ರೈತರ ಖಾತೆಗೆ ಜಮಾ ಆಯ್ತು 7.1 ಕೋಟಿ ರು

By Kannadaprabha NewsFirst Published Feb 7, 2020, 3:08 PM IST
Highlights

ಯೂನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ ಜಿಲ್ಲೆಯ ರೈತರ ಖಾತೆಗೆ 7.1 ಕೋಟಿ ರು. ಹಣ ಜಮಾ ಆಗಿದೆ. 2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ರೈತರು ಇಳಿಸಿದ ವಿಮೆಗೆ ಅನುಸಾರವಾಗಿ ರೈತರಿಗೆ ಹಣ ಲಭಿಸಿದೆ. 

ಶಿರಸಿ (ಫೆ.07) : ಕಳೆದ 2016ನೇ ಸಾಲಿನ ಹೆಚ್ಚುವರಿ ವಿಮಾ ಪರಿಹಾರದ ಹಣ 7.11 ಕೋಟಿ ರು. ಯೂನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ ಜಿಲ್ಲೆಯ ರೈತರ ಖಾತೆಗೆ ಜಮಾ ಆಗಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ ತಿಳಿಸಿದ್ದಾರೆ. 

2016 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬತ್ತದ ಬೆಳೆಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ರೈತರು ಇಳಿಸಿದ ವಿಮೆಗೆ ಅನುಸಾರವಾಗಿ ಈ ಹಿಂದೆ 2017ನೇ ಸಾಲಿನಲ್ಲಿ ಯುನಿವರ್ಸಲ್ ಸೊಂಪು ಇನ್ಸೂರೆನ್ಸ್ ಕಂಪನಿಯಿಂದ 44.24 ಕೋಟಿಯಷ್ಟು ವಿಮಾ ಪರಿಹಾರದ ಹಣ ರೈತರಿಗೆ ಲಭಿಸಿದೆ. 

ಈ ವಿಮಾ ಪರಿಹಾರದ ರಖಂ ಈ ಹಿಂದೆಯೇ ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಬ್ಯಾಂಕಿನ ಮೂಲಕ ವಿಮಾ ಇಳಿಸಿದ ಕ್ಷೇತ್ರಕ್ಕೆ ಸಂಬಂಧಿಸಿ ಜಿಲ್ಲೆಯ ರೈತರಿಗೆ ಈಗ ಪುನಃ 7.11 ಕೋಟಿ ರು.ನಷ್ಟು ಹೆಚ್ಚುವರಿ ವಿಮಾ ಪರಿಹಾರದ ರಖಂ ಲಭ್ಯವಾಗಿದೆ. 

ಉತ್ತರ ಕನ್ನಡ : ಬಿಜೆಪಿ ಪಾಲಾದ ಸಹಕಾರಿ ಸಂಘಗಳು...

ಈ ಪೈಕಿ ಹಳಿಯಾಳ ತಾಲೂಕಿಗೆ ಅಂದಾಜು 1.82 ಕೋಟಿ ರು., ಮುಂಡಗೋಡ ತಾಲೂಕಿಗೆ ಅಂದಾಜು 3.16 ಕೋಟಿ, ಶಿರಸಿ ತಾಲೂಕಿಗೆ ಅಂದಾಜು 1.51 ಕೋಟಿ ಹಾಗೂ ಯಲ್ಲಾಪುರ ತಾಲೂಕಿಗೆ ಅಂದಾಜು 55 ಲಕ್ಷದಷ್ಟು ವಿಮಾ ಪರಿಹಾರದ ರಖಂ ರೈತರ ಖಾತೆಗೆ ಜಮಾ ಆಗಿದೆ. 

ಲಾರಿ ಕ್ಲೀನರ್ ಆಗಿ ಆರಂಭವಾದ ವೃತ್ತಿ ಜೀವನ ಸಚಿವ ಸ್ಥಾನದವರೆಗೆ...

ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು ಅದನ್ನು ಜಾರಿಯಲ್ಲಿ ತರಲು ಕೆಡಿಸಿಸಿ ಬ್ಯಾಂಕು ಹಗಲಿರುಳು ಶ್ರಮಿಸುತ್ತಿರುವುದರಿಂದ ಈ ರೀತಿಯಲ್ಲಿ ಬೆಳೆ ವಿಮಾ ಪರಿಹಾರ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

click me!