'ಮತಕಾಗಿ ಗಡ್ಡ ಬಿಟ್ಟು ಗಿಮಿಕ್‌ ರಾಜಕಾರಣ : ಹಿಂಗಾದ್ರು ಚೆಲುವರಾಯಸ್ವಾಮಿ'

Kannadaprabha News   | Asianet News
Published : Dec 07, 2020, 11:31 AM IST
'ಮತಕಾಗಿ ಗಡ್ಡ ಬಿಟ್ಟು ಗಿಮಿಕ್‌ ರಾಜಕಾರಣ : ಹಿಂಗಾದ್ರು ಚೆಲುವರಾಯಸ್ವಾಮಿ'

ಸಾರಾಂಶ

ಎನ್‌.ಚಲುವರಾಯಸ್ವಾಮಿ ನಾಗಮಂಗಲ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಗಡ್ಡ ಬಿಟ್ಟುಕೊಂಡು ಗಿಮಿಕ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಲಾಗಿದೆ

ಮದ್ದೂರು (ಡಿ.07): ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ನಾಗಮಂಗಲ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಗಡ್ಡ ಬಿಟ್ಟುಕೊಂಡು ಗಿಮಿಕ್‌ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಸುರೇಶ್‌ ಗೌಡ ಲೇವಡಿ ಮಾಡಿದರು.

ಬಿದರಕೋಟೆ ಗ್ರಾಮದಲ್ಲಿ ನಡೆದ ಜೆಡಿಎಸ್‌ ಬೆಂಬಲಿತ ನಾಯಕರ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಲುವರಾಯಸ್ವಾಮಿ ಈ ಹಿಂದೆ ಗಡ್ಡ ಬೋಳಿಸಿಕೊಂಡು ಶಿಸ್ತುಬದ್ಧವಾಗಿ ಕ್ಷೇತ್ರಕ್ಕೆ ಬರುತ್ತಿದ್ದರು. ಈಗ ಗ್ರಾಪಂ ಚುನಾವಣೆ ಘೋಷಣೆಯಾಗಿರುವುದರಿಂದ ಗಡ್ಡಬಿಟ್ಟುಕೊಂಡು ಜನರನ್ನು ಓಲೈಸುವ ರಾಜಕಾರಣಕ್ಕೆ ಮುಂದಾಗಿದ್ದಾರೆಂದು ಕೂಹಕವಾಡಿದರು.

'ಮುಂದಿನ 6 ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಭವಿಷ್ಯ' .

ಬಿಜೆಪಿ ನಾಯಕರುಗಳ ಸಹಾಯವಿದ್ದಿದ್ದರೆ ಈಗಲೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದೆ. ಆದರೆ, ಕಾಂಗ್ರೆಸ್‌ ಸಹವಾಸ ಮಾಡಿ ಹಾಳಾದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಕೊಂಡರು.

ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ರಾಜ್ಯ ಜನತೆಗೆ ಉತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದರು. ಆದರೆ, ಕಾಂಗ್ರೆಸ್‌ನವರು ಕಾರ್ಯಕ್ರಮ ಜಾರಿಯಾಗದಂತೆ ಸಾಕಷ್ಟುಅಡ್ಡಿಪಡಿಸಿ ಕಿರುಕುಳ ನೀಡಿದ್ದಾರೆ. ಮುಖ್ಯಮಂತ್ರಿಯಾದವರಿಗೆ ಪರಮಾಧಿಕಾರ ನೀಡಬೇಕಾದ ಕಾಂಗ್ರೆಸ್‌ನವರು ಕುಮಾರಸ್ವಾಮಿ ಅವರನ್ನು ಅಧಿಕಾರ ಕೆಳಗಿಳಿಸುವ ಮೂಲಕ ಅವರೇ ಆತ್ಮವಂಚನೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ