ಜೆಡಿಎಸ್ - ಬಿಜೆಪಿಯ ಮುಖಂಡರು ಕಾಂಗ್ರೆಸ್ ಸೇರ್ಪಡೆ

By Kannadaprabha News  |  First Published Oct 27, 2020, 9:48 AM IST

ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಚುನಾವಣೆ ಬೆನ್ನಲ್ಲೇ ಪಕ್ಷಾಂತರ ಪರ್ವ ಜೋರಾಗಿದೆ. 


ಕೊಪ್ಪ (ಅ.27):  ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸುಗ್ರೀವಾಜ್ಞೆಗಳ ಮೂಲಕ ಹಲವಾರು ಕಾಯ್ದೆಗಳ ತಿದ್ದುಪಡಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಹುಸಿ ಭರವಸೆ ಸೇರಿ ಬಿಜೆಪಿ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರು, ರೈತರು ಒಂದಲ್ಲ ಒಂದು ರೀತಿಯ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಪಟ್ಟಣದಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂ ಒಡೆತನ, ಬಡವರಿಗೆ ಭೂಮಿ ಹಂಚುವ ಯೋಜನೆ ಸೇರಿ ಎಲ್ಲ ವರ್ಗದವರಿಗೂ ಉಪಯೋಗವಾಗುವಂತೆ ಒಂದಲ್ಲ ಒಂದು ರೀತಿಯ ಸೌಲಭ್ಯಗಳನ್ನು ನೀಡಿದ ಕಾಂಗ್ರೆಸ್‌ ಪಕ್ಷದ ಜನಪರ ನಿಲುವುಗಳು ಪ್ರಸ್ತುತ ಜನರಿಗೆ ಅನಿವಾರ್ಯ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.

Tap to resize

Latest Videos

ಚುನಾವಣೆ ವೇಳೆ ಜಾತಿ ಡಿಕೆಶಿಯಿಂದ ಜಾತಿ ರಾಜಕಾರಣ: ಸದಾನಂದಗೌಡ

ಜೆಡಿಎಸ್‌ ಮತ್ತು ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಜೆಡಿಎಸ್‌ನ ಮದನ್‌, ಕುಸುರಿಗೆ ಸಂದೀಪ್‌, ಅರುಣ್‌ ಬಂಬೈಲ್‌, ಸಂತೋಷ್‌ ಕೂಡಿಗೆ, ನೆಲ್ಸನ್‌, ಕೂಸುಗೊಳ್ಳಿ ಬಾಲಕೃಷ್ಣ, ದಯಾನಂದ, ಉಸ್ಮಾನ್‌, ಬೆಳವಿನಕೊಡಿಗೆ ಭಾಗದಲ್ಲಿ ಬಿಜೆಪಿಯನ್ನು ಬೇರುಮಟ್ಟದಿಂದ ಬಲಗೊಳಿಸಿದ ಶ್ರೀಕಾಂತ್‌ರಾವ್‌ ಅವರನ್ನು ಶಾಸಕರು ಪಕ್ಷದ ಶಾಲು ಹೊದಿಸಿ ಕಾಂಗ್ರೆಸ್‌ಗೆ ಬರಮಾಡಿಕೊಂಡರು.

click me!