ಬೊಂಬೆನಗರಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಇದೀಗ ಬಮೂಲ್ ಉತ್ಸವದ ಜಟಾಪಟಿ ಶುರುವಾಗಿದೆ.
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್
ರಾಮನಗರ (ಫೆ.22): ಬೊಂಬೆನಗರಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಇದೀಗ ಬಮೂಲ್ ಉತ್ಸವದ ಜಟಾಪಟಿ ಶುರುವಾಗಿದೆ. ಬಮೂಲ್ ಉತ್ಸವದ ಹೆಸರಿನಲ್ಲಿ ಪ್ರೋಟೊಕಾಲ್ ಉಲ್ಲಂಘನೆಯಾಗಿದೆ ಕಾರ್ಯಕ್ರಮಕ್ಕೆ ನಾವು ಕಪ್ಪುಪಟ್ಟಿ ಪ್ರದರ್ಶನ ಮಾಡ್ತೇವೆ ಎಂದು ಹೇಳುವ ಮೂಲಕ ಎಲ್ಲದಕ್ಕೂ ಸಿದ್ದ ಎಂದು ಜೆಡಿಎಸ್ ನಾಯಕರುಗಳಿಗೆ ಬಿಜೆಪಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಬಮೂಲ್ ಉತ್ಸವ ಇದೀಗ ಗದ್ದಲ ಗಲಾಟೆಗೆ ಸಾಕ್ಷಿಯಾಗುವಂತಿದೆ.
ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಚುನಾವಣೆ ಹೊತ್ತಲ್ಲಿ ಬೊಂಬೆನಗರಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಟಾಕ್ ವಾರ್ ಮುಂದುವರಿದಿದೆ. ಇದೇ 27 ರಂದು ಚನ್ನಪಟ್ಟಣದಲ್ಲಿ ಆಯೋಜಿಸಿರುವ ಬಮೂಲ್ ಉತ್ಸವ ಇದೀಗ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ಶುರುವಾಗಿದೆ. ಬಮೂಲ್ ನಿರ್ದೇಶಕ ಜಯಮುತ್ತು ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಬಿಜೆಪಿ ಎಂಎಲ್ಸಿ ಸಿಪಿ ಯೋಗೆಶ್ವರ್ ಹೆಸರು ಹಾಗೂ ನಾಮ ನಿರ್ದೇಶಿತ ಸದಸ್ಯನಾದ ನನ್ನ ಹೆಸರು ಹಾಕದೇ ಪ್ರೋಟೊಕಾಲ್ ಉಲ್ಲಂಘನೆ ಮಾಡಿದ್ದಾರೆ.
ಅಮೂಲ್‌ನಲ್ಲಿ ನಂದಿನಿ ವಿಲೀನ ಇಲ್ಲ: ಸಚಿವ ಮಾಧುಸ್ವಾಮಿ
ನಂದಿನಿ, ಬಮೂಲ್ ಲೋಗೋ ಬಳಸದಂತೆ ಸೂಚನೆ:ಇದು ಬಮೂಲ್ ನ ಅಧಿಕೃತ ಕಾರ್ಯಕ್ರಮವಾಗದೇ ಜೆಡಿಎಸ್ ಪಕ್ಷದ ಕಾರ್ಯಕ್ರಮದ ರೀತಿ ಬಿಂಬಿತವಾಗುತ್ತಿದೆ. ಆಗಾಗಿ ಇದರ ಬಗ್ಗೆ ನಾವು ಬಮೂಲ್ ನ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಕೂಡ ಬಮೂಲ್ ಹಾಗೂ ನಂದಿನಿ ಲೋಗೊ ಬಳಸಬಾರದು ಎಂದು ಆಯೋಜಕರಿಗೆ ಸೂಚಿಸಿದ್ದಾರೆ. ಇದರ ಹೊರತಾಗಿಯೂ ಅವರು ಕಾರ್ಯಕ್ರಮ ಮಾಡಿದ್ದೇ ಆದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಬಿಜೆಪಿ ಹಾಗೂ ಹಾಲು ಉತ್ಪಾದಕರು ಕಾರ್ಯಕ್ರಮವನ್ನು ಬಹಿಷ್ಕರಿಸಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಬಮೂಲ್ ನ ನಾಮ ನಿರ್ದೇಶಿತ ಸದಸ್ಯ ಲಿಂಗೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮ ನಿಲ್ಲಸಲು ಬಿಜೆಪಿ ಕುತಂತ್ರ: ಅಂದಹಾಗೆ ಈ ಎಲ್ಲಾ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿದ ಬಮೂಲ್ ನಿರ್ದೇಶಕ ಜಯಮುತ್ತು, ಬಿಜೆಪಿ ಅವರು ಈ ಕಾರ್ಯಕ್ರಮವನ್ನು ನಿಲ್ಲಿಸುವ ದುರುದ್ದೇಶದಿಂದಲೇ ಇಷ್ಟೆಲ್ಲಾ ಪಿತೂರಿಗಳನ್ನು ಮಾಡ್ತಿದ್ದಾರೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಯಾವುದೇ ಪ್ರೋಟೊಕಾಲ್ ಉಲ್ಲಂಘನೆಯಾಗಿಲ್ಲ. ಕಳೆದ ಮೂರು ತಿಂಗಳಿಂದ ಶ್ರಮಪಟ್ಟು ಈ ಕಾರ್ಯಕ್ರಮ ಮಾಡ್ತಿದ್ದೇವೆ. ರೈತರು ಹಾಗೂ ಯುವಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾರ್ಯಕ್ರಮ ಮಾಡಲಾಗುತ್ತಿದೆ.
ನಂದಿನಿ ಬರ್ಫಿಗೆ ವಿಸಿ ಫಾರಂ ಬೆಲ್ಲ, ಕೇರಳದ ಕಲ್ಲಿಕೋಟೆ ಸಂಸ್ಥೆಗೆ ಬೆಲ್ಲ ತಯಾರಿಕೆ ಗುತ್ತಿಗೆ!
ನಾವು ಕಾನೂನಿಗೆ ತಲೆ ಬಾಗುತ್ತೇವೆ: ಕಳೆದ ಎರಡು ದಿನಗಳ ಹಿಂದೆ ಬಮೂಲ್ ನ ಎಂಡಿ ಅವರು ಲೋಗೊ ಮತ್ತು ಬಮೂಲ್ ಹೆಸರನ್ನು ಬಳಸಬಾರದು ಎಂದು ಸೂಚನೆ ನೀಡಿದ್ದಾರೆ. ನಾವು ಕಾನೂನಿಗೆ ತಲೆಬಾಗುತ್ತೇವೆ ಕಾನೂನಿನ ಅಡಿಯಲ್ಲಿ ನಾವು ಕಾರ್ಯಕ್ರಮ ಮಾಡ್ತೇವೆ. ಈಗಾಗಲೇ ಹಂಚಿರುವ ಆಹ್ವಾನ ಪತ್ರಿಕೆಯಲ್ಲಿ ಲೋಗೊ ಬಳಸಲಾಗಿದೆ. ಕಾರ್ಯಕ್ರಮದಲ್ಲಿ ಆಗಲಿ, ಮುಂದೆ ಬಳಸುವ ಬ್ಯಾನರ್ ಗಳಲ್ಲಿ ಹೆಸರು ಬಳೊಸಲ್ಲ ಎಂದು ಸ್ಪಷ್ಟನೆ ಮಾಡಿದರು.ಇನ್ನೂ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೆಗೌಡರವರು, ಮಾಜಿ ಸಿಎಂ ಕುಮಾರಸ್ವಾಮಿ, ವಿವಿಧ ಮಠಾಧೀಶರು, ಮಂತ್ರಿಗಳು ಭಾಗಿಯಾಗುತ್ತಾರೆ ಎಂದರು.
ಒಟ್ಟಾರೆ ಬೊಂಬೆನಗರಿಯಲ್ಲಿ ಒಂದಿಲ್ಲೊಂದು ವಿಷಯಕ್ಕೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವೆ ಟಾಕ್ ವಾರ್ ಮುಂದುವರಿದಿದ್ದು, ಬಮೂಲ್ ಉತ್ಸವದ ಮೂಲಕ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು 27 ರಂದು ನಡೆಯುವ ಬಮೂಲ್ ಉತ್ಸವದ ಕಡೆ ಕ್ಷೇತ್ರದ ಜನರ ಚಿತ್ತ ಇದ್ದು.