ಜೆಡಿಎಸ್‌ ಕಾರ್ಯಕರ್ತರಿಂದ ಯೋಗೇಶ್ವರ್‌ಗೆ ಮುತ್ತಿಗೆ ಯತ್ನ

Kannadaprabha News   | Asianet News
Published : Mar 01, 2021, 10:47 AM IST
ಜೆಡಿಎಸ್‌ ಕಾರ್ಯಕರ್ತರಿಂದ ಯೋಗೇಶ್ವರ್‌ಗೆ ಮುತ್ತಿಗೆ ಯತ್ನ

ಸಾರಾಂಶ

ಯೋಗೇಶ್ವರ್‌ ವಾಸ್ತವ್ಯ ಮಾಡಿದ್ದ ಮಂಗಳೂರಿನ ಖಾಸಗಿ ಹೊಟೇಲ್‌ ಎದುರು ಪ್ರತಿಭಟನೆ| ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ ನೇತೃತ್ವದಲ್ಲಿ ಪ್ರತಿಭಟನೆ| ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದ ಸಚಿವರು| 

ಮಂಗಳೂರು(ಮಾ.01): ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೋಕರ್‌ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಅವಹೇಳನ ಮಾಡಿದ್ದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್‌ ಕಾರ್ಯಕರ್ತರು

ಭಾನುವಾರ ಸಚಿವ ಸಿ.ಪಿ.ಯೋಗೇಶ್ವರ್‌ ವಾಸ್ತವ್ಯ ಮಾಡಿದ್ದ ಮಂಗಳೂರಿನ ಖಾಸಗಿ ಹೊಟೇಲ್‌ ಎದುರು ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. 

ಅಪ್ಪನ ಸಾವಿನಲ್ಲೂ ಇಬ್ಬರ ಜೀವ ಉಳಿಸಿದ KMC ಆಸ್ಪತ್ರೆ ವೈದ್ಯ!

ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ ನೇತೃತ್ವದಲ್ಲಿ ಹೊಟೇಲ್‌ ಎದುರು ಜಮಾಯಿಸಿದ ಕಾರ್ಯಕರ್ತರು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.  ಈ ಸಂದರ್ಭ ಹೊಟೇಲ್‌ನಲ್ಲಿದ್ದ ಯೋಗೇಶ್ವರ್‌ ಪ್ರತಿಭಟನೆಯ ಮಾಹಿತಿ ಅರಿತು ಸರ್ಕಾರಿ ವಾಹನ ಬಿಟ್ಟು ಖಾಸಗಿ ವಾಹನದಲ್ಲಿ ಸರ್ಕ್ಯೂಟ್‌ ಹೌಸ್‌ಗೆ ಹೋಗಿ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. 
 

PREV
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌