ವಚನಾನಂದ ಹೇಳಿಕೆಗೆ ಬೆಂಬಲಿಸಿದ ವ್ಯಕ್ತಪಡಿಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ|ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂಗೆ ಮನವಿ ಸಲ್ಲಿಸುತ್ತೇವೆ|ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗಬೇಕೆನ್ನೋದು ಶ್ರೀಪೀಠದ ಬಯಕೆ ಅಷ್ಟೇ ಅಲ್ಲ, ಪಂಚಮಸಾಲಿ ಸಮಾಜದ ಬಯಕೆ|
ಬಾಗಲಕೋಟೆ(ಜ.16): ಮಠಾಧೀಶರ ಬಳಿ ಜನಪ್ರತಿನಿಧಿಗಳು ಬೇಡಿಕೆ ಸಲ್ಲಿಸಿದಾಗ, ಸಮಾಜದ ಧ್ವನಿಯಾಗಿ ಮುಖ್ಯಮಂತ್ರಿ ಬಳಿ ನಮ್ಮ ಸಲಹೆಗಳನ್ನು ಕೇಳುತ್ತೇವೆ. ಮನವಿ ಕೊಡಬೇಕಾಗಿರೋದು ನಮ್ಮ ಕರ್ತವ್ಯವಾಗಿದೆ. ಮನವಿ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವೊಮ್ಮೆ ಮಾತಿನ ಶೈಲಿಯಲ್ಲಿ ವ್ಯತ್ಯಾಸ ಆಗುವುದು ಸಹಜ, ಮಾತಿನ ಶೈಲಿಯಲ್ಲಿ ವ್ಯತ್ಯಾಸವಾದ್ರೆ ಅದಕ್ಕೆ ವಿನಾಕಾರಣ ಗೊಂದಲ ಸೃಷ್ಟಿಸುವುದು ಬೇಡ. ಸಾಮಾಜಿಕ ನ್ಯಾಯದನುಸಾರ ಪಂಚಮಸಾಲಿ ಸಮಾಜಕ್ಕೆ ಸಚಿವ ಸ್ಥಾನ ಸಿಗಲೇಬೇಕು ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಗುರುವಾರ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎಂದು ವಚನಾನಂದ ಹೇಳಿಕೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೆಂಬಲಿಸಿದ ವ್ಯಕ್ತಪಡಿಸಿದ್ದಾರೆ.
1 ಡೈಲಾಗ್, 3 ಟಾರ್ಗೆಟ್: ಹೈಕಮಾಂಡ್, ರಾಜ್ಯ ನಾಯಕರಿಗೆ ಬಿಎಸ್‌ವೈ ಸಂದೇಶ ಸ್ಪಷ್ಟ
ಬೀಳಗಿ ಶಾಸಕ ಮುರುಗೇಶ್ ನಿರಾಣಿ ವಿವಾದಾತೀತ ವ್ಯಕ್ತಿಯಾಗಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸ್ವಾಮೀಜಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಮುರುಗೇಶ್ ನಿರಾಣಿ ಸಮಾಜದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಸಮಾಜದ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಮಾತ್ರವಲ್ಲ ಈ ಭಾಗದಲ್ಲಿ ಕೈಗಾರಿಕೆ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ, ರೈತ ಕುಟುಂಬಕ್ಕೆ ನೆರವು ನೀಡಿದ್ದಾರೆ. ನಾಡಿನ ಜನರ ಸೇವೆಗೆ ಸದಾ ಸಿದ್ದವಿರೋ ವ್ಯಕ್ತಿ ಮುರುಗೇಶ್ ನಿರಾಣಿಯಾಗಿದ್ದಾರೆ. ಹೀಗಾಗಿ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗಬೇಕೆನ್ನೋದು ಶ್ರೀಪೀಠದ ಬಯಕೆ ಅಷ್ಟೇ ಅಲ್ಲ, ಪಂಚಮಸಾಲಿ ಸಮಾಜದ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ.
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುತ್ತೇವೆ. ಮೊನ್ನೆ ನಡೆದ ಘಟನೆ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ. ಏನೋ ಒಂದು ಸಂದರ್ಭದಲ್ಲಿ ಸಮಾಜ ಗುರುಗಳು ಮಾತಿನ ಶೈಲಿಯಲ್ಲಿ ವ್ಯತ್ಯಾಸವಾಗಿ ಮಾತನಾಡಿರಬಹುದು ಎಂದು ತಿಳಿಸಿದ್ದಾರೆ.