92 ವರ್ಷದ ವೃದ್ಧೆ ಕಾಲಿಗೆ ಎರಗಿ ಆಶೀರ್ವಾದ ಪಡೆದ ದೇವೇಗೌಡರು

Suvarna News   | Asianet News
Published : Feb 07, 2020, 04:13 PM IST
92 ವರ್ಷದ ವೃದ್ಧೆ ಕಾಲಿಗೆ ಎರಗಿ ಆಶೀರ್ವಾದ ಪಡೆದ ದೇವೇಗೌಡರು

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮಂಡ್ಯಕ್ಕೆ ಭೇಟಿ ನೀಡಿದ್ದು, ಈ ವೇಳೆ 92 ವರ್ಷದ ವೃದ್ಧೆಯ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡರು. 

ಮಂಡ್ಯ (ಫೆ.07 ) : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 92 ವರ್ಷದ ವೃದ್ಧೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. 

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಸಂತಾನ ಲಕ್ಷ್ಮೀ ದೇವಾಲಯದ ಪ್ರತಿಷ್ಠಾಪನೆಗೆ ತೆರಳಿದ್ದ ವೇಳೆ ವೃದ್ಧೆಯಿಂದ ಆಶೀರ್ವಾದ ಪಡೆದರು. 

ದೇವಾಲಯದ ಕುಂಭಾಭಿಷೇದ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ವೇಳೆ ಅದೇ ಗ್ರಾಮದ 92 ವರ್ಷದ ವೃದ್ಧೆ ಕೆಂಪಮ್ಮ ಅವರಿಗೆ ಕಾಲಿಗೆ ದೊಡ್ಡಗೌಡರು ಎರಗಿದರು. 

ಕುಮಟಳ್ಳಿಗೆ ಸಚಿವ ಸ್ಥಾನ ಕೊಟ್ಟಿದ್ರೆ ಗೌರವ ಹೆಚ್ಚಾಗ್ತಾ ಇತ್ತು'..

ದೇವೇಗೌಡರು ಆಗಮಿಸಿದ್ದ ಸುದ್ದಿ ತಿಳಿದು ಅವರನ್ನು ಭೇಟಿ ಮಾಡಲು ಕೆಂಪಮ್ಮ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕಾಲಿಗೆ ಎರಗಿದ ಬಳಿಕ  ಕಾರ್ಯಕ್ರಮದ ವೇದಿಕೆಗೂ ವೃದ್ಧೆಯನ್ನು ಕರೆದು ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದರು. 

‘ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಎಂದೂ ಒಂದಾಗಿಲ್ಲ’..

ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಮಂಡ್ಯದಲ್ಲಿ ಕಳೆದ ಉಪ ಚುನಾವಣೆಯಲ್ಲಿ ಮಾತ್ರ ಕೆ ಆರ್ ಪೇಟೆ ಕ್ಚೇತ್ರವನ್ನು ಕಳೆದುಕೊಂಡು ಬಿಜೆಪಿ ಪಾಲಾಗಿತ್ತು. ಆದರೂ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ತನ್ನೇ ಆದ ಪ್ರಾಭಲ್ಯವನ್ನು ಹೊಂದಿದೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ