Hijab Row: ಹಿಜಾಬ್‌ಗಾಗಿ ಬೇಡಿಕೆಯಿಟ್ಟವರ ಮುಂದುವರಿದ ಗೈರು!

By Govindaraj S  |  First Published May 4, 2022, 8:51 PM IST

ಹಿಜಾಬ್‌ಗಾಗಿ ಹೈಕೋರ್ಟ್‌ಲ್ಲಿ ಕಾನೂನು ಹೋರಾಟ ನಡೆಸಿದ ಉಡುಪಿಯ ಆರು ಮಂದಿ ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆ ಬರೆದಿಲ್ಲ, ಕೇವಲ ಈ ಆರು ಮಂದಿ ಮಾತ್ರವಲ್ಲ, ಉಡುಪಿ ಜಿಲ್ಲೆಯೊಂದರಲ್ಲೇ ಇದೇ ಕಾರಣಕ್ಕೆ ಅಂದಾಜು 45 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್ 

ಉಡುಪಿ (ಮೇ.04): ಹಿಜಾಬ್‌ಗಾಗಿ (Hijab) ಹೈಕೋರ್ಟ್‌ನಲ್ಲಿ (High Court) ಕಾನೂನು ಹೋರಾಟ ನಡೆಸಿದ ಉಡುಪಿಯ ಆರು ಮಂದಿ ವಿದ್ಯಾರ್ಥಿನಿಯರು (Students) ಪಿಯುಸಿ ಪರೀಕ್ಷೆ (PUC Exam) ಬರೆದಿಲ್ಲ, ಕೇವಲ ಈ ಆರು ಮಂದಿ ಮಾತ್ರವಲ್ಲ, ಉಡುಪಿ ಜಿಲ್ಲೆಯೊಂದರಲ್ಲೇ ಇದೇ ಕಾರಣಕ್ಕೆ ಅಂದಾಜು 45 ಮಂದಿ ಮುಸ್ಲಿಂ (Muslim) ವಿದ್ಯಾರ್ಥಿನಿಯರು ಪಿಯುಸಿ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಮೂಲ್ಯ 1 ವರ್ಷದ ಶಿಕ್ಷಣವನ್ನು ಹಿಜಾಬ್‌ಗಾಗಿ ಹಾಳು ಮಾಡಿಕೊಂಡ ವಿದ್ಯಾರ್ಥಿನಿಯರ ಬಗ್ಗೆ, ಶಿಕ್ಷಣ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

Latest Videos

undefined

ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಅಲ್ಲ ಎಂದು ಹೈಕೋರ್ಟ್ ಹೇಳಿದ ನಂತರವೂ, ಹಿಜಾಬ್‌ಗಾಗಿ ಹೋರಾಟ ಮುಂದುವರಿದಿದೆ. ಹಿಜಾಬ್ ಧರಿಸದೆ ಪರೀಕ್ಷೆಯನ್ನು ಬರೆಯಲ್ಲ ಎಂದು ಆರು ಮಂದಿ ವಿದ್ಯಾರ್ಥಿನಿಯರು ಪಟ್ಟು ಹಿಡಿದು ಕುಳಿತಿದ್ದರು. ಈವರೆಗೂ ದ್ವಿತೀಯ ಪಿಯುಸಿಯ ಯಾವುದೇ ಪರೀಕ್ಷೆಗೆ ಅವರು ಹಾಜರಾಗಿಲ್ಲ. ಹಾಲ್ ಟಿಕೆಟ್ ತೆಗೆದುಕೊಂಡ ನಂತರವೂ ಪರೀಕ್ಷೆಗೆ ಗೈರಾಗುವ ಮೂಲಕ, ಶಿಕ್ಷಣಕ್ಕಿಂತಲೂ ಧರ್ಮ ಮುಖ್ಯ ಎಂದು ಸಂದೇಶ ರವಾನಿಸಿದ್ದರು. ಮೇಲ್ನೋಟಕ್ಕೆ ಕೇವಲ ಆರು ಮಂದಿ ಮಾತ್ರ ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ ಅನ್ನಿಸಿದರೂ, ಉಡುಪಿ ಜಿಲ್ಲೆ ಒಂದರಲ್ಲೇ ಹಿಜಾಬ್ ಕಾರಣಕ್ಕೆ ಸುಮಾರು 45 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

Hijab Row ಕಾಶ್ಮೀರ ತಲುಪಿತು ಹಿಜಾಬ್ ವಿವಾದ, ಶಿಕ್ಷಕಿಯರಿಗೆ ಖಡಕ್ ಸೂಚನೆ ನೀಡಿದ ಆಡಳಿತ ಮಂಡಳಿ!

ವಾಣಿಜ್ಯ ವಿಭಾಗದ ಮೊದಲ ದಿನದ ಪರೀಕ್ಷೆಗೆ 24 ಮಂದಿ ಗೈರು ಆಗಿದ್ದರೆ, ನಂತರದ ದಿನಗಳಲ್ಲಿ 17, 24 ಹೀಗೆ ಅನೇಕ ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ತಪ್ಪಿಸಿಕೊಂಡಿದ್ದಾರೆ. ವರ್ಷವಿಡಿ ಹಿಜಾಬ್ ಧರಿಸಿಯೇ ತರಗತಿಗಳಿಗೆ ಹಾಜರಾಗುತ್ತಿದ್ದ ಕೆಲ ವಿದ್ಯಾರ್ಥಿನಿಯರು ಕೂಡಾ ಇದರಲ್ಲಿ ಇದ್ದಾರೆ. ನ್ಯಾಯಾಲಯದ ತೀರ್ಪು ಬಂದ ನಂತರ ಹಿಜಾಬ್‌ಗೆ ಅವಕಾಶ ತಪ್ಪಿ ಅಂತಹವರು ತರಗತಿ ಮತ್ತು ಪರೀಕ್ಷೆ ಎರಡಕ್ಕೂ ಗೈರಾಗಿದ್ದರು. ಹಿಜಾಬ್ ಹೋರಾಟ ಆರಂಭವಾದ ನಂತರ ಅಂದಾಜು ನೂರರ ಆಸುಪಾಸು ವಿದ್ಯಾರ್ಥಿನಿಯರು ತರಗತಿಗಳಿಗೆ ಗೈರಾಗಿದ್ದರು. ಆದರೆ ಈ ಪೈಕಿ ಶೇಕಡ 50ರಷ್ಟು ಮಂದಿ ನ್ಯಾಯಾಲಯದ ತೀರ್ಪಿಗೆ ಗೌರವ ಕೊಟ್ಟು ಪರೀಕ್ಷೆಗಳಿಗೆ ಹಿಜಾಬ್ ತೆಗೆದಿರಿಸಿ ಹಾಜರಾಗಿದ್ದಾರೆ.

ಹಿಜಾಬ್‌ಗೆ ಅವಕಾಶ ಕೋರಿ ಉಡುಪಿಯ ಕೆಲ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಒಂದು ವೇಳೆ ಶೀಘ್ರ ದಿನಾಂಕ ನಿಗದಿಯಾಗಿ ತೀರ್ಪು ಹಿಜಾಬ್‌ಗಾಗಿ ಬೇಡಿಕೆ ಇಟ್ಟ ವಿದ್ಯಾರ್ಥಿನಿಯರ, ಪರವಾಗಿ ಬಂದರೆ ಪರೀಕ್ಷೆ ಬರೆಯಲು ಕೊನೆಯ ಅವಕಾಶ ಸಿಗಲಿದೆ. ದ್ವಿತೀಯ ಪಿಯುಸಿ ಫಲಿತಾಂಶ ಬಂದ ನಂತರ ಮರು ಪರೀಕ್ಷೆ ವ್ಯವಸ್ಥೆ ಮಾಡಲಾಗುತ್ತೆ, ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಇದು ಕೊನೆಯ ಅವಕಾಶವಾಗಿದ್ದು, ಅಮೂಲ್ಯ 1ವರ್ಷದ ಶಿಕ್ಷಣವನ್ನು ಕೈಬಿಡುತ್ತಾರಾ ಅಥವಾ ಮರುಪರೀಕ್ಷೆಯನ್ನಾದರೂ ಬರೆಯುತ್ತಾರಾ ಕಾದುನೋಡಬೇಕಾಗಿದೆ.

Hijab Verdict ಹಿಜಾಬ್‌ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ!

ಈಗಾಗಲೇ ಏಳು ದಿನಗಳ ಪರೀಕ್ಷೆ ಪೂರ್ಣಗೊಂಡಿದೆ, ಇನ್ನು ಕೆಲವು ದಿನಗಳ ಕಾಲ ಪರೀಕ್ಷೆ ನಡೆಯಲಿದೆ. ಬುಧವಾರ ನಡೆದ ಪರೀಕ್ಷೆಯಲ್ಲೂ, ಹಿಜಾಬ್ ಹೋರಾಟಗಾರ್ತಿಯರು ಭಾಗವಹಿಸಿಲ್ಲ. ಸಮುದಾಯ ಶೀಘ್ರ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭವಾಗುವ ನಿರೀಕ್ಷೆ ಹೊಂದಿದ್ದು, ವಿಚಾರಣೆ ಯಾವಾಗ ಆರಂಭವಾಗುತ್ತೆ ಕಾದು ನೋಡಬೇಕು.

click me!