ಮಂಗಳೂರಿನ : ಅ.10ರಿಂದ ಪಚ್ಚನಾಡಿ-ಬೊಂದೇಲ್‌ ರಸ್ತೆ ಬಂದ್‌

Kannadaprabha News   | Asianet News
Published : Oct 07, 2021, 11:41 AM IST
ಮಂಗಳೂರಿನ :  ಅ.10ರಿಂದ ಪಚ್ಚನಾಡಿ-ಬೊಂದೇಲ್‌ ರಸ್ತೆ ಬಂದ್‌

ಸಾರಾಂಶ

ಪಚ್ಚನಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಗ ಪಡೆದಿದ್ದು, ಕೊನೆಯ ಹಂತದ ಕಾಮಗಾರಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರಿಟೀಕರಣ ಪ್ರಗತಿಯಲ್ಲಿ

ಮಂಗಳೂರು(ಅ.07):   ಪಚ್ಚನಾಡಿ ರೈಲ್ವೆ ಮೇಲ್ಸೇತುವೆ (Railway Flyover) ಕಾಮಗಾರಿ ವೇಗ ಪಡೆದಿದ್ದು, ಕೊನೆಯ ಹಂತದ ಕಾಮಗಾರಿಯಾಗಿ ಮೇಲ್ಸೇತುವೆಯಿಂದ ಮುಖ್ಯ ರಸ್ತೆಗೆ (Road) ಸಂಪರ್ಕ ಕಲ್ಪಿಸುವ ರಸ್ತೆಯ ಕಾಂಕ್ರಿಟೀಕರಣ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅ.10ರಿಂದ ಒಂದು ತಿಂಗಳ ವರೆಗೆ ತಾತ್ಕಾಲಿಕವಾಗಿ ಪಚ್ಚನಾಡಿಯಿಂದ ಬೊಂದೇಲ್‌ ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಮುಚ್ಚಲಾಗುವುದು.

ಬದಲಿ ವ್ಯವಸ್ಥೆಯಾಗಿ ಲಘು ವಾಹನ ಸಂಚಾರಕ್ಕೆ (Vehicle) ಬೊಂದೇಲ್‌ನಿಂದ ಮಂಜಲ್ಪಾದೆ, ವೆಟ್‌ ವೆಲ್, ರಾಮ ಭಜನಾ ಮಂದಿರ, ವೈದ್ಯನಾಥ ದೈವಸ್ಥಾನ ಮೂಲಕ ಪಚ್ಚನಾಡಿ ರಾಜಕಾಲುವೆ, ಮುಖ್ಯ ಬ್ರಿಡ್ಜ್‌ ಬಳಿ ಸೇರಿ ಮುಖ್ಯ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಹಾಗೂ ಘನ ವಾಹನಗಳು ನಂತೂರು, ಕುಲಶೇಖರ, ಕುಡುಪು ಆಗಿ ವಾಮಂಜೂರು ಮೂಲಕ ಸಂಚರಿಸಬಹುದು. ಆದಷ್ಟುಬೇಗ ರಸ್ತೆ ಕಾಂಕ್ರಿಟೀಕರಣಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು ಎಂದು ಫಾಲ್ಘಾಟ್‌ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ವಾಹನ ಸವಾರರೇ ಕುಡಿದು ರಸ್ತೆಗಿಳಿಯುವ ಮುನ್ನ ಎಚ್ಚರ: ಡ್ರಂಕ್‌ & ಡ್ರೈವ್‌ ತಪಾಸಣೆ ಶುರು

ಈ ಮೇಲ್ಸೇತುವೆ 27.95 ಮೀಟರ್‌ ಉದ್ದ ಹಾಗೂ 12 ಅಗಲ ಇದೆ. ಟ್ರ್ಯಾಕ್‌ ಡಬ್ಲಿಂಗ್‌ ಯೋಜನೆಯಡಿ 5 ಕೋಟಿ ರು. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಹಳೆ ಮೇಲ್ಸೇತುವೆ 9.25 ಮೀಟರ್‌ ಉದ್ದವಿದ್ದು, ಆರು ಮೀಟರ್‌ ಅಗಲ ಹೊಂದಿತ್ತು.

ಮೇಲ್ಸೇತುವೆಗೆ ಬೊಂದೇಲ್‌ನಿಂದ 150 ಮೀಟರ್‌ ಹಾಗೂ ವಾಮಂಜೂರಿನಿಂದ 100 ಮೀಟರ್‌ ದೂರ ಸಂಪರ್ಕ ಹೊಂದಿದೆ. ದಕ್ಷಿಣ ರೈಲ್ವೆಯ ಎರ್ನಾಕುಲಂ ವಿಭಾಗ ಈ ಕಾಮಗಾರಿ ನಡೆಸುತ್ತಿದೆ.

ಚಾರ್ಮಾಡಿ ಘಾಟ್ ರಹಸ್ಯ 

ಚಾರ್ಮಾಡಿ ಘಾಟ್  ದಕ್ಷಿಣ ಕನ್ನಡ ಮಲೆನಾಡಿನ ಸಂಪರ್ಕ ಸೇತುವೆ.  ಎತ್ತ ನೋಡಿದ್ರೂ ಹಸಿರ ಸಿರಿಯ ಸೊಬಗು, ಹತ್ತಿರ ಹೋಗಿ ನೋಡಿದ್ರೆ ಊಹಿಸಲು ಅಸಾಧ್ಯವಾದಂತಹ ಆಳವಾದ ಪ್ರಪಾತ. ದಟ್ಟಾರಣ್ಯದಿಂದ ಕೂಡಿರುವ ಕಣಿವೆ ಚಾರ್ಮಾಡಿ ಘಾಟ್ ಇರುವುದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ವ್ಯಾಪ್ತಿಯಲ್ಲಿ. ಮೊದಲೇ ಸಾಕಷ್ಟು ತಿರುವುಗಳಿಂದ ಕೂಡಿರುವ ಧರ್ಮಸ್ಥಳದ ಮಾರ್ಗವಾಗಿರುವ  ಕೊಟ್ಟಿಗೆರೆಹಾರ ಗ್ರಾಮದಿಂದ ಚಾರ್ಮಾಡಿವರೆಗೂ ಘಾಟ್ ಪ್ರದೇಶವನ್ನು ಕಾಣಬಹುದಾಗಿದೆ.

ಚಾರ್ಮಾಡಿ ಘಾಟ್‌ನಲ್ಲಿ ಜಲಧಾರೆಗಳ ಹೊಸ ಲೊಕ, ಕಣ್ಮನಗಳಿಗೆ ಹಬ್ಬ..!

 ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಈ ಅಂಕುಡೊಂಕಿನ ರಸ್ತೆ ಯಲ್ಲಿ ಸಾಗುತ್ತಿದ್ದರೆ ಸ್ವಚ್ಛಂದ ಪರಿಸರವನ್ನು ಸವಿಯಬಹುದು. ಮೋಡ ಮತ್ತು ಮಂಜಿನ ಸಮ್ಮಿಶ್ರಣದ ವಾತಾವರಣ ಅಹ್ಲಾದಕರ ಎನಿಸುತ್ತದ. ಒಂದೊಮ್ಮೆ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತವಾದ್ರೆ ಕರಾವಳಿ ಮತ್ತು ಮಲೆನಾಡಿನ ಸಂಪರ್ಕವೇ ಕಟ್ ಆಗಿತ್ತೆ, ಅಂತಹ ಚಾರ್ಮಾಡಿ ಘಾಟ್ ನ ರಸ್ತೆಯಲ್ಲಿ ಆಗೋಚರವಾದ ಶಕ್ತಿಯೊಂದು ಇದೆ, ಆ ಶಕ್ತಿ ಇಲ್ಲಿನ ಸಾಗುವ ಪ್ರಯಾಣಿಕರು, ಗ್ರಾಮಸ್ಥರಿಗೆ ಶ್ರೀ ರಕ್ಷೆಯಾಗಿದೆ.  

ಘಾಟಿಯೇ ಅಲ್ಲೋಲ ಕಲ್ಲೋಲವಾಗಿದ್ರೂ ಈ ಪ್ರದೇಶ ಅಲುಗಾಡಿಲ್ಲ 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ