'ಮುಂದಿನ ಎಲ್ಲ ಚುನಾವಣೆಗಳನ್ನೂ ಬಿಜೆಪಿ ಗೆಲುವು ಖಚಿತ'

By Kannadaprabha News  |  First Published Oct 27, 2020, 1:47 PM IST

ಮುಂದಿನ ಎಲ್ಲಾ ಚುನಾವಣೆಗಳಲ್ಲಿ  ಬಿಜೆಪಿ ಗೆಲುವು ಖಚಿತ ಎಂದು ಭವಿಷ್ಯ ನುಡಿಯಲಾಗಿದೆ.


ಶಿವಮೊಗ್ಗ (ಅ.27): ಆರ್‌. ಆರ್‌. ನಗರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇ ರೀತಿ ಶಿರಾದಲ್ಲಿಯೂ ನೂರಕ್ಕೆ ನೂರು ನಾವು ಗೆಲುವು ಸಾಧಿಸುತ್ತೇವೆ. ಈ ಹಿಂದೆ ವಿಧಾನಸಭೆಯಲ್ಲಿಯೇ ಹೇಳಿದ್ದೆ. ಅದರಂತೆ ಎಲ್ಲಾ ಚುನಾವಣೆಗಳಲ್ಲೂ ಪಕ್ಷ ಗೆಲುವು ಸಾಧಿಸಲಿದೆ ಎಂದು ಹೇಳಿದರು.

Tap to resize

Latest Videos

ಮುಂದಿನ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಹಾಗೆಯೇ ಕೇಂದ್ರದಲ್ಲೂ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ನಡೆಸಿ ಪಕ್ಷವನ್ನು ಇನ್ನಷ್ಟುಬಲಿಷ್ಠಗೊಳಿಸಲಾಗುವುದು ಎಂದರು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ. ಜನರಿಗೆ ಸಂಕಷ್ಟಬಂದಾಗ ಹೆದರಿ ಕೈಕಟ್ಟಿಕೂರುವುದಿಲ್ಲ. ಜನರು ನೆಮ್ಮದಿಯಿಂದ ಬದುಕು ಸಾಗಿಸುವ ವಾತಾವರಣ ನಿರ್ಮಾಣ ಆಗಬೇಕಿದೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನುಡಿದರು.

'RR ನಗರದಲ್ಲಿ ಅಭಿವೃದ್ಧಿಯಾಗಿದ್ದು ಜನರದ್ದಾ? ಗೆದ್ದು ಹೋದವರದ್ದಾ'? .

ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದಾಗಿ ನೂರಾರು ಗ್ರಾಮಗಳು ಜಲಾವೃತವಾಗಿವೆ. ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿದ ಮಳೆಯಿಂದಾಗಿ ಸಾಕಷ್ಟುಅನಾಹುತವಾಗಿವೆ. ಸುಮಾರು 600 ಕ್ಕೂ ಹೆಚ್ಚಿನ ಮನೆಗಳನ್ನು ಪರಿಶೀಲನೆ ನಡೆಸಿದ್ದೇನೆ. ಅನಾಹುತವಾದ ಪ್ರತಿ ಮನೆಗೆ 25 ಸಾವಿರ ರು. ಪರಿಹಾರ ನೀಡಲು ಆದೇಶಿಸಿದ್ದೇನೆ ಎಂದು ತಿಳಿಸಿದರು.

ಒಂದು ಕಡೆ ಕೋವಿಡ್‌ ಪರೀಕ್ಷೆ, ಮತ್ತೊಂದು ಕಡೆ ನೆರೆ ಸಮಸ್ಯೆ. ಈ ನಡುವೆ ಜನರಿಗೆ ಸ್ಪಂದಿಸಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ. ಕೋವಿಡ್‌ ಹಾಗೂ ಅತಿವೃಷ್ಟಿಕಡಿಮೆಯಾಗಲಿ. ಮತ್ತೊಮ್ಮೆ ಇಂತಹ ಅನಾಹುತವಾಗದಂತೆ ಹಾಗೂ ರೈತರು ಸೇರಿದಂತೆ ರಾಜ್ಯದ ಜನತೆರ ನೆಮ್ಮದಿ ಜೀವನ ನಡೆಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

click me!