ಜೆಡಿಎಸ್ -ಬಿಜೆಪಿ ನಡುವೆ ಮತ್ತೊಂದು ಮೈತ್ರಿ : ಗೆದ್ದಿದ್ದು ಜೆಡಿಎಸ್‌ನವರು-ಅಧಿಕಾರ ಬಿಜೆಪಿಗೆ

Kannadaprabha News   | Asianet News
Published : Nov 21, 2020, 11:33 AM ISTUpdated : Nov 21, 2020, 11:47 AM IST
ಜೆಡಿಎಸ್ -ಬಿಜೆಪಿ ನಡುವೆ ಮತ್ತೊಂದು ಮೈತ್ರಿ : ಗೆದ್ದಿದ್ದು ಜೆಡಿಎಸ್‌ನವರು-ಅಧಿಕಾರ ಬಿಜೆಪಿಗೆ

ಸಾರಾಂಶ

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತ್ತೊಂದು ಮೈತ್ರಿ ಇದೀಗ ಸಕ್ಸಸ್ ಆಗಿದೆ. ಈ ಮೈತ್ರಿಯಲ್ಲಿ ಅಧಿಕಾರ ಬಿಜೆಪಿಗೆ ಒಲಿದಿದೆ. 

ಕೆ.ಆರ್‌. ನಗರ (ನ.21): ಮಂಡ್ಯದ ಡಿಸಿಸಿ ಬ್ಯಾಂಕ್‌ ಮಾದರಿಯಲ್ಲೇ ಕೆ.ಆರ್‌.ನಗರದ ಟಿಎಪಿಸಿಎಂಎಸ್‌ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಶುಕ್ರವಾರ ಯಶಸ್ವಿಯಾಗಿದೆ. 

ಅಧ್ಯಕ್ಷ ಹುದ್ದೆಗೆ ಬಿಜೆಪಿಯ ಎಚ್‌.ಡಿ.ಪ್ರಭಾಕರ ಜೈನ್‌ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಜೆಡಿಎಸ್‌ನ ಎಚ್‌.ಆರ್‌.ಮಹೇಶ್‌ ಆಯ್ಕೆಯಾಗಿದ್ದಾರೆ.

ರಾಜ್ಯದ ಇಬ್ಬರು ಬಿಜೆಪಿ ಮುಖಂಡರು 6 ವರ್ಷ ಉಚ್ಛಾಟನೆ ..

ಕಳೆದ ವಾರ ಟಿಎಪಿಎಸ್‌ಎಂಎಸ್‌ನ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲದಿಂದ 7 ಮಂದಿ ನಿರ್ದೇಶಕರು ಮತ್ತು ಜೆಡಿಎಸ್‌ ಬೆಂಬಲಿತ 5 ಮಂದಿ ಆಯ್ಕೆಯಾಗಿದ್ದರು. 

ಬಿಜೆಪಿಯ ಯಾವುದೇ ಸದಸ್ಯರು ಚುನಾಯಿತರಾಗದಿದ್ದರೂ ಮಂಡ್ಯದ ಡಿಸಿಸಿ ಬ್ಯಾಂಕ್‌ ಚುನಾವಣೆ ರೀತಿಯಲ್ಲೇ ಸರ್ಕಾರದಿಂದ ಟಿಎಪಿಸಿಎಂಎಸ್‌ಗೆ ನಾಮನಿರ್ದೇಶಿತ ಎಚ್‌.ಡಿ.ಪ್ರಭಾಕರ ಜೈನ್‌ ಅವರು ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದರು.

PREV
click me!

Recommended Stories

ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!