ್ತಾರೆ ಎನ್ನುವ ಮಾತುಗಳು ಕೂಡ ಇದೆ.
ಇದೆಲ್ಲದಕ್ಕೂ ವೈ.ಎಸ್.ವಿ.ದತ್ತಾ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ನಾನು ಜೆಡಿಎಸ್‌ನಲ್ಲಿ ಇರುತ್ತೇನೆ ಎಂದು ಹೇಳುವುದಕ್ಕೂ ಕಾಲ ಬರಬೇಕು. ಮಾತ್ರವಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುವುದಕ್ಕೂ ಸಮಯ ಬರಬೇಕೆಂದು ಚಿಕ್ಕಮಗಳೂರಿನಲ್ಲಿ ದತ್ತಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾನಾಡಿ ಕಾಲ ಬಂದಾಗ ನನ್ನ ನಿರ್ಧಾರ ಹೇಳ್ತೇನೆ. ಎಲ್ಲದಕ್ಕೂ ಸಮಯ ಬರಬೇಕೆಂದರು. ಜೆಡಿಎಸ್ ತೊರೆಯುವ ಕುರಿತು ಮಾಧ್ಯಮದವರ ಪ್ರಶ್ನೆಯನ್ನು ನಯವಾಗಿ ತಿರಸ್ಕರಿಸಿದ ವೈ.ಎಸ್.ವಿ.ದತ್ತಾ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸುತ್ತೇನೆಂದು ಹೇಳಿದರು.
'ರಾಜ್ಯಕ್ಕೆ ಬಂದಿರೋ ಅಮಿತ್ ಶಾ ಗೃಹ ಇಲಾಖೆಯ ಅವಾಂತರ ನೋಡಲಿ'
ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು, ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿ ಪ್ರತ್ಯೇಕಿಸಿ: ಪಿಎಸ್ಐ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿ ಉತ್ತೀರ್ಣರಾದವರನ್ನು ಉಳಿಸಿಕೊಂಡು, ಅಕ್ರಮ ಎಸಗಿರುವವರನ್ನು ಕೈಬಿಟ್ಟು ಮರು ಪರೀಕ್ಷೆ ನಡೆಸಬೇಕೆಂದು ದತ್ತಾ ಸಲಹೆ ನೀಡಿದ್ದಾರೆ. ಪೊಲಿಸ್ ಇಲಾಖೆಯಲ್ಲಿ (Police Department) ಈಗಾಗಲೇ ಕೆಲಸ ನಿರ್ವಹಿಸುತ್ತಿರುವ ಜಿಲ್ಲೆಯಲ್ಲಿ 3 ಮಂದಿ ಪಿಎಸ್ಐ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಎದುರಿಸಿ ಉತ್ತೀರ್ಣಗೊಂಡಿರುವ ಕುರಿತು ಗಮನ ಸೆಳೆದಾಗ, ಆಯ್ಕೆ ಪಟ್ಟಿಯನ್ನೆ ಸಾರಸಗಟಾಗಿ ತಿರಸ್ಕರಿಸುವುದು ಸರಿಯಾದ ಕ್ರಮವಲ್ಲ ಎಂದರು. ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಟಿ ತನಿಖೆಯಿಂದ ಗೊತ್ತಾಗಿದೆ. ಅಕ್ರಮದ ಆಳ, ಅಗಲ ವ್ಯಾಪಕವಾಗಿರುವುದು ತಿಳಿದು ಬಂದಿದೆ. ಆಯ್ಕೆ ಪಟ್ಟಿಯನ್ನೆ ರದ್ದುಪಡಿಸಿ ಮತ್ತೆ ಪರೀಕ್ಷೆ ನಡೆಸಲು ಸರ್ಕಾರವು ಮುಂದಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.
ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: 3 ಕೋಟಿಯ ಬಂಗ್ಲೆ ಕಟ್ತಿದ್ದ ಬ್ಲೂಟೂತ್ ಮಂಜು..!
ಪ್ರಾಮಾಣಿಕರಿಗೆ ಅನ್ಯಾಯ: ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿದರೆ ಪ್ರಾಮಾಣಿಕರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಈ ಕುರಿತು ಸರ್ಕಾರ ಯೋಚಿಸಬೇಕಾಗಿದೆ. ಅಕ್ರಮ ಎಸಗಿರುವವರ ಸಂಖ್ಯೆ ಎಷ್ಟು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವವರ ಸಂಖ್ಯೆ ಎಷ್ಟೆಂಬುದರ ಮಾಹಿತಿಯನ್ನು ಸರ್ಕಾರ ಅಧಿಕಾರಿಗಳಿಂದ ಸುಲಭವಾಗಿ ಪಡೆದುಕೊಳ್ಳಬಹುದು ಎಂದರು. ಅಕ್ರಮದಲ್ಲಿ ಭಾಗಿಯಾದವರನ್ನು ಪ್ರತ್ಯೇಕಿಸಿ, ಪ್ರಾಮಾಣಿಕರ ತಲೆದಂಡವಾಗದಂತೆ ಸರ್ಕಾರ ನಡೆಸುವರರು ಸ್ವಲ್ಪ ಬುದ್ಧಿ ಉಪಯೋಗಿಸಿ ಪ್ರಾಮಾಣಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.