ಕೈ ಮುಖಂಡನಿಂದ ಬಿಜೆಪಿ ಪರ ಬ್ಯಾಟಿಂಗ್‌! ಪಕ್ಷಾಂತರದ ಸುಳಿವು..?

Kannadaprabha News   | Asianet News
Published : Oct 27, 2020, 08:48 AM ISTUpdated : Oct 27, 2020, 09:45 AM IST
ಕೈ ಮುಖಂಡನಿಂದ ಬಿಜೆಪಿ ಪರ ಬ್ಯಾಟಿಂಗ್‌! ಪಕ್ಷಾಂತರದ ಸುಳಿವು..?

ಸಾರಾಂಶ

ಕಾಂಗ್ರೆಸ್ ಮುಖಂಡರೋರ್ವರು ಬಿಜೆಪಿ ಪರವಾಗಿ ಬ್ಯಾಟಿಂಗ್ ಮಾಡಿದ್ದು ಕೈ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಚಿಕ್ಕೋಡಿ (ಅ.27): ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆಗೆ ಕಸರತ್ತು ನಡೆಸಿದ್ದರೆ, ಇತ್ತ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. 

‘ಸುರೇಶ ಅಂಗಡಿ ಕುಟುಂಬಸ್ಥರಿಗೆ ಬಿಜೆಪಿ ಟಿಕೆಟ್‌ ನೀಡಿದರೆ ಅವರ ಪರವಾಗಿ ನಾನೇ ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. 

ಒಂದೊಂದು ಮತವೂ ಅಮೂಲ್ಯ, ಉಪಚುನಾವಣೆ ಸಂದರ್ಭ ಎಲೆಕ್ಷನ್ ಬಹಿಷ್ಕಾರ!

ನನ್ನ ಮಗನನ್ನು ಚಿಕ್ಕೋಡಿಯಲ್ಲಿ ಗೆಲ್ಲಿಸಿದಂತೆ ಬೆಳಗಾವಿಯಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಪರ ಮತಯಾಚನೆ ಮಾಡುತ್ತೇನೆ.

ಕಾಂಗ್ರೆಸ್‌ ಹೈ ಕಮಾಂಡ್‌ ಏನ್‌ ಮಾಡತಾರೆ ನೋಡೆ ಬಿಡ್ತೇನ, ನನಗೂ ಸಾಕಾಗಿದೆ’ ಎಂದು ಹೇಳಿರುವ ವಿಡಿಯೋ ಕಳೆದೆರಡು ದಿನಗಳಿಂದ ಹರಿದಾಡುತ್ತಿದೆ.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ