ಸಮಾಜದ ಮುಖಂಡರು ಏನೇ ಬಿನ್ನಾಭಿಪ್ರಾಯ ಇದ್ದರು ಬರುವ ಡಿಸೆಂಬರ್ 12ರಂದು ಬೆಂಗಳೂರಿಗೆ ಬಂದು ನಮ್ಮ ಮಕ್ಕಳ ಸಲುವಾಗಿ ನಮ್ಮ ಶಕ್ತಿ ತೋರಿಸಲೆಬೇಕಾಗಿದೆ ಎಂದು ಆಗ್ರಹಿಸಿದ ಬಸವಜಯ ಮೃತುಂಜಯ ಸ್ವಾಮಿಜೀ
ಚಿಕ್ಕೋಡಿ(ನ.23): ಚುನಾವಣೆಯ ನೀತಿ ಸಂಹಿತೆ ಮೊದಲು 2ಎ ಮೀಸಲಾತಿಯ ನಮ್ಮ ಹಕ್ಕು ಪಡದೇ ತಿರುತ್ತೇವೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ಬಸವಜಯ ಮೃತುಂಜಯ ಸ್ವಾಮಿಜೀಯವರು ಹೇಳಿದರು.
ಅವರು ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ನಡೆದ 2ಎ ಮೀಸಲಾತಿ ಹಕ್ಕೋತ್ತಾಯ ಬೃಹತ್ ರಾರಯಲಿಯ ಬಳಿಕ ಆಯೋಜಿಸಿದ್ದ ಪಂಚ ಹಂತದ ಚಳವಳಿ ಸಭೆಯಲ್ಲಿ ಮಾತನಾಡಿ, ಸಮಾಜದ ಮುಖಂಡರು ಏನೇ ಬಿನ್ನಾಭಿಪ್ರಾಯ ಇದ್ದರು ಬರುವ ಡಿಸೆಂಬರ್ 12ರಂದು ಬೆಂಗಳೂರಿಗೆ ಬಂದು ನಮ್ಮ ಮಕ್ಕಳ ಸಲುವಾಗಿ ನಮ್ಮ ಶಕ್ತಿ ತೋರಿಸಲೆಬೇಕಾಗಿದೆ ಎಂದು ಆಗ್ರಹಿಸಿದರು.
ಗಡಿ ವಿವಾದಕ್ಕೆ ಮತ್ತೆ ಮಹಾರಾಷ್ಟ್ರದ ಕಿಚ್ಚು: ನಿಗಾಕ್ಕೆ ಇಬ್ಬರು ಸಚಿವರ ನೇಮಕ!
ಒಕ್ಕಲುತನವನ್ನೇ ನಂಬಿಕೊಂಡು ಬಂದ ಈ ಪಂಚಮಶಾಲಿ ಲಿಂಗಾಯತ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದ್ದರೂ ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಗತಿಸಿದರೂ ನಮ್ಮ ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಾಗಲಿ ಯಾವುದೇ ಮೀಸಲಾತಿ ಇಲ್ಲಿಯವರೆಗೆ ಸಿಕ್ಕಿಲ್ಲ ಎಂದರು.
ನಮ್ಮದು ಯಾವುದೇ ವ್ಯಕ್ತಿ ಅಥವಾ ಪಕ್ಷದ ವಿರುದ್ಧ ಹೋರಾಟ ಅಲ್ಲ. ರಾಜಕೀಯು ಅಲ್ಲಾ ನಮ್ಮ ಹೋರಾಟದ ಉದ್ದೇಶ ಮೀಸಲಾತಿ ಮಾತ್ರ, ನಾವೀಗ ನಿರ್ಣಾಯಕ ಹಂತದಲ್ಲಿ ಇದ್ದೇವೆ ಎಂದು ಹೇಳಿದರು. ಕಬ್ಬೂರ ಪಟ್ಟಣದ ಹನುಮಾನ ದೇವಸ್ಥಾನದಿಂದ ಆರಂಭವಾದ ಬೃಹತ್ ಕುಂಬ ಮೇಳ ಮೆರವಣಿಗೆ ಅಂಬೇಡ್ಕರ್ ವೃತ್ತ, ರಾಯಣ್ಣ ವೃತ್ತ, ಚನ್ನಮ್ಮಾ ವೃತ್ತದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅನುಭವ ಮಂಟಪದಲ್ಲಿ ಕಾರ್ಯಕ್ರಮ ಜರುಗಿತು. ಮಾಜಿ ಸಚಿವ ಶಶಿಕಾಂತ ನಾಯಕ, ದಾನಪ್ಪ ಕೋಟಬಾಗಿ, ಆರ್.ಕೆ.ಪಾಟೀಲ, ನಿಂಗಪ್ಪ ಪಿರೋಜ, ಶಿವಪ್ಪ ಹುದ್ದಾರ, ಶಿವಪ್ಪ ಚಿಮ್ಮಟ, ರಾಮಪ್ಪ ಕುಕನೂರ, ಸುಧಾಕರ ಪಾಟೀಲ, ಕಲ್ಲಪ್ಪ ಚಿಮ್ಮಟ, ಜಯಾನಂದ ಕಪಲಿ,ಶಿವಪ್ಪ ಸವದೆ ಉಪಸ್ಥಿತರಿದ್ದರು.