ಮೈಸೂರು ಮೇಯರ್ ಸ್ಥಾನಕ್ಕೇರಿದ ಮೊದಲ ಮುಸ್ಲಿಮ್ ಮಹಿಳೆ!

By Suvarna News  |  First Published Jan 18, 2020, 2:20 PM IST

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ತಸ್ಲಿಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈತ್ರಿ ಇರುವುದರಿಂದ ತಸ್ಲಿಮ್ ನಿರಾಯಾಸವಾಗಿ ಮೇಯರ್ ಸ್ಥಾನ ಗೆದ್ದಿದ್ದಾರೆ.


ಮೈಸೂರು(ಜ.18): ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ತಸ್ಲಿಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೈತ್ರಿ ಇರುವುದರಿಂದ ತಸ್ಲಿಮ್ ನಿರಾಯಾಸವಾಗಿ ಮೇಯರ್ ಸ್ಥಾನ ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಗೀತಾಶ್ರೀ ಯೋಗಾನಂದ ಪರವಾಗಿ, ಬಿಜೆಪಿಯ 21 ಸದಸ್ಯರು, ಶಾಸಕ ಎಲ್.ನಾಗೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಮ.ವಿ.ರಾಮಪ್ರಸಾದ್ ಮತ ಚಲಾಯಿಸಿದ್ದಾರೆ.

22 ನೇ ಅವಧಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ತಸ್ಲಿಮ್ ಆಯ್ಕೆಯಾಗಿದ್ದು, ಮೈತ್ರಿ ಅಭ್ಯರ್ಥಿ ತಸ್ಲಿಮ್ ಪರವಾಗಿ 47 ಮತಗಳು ಲಭಿಸಿದೆ. ಬಿಜೆಪಿ ಅಭ್ಯರ್ಥಿ ಗೀತಾಶ್ರೀ ಯೋಗಾನಂದ‌ಪರ 23 ಮತಗಳನ್ನು ಪಡೆದಿದ್ದಾರೆ. ತಸ್ಲಿಮ್ 22ನೇ ಅವಧಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಎಂದು ಚುನಾವಣಾ ಅಧಿಕಾರಿ ವಿ.ಯಶ್ವಂತ್ ಘೋಷಣೆ ಮಾಡಿದ್ದಾರೆ.

Tap to resize

Latest Videos

ಅಧಿಕಾರಕ್ಕಾಗಿ ಎಲ್ಲಾ ಸೈ; ಮತ್ತೆ ಮೈತ್ರಿ ಮಾಡಿಕೊಂಡ ಜೆಡಿಎಸ್- ಕೈ

ಮೈಸೂರು ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಉಪಮೇಯರ್ ಆಗಿ ಮೈತ್ರಿ ಅಭ್ಯರ್ಥಿ ಪಿ.ಶ್ರೀಧರ್ ಆಯ್ಕೆಯಾಗಿದ್ದಾರೆ. ಪಿ.ಶ್ರೀಧರ್ ಪರ 47 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಶಾಂತಮ್ಮ ಪರ 23 ಮತಗಳನ್ನು ಪಡೆದಿದ್ದಾರೆ.

ನಾಲ್ಕು ಸ್ಥಾಯಿ‌ ಸಮಿತಿ ಸದಸ್ಯರು ಆಯ್ಕೆಯಾಗಿದ್ದು, ತೆರಿಗೆಗೆ ಸುಧಾರಣೆ, ಹಣಕಾಸು ಮತ್ತು ಅಪೀಲು ಸಮಿತಿಗೆ ನಿರ್ಮಲಾ, ಸವಿತಾ, ಸೌಮ್ಯ, ಲಕ್ಷ್ಮೀ, ಅಕ್ಮಲ್ ಪಾಷಾ, ಶಮೀ ಉಲ್ಲಾ, ಜಿ‌.ಎಸ್.ಸತ್ಯರಾಜು ಆಯ್ಕೆಯಾಗಿದ್ದಾರೆ.

ಕುಡಿತದ ದಾಸನಾಗಿದ್ದ ಯುವಕನಿಗೆ ಯುವ ರೈತ ಪ್ರಶಸ್ತಿ, ಸಕ್ಸಸ್‌ಫುಲ್ ರೈತನ ಸೂಪರ್ ಸ್ಟೋರಿ

ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿಗೆ ಶೋಭಾ, ಗೋಪಿ, ಭಾಗ್ಯ, ಅಯಾಜ್ ಪಾಷಾ, ಉಷಾ, ಶಾರದಮ್ಮ, ಭುವನೇಶ್ವರಿ, ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿಗೆ ಸಯ್ಯದ್ ಅಶ್ರತ್ ಉಲ್ಲಾ, ಶ್ರೀನಿವಾಸ್, ರುಕ್ಮಿಣಿ, ರಮೇಶ್, ಅಜೀರಾ ಶೀಮಾ, ಸುನಂದ ಪಾಲನೇತ್ರ, ಪ್ರಮಿಳಾ ಭರತ್, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಶ್ವಿನಿ ಅನಂತು, ಬೇಗಂ ಪಲ್ಲವಿ, ಛಾಯಾದೇವಿ, ವೇದಾವತಿ, ಅಯೂಬ್ ಖಾನ್, ಆರಿಫ್ ಹುಸೇನ್, ಪ್ರದೀಪ್ ಚಂದ್ರ ಆಯ್ಕೆಯಾಗಿದ್ದಾರೆ. ಎಲ್ಲಾ ಸಮಿತಿಗಳಿಗೂ ತಲಾ 7 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು.

click me!