ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಬಿಜೆಪಿ ಸೇರ್ಪಡೆ

Kannadaprabha News   | Asianet News
Published : Oct 27, 2020, 02:37 PM IST
ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ಬಿಜೆಪಿ ಸೇರ್ಪಡೆ

ಸಾರಾಂಶ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡ ಬೆನ್ನಲ್ಲೇ ಇದೀಗ ಪಕ್ಷಾಂತರ ಪರ್ವ ಜೋರಾಗಿದೆ. 

ಮೂಡಿಗೆರೆ (ಅ.27): ಬಿಜೆಪಿಯು ಯಾವುದೇ ಭೇದ-ಭಾವ ಮಾಡದೆ ಸರ್ವರ ಏಳಿಗೆಗಾಗಿ ಶ್ರಮಿಸುವ ಪಕ್ಷ ಎಂದು ವಿಧಾನಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ದಾರದಹಳ್ಳಿ ಗ್ರಾಪಂನ ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದರು.

ಪಕ್ಷ ಸಿದ್ಧಾಂತ ಮತ್ತು ಸಾಧನೆಯ ತಳಹದಿಯಲ್ಲಿ ಬೆಳೆದು ಬಂದ ಪಕ್ಷವಾಗಿದ್ದು, ಕಾರ್ಯಕರ್ತರೇ ಪಕ್ಷದ ಜೀವಾಳ. ಹಾಗಾಗಿಯೇ ನಮ್ಮದು ವಿಶ್ವದ ಅತಿ ದೊಡ್ಡ ಪಕ್ಷವಾಗಿದ್ದು, ಯಾವುದೇ ಕಾರ್ಯಕರ್ತರ ಮನಸನ್ನು ಪಕ್ಷದ ನಾಯಕರು ಮತ್ತು ಜನಪ್ರತಿನಿಧಿಗಳು ನೋಯಿಸಬಾರದು. ಹೊಸಬರ ಸೇರ್ಪಡೆಯಿಂದ ಪಕ್ಷ ಇನ್ನಷ್ಟುಸದೃಢವಾಗುವುದಲ್ಲದೆ, ಸ್ಥಿರ ಸರ್ಕಾರ ರಚನೆಗೆ ಸಹಾಯವಾಗಲಿದ್ದು, ಈ ಮೂಲಕ ದೇಶದ ಏಳಿಗೆ ಸಾಧ್ಯ ಎಂದು ಹೇಳಿದರು.

RR ನಗರ ಉಪಚುನಾವಣೆ: ನನ್ನ ವಿರುದ್ಧ ಅಪಪ್ರಚಾರ, ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ...

ಮಂಡಲ ಅದ್ಯಕ್ಷ ರಘು ಜನ್ನಪುರ ಮಾತನಾಡಿ, ಕೊರೋನಾ ಸಂಕಷ್ಟದಲ್ಲೂ ಭಾರತ ವಿಶ್ವವೇ ಗಮನಿಸುವ ರೀತಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸಂಘಟಿಸಲು ಶ್ರಮಿಸೋಣ ಎಂದು ಹೇಳಿದರು.

ಈ ವೇಳೆ ಪಣೀಶ್‌, ಗಣೇಶ್‌ ಕೆಸವಳಲು, ರಮೇಶ್‌ ಕೆಸವಳಲು, ಕಡಿದಾಳು ಮಂಜುನಾಥ್‌ ಬಿಜೆಪಿಗೆ ಸೇರ್ಪಡೆಯಾದರು. ಮಂಡಲದಿಂದ ಜಿಲ್ಲಾ ಸಹ ಸಂಚಾಲಕರಾಗಿ ಆಯ್ಕೆಯಾದ ನಯನ ತಳವಾರ ಅವರನ್ನು ಸನ್ಮಾನಿಸಲಾಯಿತು. ತಾಪಂ ಅಧ್ಯಕ್ಷ ಕೆ.ಸಿ.ರತನ್‌, ಜಿಲ್ಲಾ ಕಾರ್ಯದರ್ಶಿ ಮನೋಜ್‌ ಹಳೆಕೋಟೆ, ಜಯಂತ ಬಿದ್ರಹಳ್ಳಿ, ವಿ.ಕೆ.ಶಿವಗೌಡ, ಚಂದ್ರೇಶ್‌ ಮಗ್ಗಲಮಕ್ಕಿ, ಪ್ರಶಾಂತ್‌, ಗಜೇಂದ್ರ, ಪಂಚಾಕ್ಷರಿ, ಶಶಿದರ್‌, ಭರತ್‌, ಅನುಪ್‌ ಕುಮಾರ್‌, ಚಂದ್ರಣ್ಣ, ಶಿವರಾಜ್‌ ಮತ್ತಿತರರಿದ್ದರು.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!