ಜೋಶಿ ಒಡೆತನದ 555 ಮಂಕಿ ಬ್ರ್ಯಾಂಡ್‌ ಪೊರಕೆ ಕಾರ್ಖಾನೆಗೆ ಬೆಂಕಿ

Kannadaprabha News   | Asianet News
Published : Oct 27, 2020, 08:33 AM IST
ಜೋಶಿ ಒಡೆತನದ 555 ಮಂಕಿ ಬ್ರ್ಯಾಂಡ್‌ ಪೊರಕೆ ಕಾರ್ಖಾನೆಗೆ ಬೆಂಕಿ

ಸಾರಾಂಶ

555 ಮಂಕಿ ಬ್ರಾಂಡ್ ಪೊರಕೆ ಕಾರ್ಖಾನೆಗೆ ಬೆಂಕಿ ಬಿದ್ದು ಸರಕುಗಳು ಭಸ್ಮವಾಗಿವೆ.

ಹುಬ್ಬಳ್ಳಿ (ಅ.27) : ನಗರದ ಹೊರವಲಯದಲ್ಲಿರುವ, ಸಚಿವ ಪ್ರಹ್ಲಾದ ಜೋಶಿ ಹಾಗೂ ದಿ.ಅನಂತ ಕುಮಾರ್‌ ಅವರ ಸಹೋದರ ನಂದಕುಮಾರ್‌ ಒಡೆತನಕ್ಕೆ ಸೇರಿದ್ದ ಪೊರಕೆ ತಯಾರಿಸುವ ಕಾರ್ಖಾನೆಯ ಗೋದಾಮಿನಲ್ಲಿ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಭಸ್ಮವಾಗಿವೆ. 

ಬಿಜೆಪಿಗೆ ಬರುತ್ತಾರಾ ಇಬ್ಬರು ಕಾಂಗ್ರೆಸ್ ನಾಯಕರು : ಪ್ರಹ್ಲಾದ್ ಜೋಶಿ ರಿಯಾಕ್ಷನ್

ಹೊರವಲಯದ ಶೆರೇವಾಡ್‌ ಗ್ರಾಮದ ಸಮೀಪವಿರುವ ವಿಭವ ಇಂಡಸ್ಟ್ರೀಸ್‌ನಲ್ಲಿ ಈ ಅನಾಹುತ ಸಂಭವಿಸಿದೆ. 555 ಮಂಕಿ ಬ್ರ್ಯಾಂಡ್‌ ಪೊರಕೆ ಹಾಗೂ ಫೀನಾಯಿಲ್‌ ಉತ್ಪಾದನೆ ಮಾಡುವ ಕಾರ್ಖಾನೆ ಇದಾಗಿತ್ತು.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಕಾರ್ಮಿಕರಾರ‍ಯರು ಇರಲಿಲ್ಲ. ಕಾರ್ಮಿಕರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಸಂಜೆ ವೇಳೆ ಕಾರ್ಖಾನೆಯ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್‌ ಶಾರ್ಟ್‌ಸಕ್ರ್ಯೂಟ್‌ ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸ ಲಾಗಿದೆ.

PREV
click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ಮಕ್ಕಳಿಗಾಗಿ ಕೊನೆಗೂ ಒಂದಾದ್ರು ಲೀಲಾ-ಮಂಜು; ಚಿನ್ನೀ, ಬಂಗಾರಿ ಫ್ಲೇವರ್ ಬಿಟ್ಟುಕೊಟ್ಟ ಸಂತೋಷ್!