'ಉಪ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್‌ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್'

Kannadaprabha News   | Asianet News
Published : Oct 07, 2021, 12:18 PM IST
'ಉಪ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್‌ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್'

ಸಾರಾಂಶ

ಸಿಂಧಗಿ  ಹಾಗು ಹಾನಗಲ್ ಕ್ಷೇತ್ರ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿ ಕಣಕ್ಕೆ ಬಿಜೆಪಿಯನ್ನು ಬೆಂಬಲಿಸುವ  ಮೂಲಕ ಜೆಡಿಎಸ್ ಪಕ್ಷ ತನ್ನ ಜಾತ್ಯಾತೀತ ನಿಲುವನ್ನ  ಸಾಬೀತು ಪಡಿಸಿದೆ 

ರಾಮನಗರ (ಅ.07): ಸಿಂಧಗಿ  ಹಾಗು ಹಾನಗಲ್ (Sindagi Hanagal) ಕ್ಷೇತ್ರ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಬಿಜೆಪಿಯನ್ನು (BJP) ಬೆಂಬಲಿಸುವ  ಮೂಲಕ ಜೆಡಿಎಸ್ (JDS) ಪಕ್ಷ ತನ್ನ ಜಾತ್ಯಾತೀತ ನಿಲುವನ್ನ  ಸಾಬೀತು ಪಡಿಸಿದೆ ಎಂದು ವಿಧಾನ ಪರಿಷತ್  ಸದಸ್ಯ ಸಿಎಂ ಲಿಂಗಪ್ಪ (CM Lingappa) ಕಿಡಿಕಾರಿದರು. 

ಬಿಜೆಪಿ ವಿರುದ್ಧ  ಕಾಂಗ್ರೆಸ್‌ ಪಕ್ಷ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತ ನೀಡುವಂತೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಜಿ ಸಿಎಂ  ನೀಡಿರುವ ಕರೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಲಿಂಗಪ್ಪ, ಉಪ ಚುನಾವಣೆಯಲ್ಲಿ  ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್ ಪಕ್ಷ ತನ್ನ ಅಡ್ಜೆಸ್ಟ್ಮೆಂಟ್  ರಾಜಕಾರಣ ತೋರಿಸಿದೆ ಎಂದು ಟೀಕಿಸಿದರು. 

ಸಿಂದಗಿ, ಹಾನಗಲ್ ಬೈ ಎಲೆಕ್ಷನ್: ಅಲ್ಪಸಂಖ್ಯಾತರಿಗೆ ಜೆಡಿಎಸ್ ಮಣೆ, ಲೆಕ್ಕಾಚಾರ ವರ್ಕೌಟ್ ಆಗುತ್ತಾ.?

ನಗರಸಭಾ ಸದಸ್ಯ ಕೆ.ಶೇಷಾದ್ರಿ ಮಾತನಾಡಿ ಕುಮಾರಸ್ವಾಮಿ (HD Kumaraswamy) ಅವರು ತಮ್ಮ ಜೀವನದ ಉದ್ದಕ್ಕೂ ಆಷಾಡಭೂತಿ ನಡವಳಿಕೆಯನ್ನು ಅನುಸರಿಸಿದ್ದಾರೆ. ಅವರದು  ಹಿಟ್ ಅಂಡ್ ರನ್ ಕೇಸ್ (Hit and Run) ಇದ್ದಂತೆ.  ಗೊ ಹತ್ಯೆ  ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸಿತು. ಆದರೆ ಜೆಡಿಎಸ್ ಶಾಸಕರು ಸದನದಿಂದ ಹೊರನಡೆದು ಕಾಯ್ದೆ ಯಶಸ್ವಿಗೊಳಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು. 

ಕಾಂಗ್ರೆಸ್ - ಜೆಡಿಎಸ್ ವಾಕ್ಸಮರ 

 ಸಿಂದಗಿ ಹಾಗೂ ಹಾನಗಲ್ ವಿಧಾನಸಭೆ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆಯೇ ರಾಜ್ಯ ರಾಜಕಾರಣ ರಂಗೇರಿದ್ದು,  ಜೆಡಿಎಸ್ ಎರಡೂ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿ ಆ ಎರಡೂ ಕಡೆ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 

ಸಿಂಧಗಿ ಉಪಚುನಾವಣೆಗೆ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್

ಇದು ಒಂದು ರೀತಿಯಲ್ಲಿ ಬಿಜೆಪಿ ಪ್ಲಸ್ ಆಗಲಿದ್ದು, ಕಾಂಗ್ರೆಸ್‌ಗೆ ಮೈನಸ್ ಆಗಲಿದೆ ಎನ್ನುವುದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ. ಕಾಂಗ್ರೆಸ್‌ ಮುಸ್ಲಿಂ ಮತಗಳನ್ನೇ ನಂಬಿದ್ದು, ಇದೀಗ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿರುವುದು ಕೈಗೆ ಬಿಗ್ ಶಾಕ್‌ ಆದಂತಾಗಿದೆ. ಇದರಿಂದ ಕಾಂಗ್ರೆಸ್ ಮುಖಂಡರು ನಿರಂತರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿದ್ದರಮಾಯ್ಯ ಅಸಮಾಧಾನ ಹೊರಹಾಕಿದ್ದರೆ , ಅತ್ತ ಚೆಲುವರಾಯಸ್ವಾಮಿಯೂ ದಳಪಾಳಯದ ಒಳಗುಟ್ಟು ಇದು ಎಂದಿದ್ದರು. 

ಬೈಎಲೆಕ್ಷನ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಆಯ್ಕೆ ಸರಿ ಇಲ್ಲ. ಜೆಡಿಎಸ್‌ ಹೊಂದಾಣಿಕೆಯ ರಾಜಕಾರಣ ಮಾಡಿಕೊಂಡಿದೆ ಅಂತ ಕಾಂಗ್ರೆಸ್‌ ಆರೋಪಿಸಿದೆ.

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!